Advertisement

ಉತ್ತರಾಖಂಡದಲ್ಲಿ ಜೋಶಿಮಠದಲ್ಲಿ ಭೂಕುಸಿತದ ಆತಂಕ

09:09 PM Jan 05, 2023 | Team Udayavani |

ಜೋಶಿಮಠ: ಉತ್ತರಾಖಂಡದ ಜೋಶಿಮಠ ಪಟ್ಟಣದಲ್ಲಿ ಸ್ಥಳೀಯರ ಮನೆಗಳು ಬಿರುಕು ಬಿಡುವ ಘಟನೆಗಳು ವರದಿಯಾಗಿವೆ.

Advertisement

ಇದರಿಂದಾಗಿ ಒಟ್ಟು 3 ಸಾವಿರ ಮಂದಿಗೆ ತೊಂದರೆಯಾಗಿದೆ. 570 ಮನೆಗಳಲ್ಲಿ ಬಿರುಕುಗಳು ಬಿಟ್ಟಿರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ವಾಸಿಸುತ್ತಿರುವರು ಆತಂಕಗೊಂಡಿದ್ದಾರೆ.

ಪ್ರತಿಕೂಲ ಹವಾಮಾನ ಮತ್ತು ವಿವಿಧ ರೀತಿಯ ಮೂಲ ಸೌಕರ್ಯ ಕಾಮಗಾರಿಗಳಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಹಲವು ಸ್ಥಳಗಳಲ್ಲಿ ಭೂಮಿಯ ಒಳಗಿನಿಂದ ನೀರು ಎದ್ದು ಬರುತ್ತಿದೆ.

ಈಗಾಗಲೇ 60 ಕುಟುಂಬಗಳ ಸದಸ್ಯರು ಸುರಕ್ಷಿತ ಸ್ಥಳ ಅರಸಿಕೊಂಡು ಬೇರೆಡೆಗೆ ತೆರಳಿದ್ದರೆ, 29 ಕುಟುಂಬಗಳಿಗೆ ತಾತ್ಕಾಲಿಕವಾಗಿ ಜಿಲ್ಲಾಡಳಿತ ಆಶ್ರಯ ನೀಡಿದೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಬುಧವಾರ ಮತ್ತು ಗುರುವಾರ ಪಂಜಿನ ಮೆರವಣಿಗೆ ನಡೆಸಿದ್ದಾರೆ.

ಕಾರಣವೇನು?
ಪ್ರಾಕೃತಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಸ್ಥಳದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. 1976ರಲ್ಲಿಯೇ ಮಿಶ್ರಾ ಸಮಿತಿ “ರಸ್ತೆ ಕಾಮಗಾರಿ, ದುರಸ್ತಿ ಸೇರಿದಂತೆ ಇನ್ನಿತರ ಯಾವುದೇ ಕಾಮಗಾರಿಗಾಗಿ ಬೃಹತ್‌ ಗಾತ್ರದ ಬಂಡೆಗಳನ್ನು ತೆಗೆಯುದು ಸೂಕ್ತವಲ್ಲ. ಅದಕ್ಕಾಗಿ ಸ್ಫೋಟಗಳನ್ನೂ ನಡೆಸುವುದು ಸರಿಯಲ್ಲ’ ಎಂದು ಸಲಹೆ ಮಾಡಿತ್ತು. 2021ರಲ್ಲಿ ಕೂಡ ಸ್ವತಂತ್ರ ಸಮಿತಿಯೊಂದು ಮತ್ತಷ್ಟು ಕಾಮಗಾರಿಗಳು ನಡೆದಲ್ಲಿ ಜೋಶಿಮಠ ಮುಳುಗಲಿದೆ ಎಂದು ಎಚ್ಚರಿಸಿತ್ತು.

Advertisement

ಜೋಶಿಮಠದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಶೀಘ್ರವೇ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸುತ್ತೇನೆ.
-ಪುಷ್ಕರ್‌ ಸಿಂಗ್‌ ಧಾಮಿ, ಉತ್ತರಾಖಂಡ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next