Advertisement

ಹಣದುಬ್ಬರ ಇಳಿಕೆ; ಉತ್ಪಾದನೆ ಏರಿಕೆ

11:47 AM Feb 13, 2021 | |

ನವದೆಹಲಿ: ದೇಶದಲ್ಲಿ ಲಾಕ್‌ಡೌನ್‌ ಬಳಿಕ ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿದೆ ಎಂಬ ಅಂಶ ಮತ್ತೊಮ್ಮೆ ದೃಢವಾಗಿದೆ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಹಣದುಬ್ಬರ ದರ ಪ್ರಮಾಣ ಜನವರಿಯಲ್ಲಿ ಶೇ.4.06ಕ್ಕೆ ಇಳಿಕೆಯಾಗಿದೆ. 16 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಈ ಬೆಳವಣಿಗೆ ನಡೆದಿದೆ. ತರಕಾರಿಗಳ ಬೆಲೆ ಗಳಲ್ಲಿ ಪ್ರಧಾನವಾಗಿ ಇಳಿಕೆ ಯಾ ಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಉಂಟಾಗಿದೆ. ಡಿಸೆಂಬರ್‌ನಲ್ಲಿ ಅದರ ಪ್ರಮಾಣ ಶೇ.4.59ರಷ್ಟಾ ಗಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ ತಿಳಿಸಿದೆ.

Advertisement

ಇದನ್ನೂ ಓದಿ:ವಿಚಾರಕ್ಕಾಗಿ ನನ್ನ ತಂದೆ, ಅಜ್ಜಿ ಹತ್ಯೆಯಾದ ಬಗ್ಗೆ ನನಗೆ ಹೆಮ್ಮೆಯಿದೆ: ರಾಹುಲ್ ಗಾಂಧಿ

ಜನವರಿಯಲ್ಲಿ ಆಹಾರ ವಸ್ತುಗಳ ಬೆಲೆ ಶೇ.1.89ರಷ್ಟು ಇಳಿಕೆಯಾಗಿತ್ತು. ಡಿಸೆಂಬರ್‌ 2020ಕ್ಕೆ ಮುಕ್ತಾಯದಲ್ಲಿ ದೇಶದಲ್ಲಿ ಕೈಗಾರಿಕಾ ಉತ್ಪಾದನೆ ಶೇ.1ರಷ್ಟು ಹೆಚ್ಚಾಗಿದೆ. ಇಂಡೆಕ್ಸ್‌ ಆಫ್ ಇಂಡಸ್ಟ್ರಿಯಲ್‌ ಪ್ರೊಡಕ್ಷನ್‌ ಮಾಹಿತಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.

ಉತ್ಪಾದನಾ ಕ್ಷೇತ್ರದಲ್ಲಿ ಶೇ.1.6, ಇಂಧನ ಕ್ಷೇತ್ರದಲ್ಲಿ ಶೇ.5.1ರಷ್ಟು ಏರಿಕೆಯಾಗಿದೆ. ಗಣಿ ಕ್ಷೇತ್ರದಲ್ಲಿ ಶೇ.4.8ರಷ್ಟು ಇಳಿಕೆಯಾಗಿದೆ. ಕೋವಿಡ್ ಲಾಕ್‌ ಡೌನ್‌ನಿಂದಾಗಿ ಐಐಪಿ ಪ್ರಮಾಣ 2020ರ ಮಾರ್ಚ್‌ ಬಳಿಕ ಶೇ.18.7ರಷ್ಟು ಇಳಿಕೆಯಾಗಿತ್ತು.

ಮನೆ ಜಾಗದಲ್ಲಿ 6 ಅಂತಸ್ತಿನ ಕಟ್ಟಡ!
ನಗರ ಪ್ರದೇಶಗಳಲ್ಲಿ ಖಾಲಿ ಜಮೀನು ಹೊಂದಿದ್ದರೆ, ಆಗಾಗ ಅದರತ್ತ ದೃಷ್ಟಿ ಹಾಯಿಸುವುದು ಉತ್ತಮ. ಇಲ್ಲದಿದ್ದರೆ ‌ ನಕಲಿ ದಾಖಲೆಗಳ ಮೂಲಕ ಮೋಸ ಮಾಡುವುದು ಖಚಿತ. ಅಂಥ ಪ್ರಕರಣ ಚೆನ್ನೈನಲ್ಲಿ ನಡೆದಿದೆ. ಆರು ವರ್ಷಗಳ ಕಾಲ ಕೆಲಸದ ನಿಮಿತ್ತ ಚೆನ್ನೈನ ನಾಗಲಿಂಗ ಮೂರ್ತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಇತ್ತೀಚೆಗೆ ಚೆನ್ನೈಗೆ ಅವರು ವಾಪಸಾಗಿ ನೋಡಿದಾಗ 2,400 ಚ.ಅಡಿ ಯಲ್ಲಿ ದ್ದ ಜಮೀನಿನಲ್ಲಿದ್ದ ಅ‌ವರ ಮನೆ ಮಾಯ ವಾಗಿತ್ತು, ಆರು ಆಂತಸ್ತಿನ ಕಟ್ಟಡ ಎದ್ದು ನಿಂತಿತ್ತು.

Advertisement

ಮೂರ್ತಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೆ.ರಾಜಮನ್ನಾರ್‌ (42) ಎಂಬಾತನ್ನು ಬಂಧಿಸಿದ್ದಾರೆ. ಜತೆಗೆ ವಂಚನೆ ಎಸಗಲು ಸಹಕಾರ ನೀಡಿದ ಇತರ ಐವರನ್ನೂ ಬಂಧಿಸಲಾಗಿದೆ ಮತ್ತು ಸ್ಥಳೀಯ ನ್ಯಾಯಾಲಯದಲ್ಲಿ ಅವರನ್ನು ಹಾಜರು ಪಡಿಸಿದ ವೇಳೆ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ರಾಜಮನ್ನಾರ್‌ ನಾಗಲಿಂಗಮೂರ್ತಿಯವರ ಹೆಸರನಲ್ಲಿದ್ದ ಜಮೀನಿನ ದಾಖಲೆಗಳನ್ನು ನಕಲು ಮಾಡಿ ತನ್ನ ಹೆಸರಿಗೆ ವರ್ಗಾಯಿಸಿದ್ದ. ಚೆನ್ನೈನ ಮಲಯಂಬಾಕ್ಕಮ್‌ ಎಂಬಲ್ಲಿ ನಾಗಲಿಂಗಮೂರ್ತಿ ಅವರು 1988ರಲ್ಲಿ ಜಮೀನು ಖರೀದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next