Advertisement
ನಗರದ ಪತ್ರಕರ್ತರ ಭವನದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಎಡಪಕ್ಷಗಳು ಹೆಚ್ಚಿನ ಸ್ಥಾನ ಗಳಿಸಬೇಕು, ದೇಶದ ಭವಿಷ್ಯವನ್ನು ಬದಲಾಯಿಸುವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
Related Articles
Advertisement
ಕಪ್ಪುಹಣದ ಬಗ್ಗೆ ದೇಶದ ಜನತೆಗೆ ಮಾಡಿದ ದೊಡ್ಡ ಅಪಮಾನವಾಗಿದೆ. ನಾನು ಭ್ರಷ್ಟಾಚಾರ ಮಾಡಲ್ಲ ಜೊತೆಗೆ ಭ್ರಷ್ಟಾಚಾರ ಮಾಡಲು ಬಿಡಲ್ಲ ಅಂದವರು ಅ ಧಿಕಾರಕ್ಕೆ ಬಂದು ಐದು ವರ್ಷವಾದರೂ ಯಾಕೆ ತರಲಿಲ್ಲ. ನಿಮಗೂ ಕಪ್ಪು ಹಣ ಇಟ್ಟವರಿಗೂ ಇರುವ ಸಂಬಂಧ ಎಂತಹದು ಎಂದು ತೋರಿಸುತ್ತದೆ ಎಂದರು.
ರೈತರಿಗೆ, ಕಾರ್ಮಿಕರಿಗೆ ಒಳ್ಳೆಯ ದಿನಗಳು ಎಂದವರು ಸ್ವಾಮಿನಾಥನ್ ಆಯೋಗ ವರದಿಯ ಆಧಾರಿತ ಬೆಂಬಲ ಬೆಲೆಯನ್ನು ಜಾರಿ ಮಾಡದ ಪರಿಣಾಮವಾಗಿ ದಿನನಿತ್ಯ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದು, ರೈತರ ಸಾಲಮನ್ನಾ ಮಾಡದೇ ಬಂಡವಾಳಗಾರರ ಸಾಲ ಮನ್ನಾ ಮಾಡುತ್ತಾರೆ ಎಂದರೆ ದೇಶದಲ್ಲಿ ಯಾರ ಪರವಾದ ಸರ್ಕಾರ ಇದೆ ಎಂದು ತಿಳಿಯುತ್ತದೆ ಎಂದರು.
ರೈತರಿಗೆ, ಬಡವರಿಗೆ ಬ್ಯಾಂಕುಗಳಲ್ಲಿ ಸಾಲ ಸಿಗದೆ, ಪರದಾಡುವ ಸ್ಥಿತಿ ಸೃಷ್ಟಿಸಿದ್ದಾರೆ. ಆದರೆ, ದೇಶದ ಅದಾನಿ, ಅಂಬಾನಿಯಂತಹ ಕಾಪೊರೇಟ್ ಸಂಸ್ಥೆಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾದ ಜೊತೆಯಲ್ಲೇ ಮತ್ತೆ ಸಾಲವನ್ನು ನೀಡುತ್ತಿದ್ದಾರೆ. ಕೇಳಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಳಿ ದುಡ್ಡು ಇಲ್ಲ ಎನ್ನುತ್ತಾರೆ ಎಂದರು.
ಇತರೆ ಪಕ್ಷಗಳಿಗೆ ಬೆಂಬಲ: ರಾಜ್ಯದಲ್ಲಿ ಸಿಪಿಐಎಂ ಚಿಕ್ಕಬಳ್ಳಾಪುರ ಸೇರಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಬೆಂಗಳೂರು ಕೇಂದ್ರದ ಕ್ಷೇತ್ರದಲ್ಲಿ ಜನಪರ ಚಳವಳಿಯ ಪ್ರಕಾಶ್ ರೈಗೆ, ತುಮಕೂರಿನಲ್ಲಿ ಸಿಪಿಐ ಪಕ್ಷಕ್ಕೆ ನಮ್ಮ ಪಕ್ಷ ಬೆಂಬಲಿಸಿದೆ. ಉಳಿದ ಕಡೆ ಬಿಜೆಪಿ ಸೋಲಿಸುವ ಪಕ್ಷಗಳಿಗೆ ನಮ್ಮ ಬೆಂಬಲವಿದೆ ಎಂದರು.
ಪ್ರಚಾರ: ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಪಿ.ಶ್ರೀನಿವಾಸ್ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಮ್ಮ ಪಕ್ಷದ ಕೇಂದ್ರ ಸಮಿತಿಯ ತೀರ್ಮಾನವನ್ನು ಜಾರಿಮಾಡುವ ಜೊತೆಗೆ ನಮ್ಮ ಪಕ್ಷಕ್ಕೂ ಬೇರೆಪಕ್ಷಕ್ಕೂ ಇರುವ ವ್ಯತ್ಯಾಸವನ್ನು ಜನರ ಮಧ್ಯೆ ಪ್ರಚಾರ ಮಾಡಬೇಕಾಗಿದೆ ಎಂದರು.
ಸಮಾವೇಶದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂ ಧಿನಗರ ನಾರಾಯಣಸ್ವಾಮಿ, ಪಿ.ಆರ್.ಸೂರ್ಯನಾರಾಯಣ, ಟಿ.ಎಂ ವೆಂಕಟೇಶ್, ಜಿಲ್ಲಾ, ತಾಲೂಕು ಸಮಿತಿ ಸದಸ್ಯರು ಭಾಗವಹಿಸಿದ್ದರು.