Advertisement

ಬಿಜೆಪಿ ಚುನಾವಣಾ ಸಭೆಯಲ್ಲಿ ಅಜಿತ್‌ ದೋವಾಲ್‌ ? ಸಿಪಿಎಂ ದೂರು

03:47 PM Jan 16, 2018 | udayavani editorial |

ಹೊಸದಿಲ್ಲಿ : ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಾಲ್‌ ಪಾಲ್ಗೊಂಡ ಬಿಜೆಪಿಯ ಚುನಾವಣಾ ಸಭೆಯ ಬಗ್ಗೆ  ನೋಟ ಹರಿಸುವಂತೆ ತ್ರಿಪುರದ ಸಿಪಿಐ(ಎಂ) ಘಟಕ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

Advertisement

ಅಜಿತ್‌ ದೋವಾಲ್‌ ಪಾಲ್ಗೊಂಡಿದ್ದ ಬಿಜೆಪಿ ಚುನಾವಣಾ ಸಭೆಯು ಜನವರಿ 14ರಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ನಿವಾಸದಲ್ಲಿ ನಡೆದಿತ್ತು ಎಂದು ಸಿಪಿಎಂ ತಿಳಿಸಿದೆ. 

ಎನ್‌ಎಸ್‌ಎ ಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಮೂಲಕ ಬಿಜೆಪಿ ಚುನಾವಣಾ ನೀತಿ ನಿಯಮಗಳನ್ನು ಮುರಿದಿದೆ. ಆದುದರಿಂದ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತ್ರಿಪುರ ಸಿಪಿಎಂ ಕಾರ್ಯದರ್ಶಿ ಬಿಜನ್‌ ಧರ್‌ ಅವರು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next