ವಿಜಯಪುರ: ಬಿಜೆಪಿ ಶಾಸಕ ಯತ್ನಾಳ ಅವರ ದ್ವನಿಗೆ ನಾನು ಸದಾಕಾಲ ದ್ವನಿಯಾಗಿರುತ್ತೇನೆ. ಭವಿಷ್ಯದ ದಿನಗಳಲ್ಲಿ ಯತ್ನಾಳ ಅವರಿಗೆ ಒಳ್ಳೆಯ ದಿನಗಳು ಬರಲಿ ಎಂದು ಆಶಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನಗರಕ್ಕೆ ಆಗಮಿಸಿ, ಶಾಸಕ ಯತ್ನಾಳ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದ ಸಚಿವ ಯೋಗೇಶ್ವರ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಯತ್ನಾಳ ಅವರ ಜೊತೆ ನನಗೆ ಉತ್ಯಮ ಸ್ನೆರಹವಿದೆ. ಆತ್ಮೀಯ ಸ್ನೇಹಿತನಾಗಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಜೊತೆಗೆ ನಾನು ಸದಾ ಅವರೊಂದಿಗೆ ಇರುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉತ್ತಮ ಅವಕಾಶ ನೀಡುವ ಆಶಾ ಭಾವನೆ ಇದೆ. ಯತ್ನಾಳ ಅವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶದ ನಿರೀಕ್ಷೆಯಲ್ಲಿ ಇದ್ದೇನೆ ಎಂದರು.
ಕಲಬುರ್ಗಿ ಜಿಲ್ಲೆಯಲ್ಲಿ ತಮಗೆ ಒಂಟಿಯಾದ ಸ್ಥಿತಿ ನಿರ್ಮಾಣ ಆಗಿಲ್ಲ. ತಮ್ಮ ಸ್ವಾಗತಕ್ಕೆ ಪಕ್ಷದ ಶಾಸಕರು, ಮುಖಂಡರು ಅಲ್ಲಿನ ವಿಮಾನ ನಿಲ್ದಾಣಕ್ಕೆ ಸ್ವಾಗತಿಸಲು ಆಗಮಿಸಲು ಬಂದಿಲ್ಲ ಎಂದ ಮಾತ್ರಕ್ಕೆ ಇದರಲ್ಲಿ ರಾಜಕೀಯ ಏನು ಇಲ್ಲ. ಕೋವಿಡ್ ಕಾರಣದಿಂದ ಕಲಬುರ್ಗಿ ಪ್ರವಾಸ ಸಂದರ್ಭದಲ್ಲಿ ಯಾರಿಗೂ ಮಾಹಿತಿ ನೀಡಿರಲಿಲ್ಲ ಎಂದು ಸಮಜಾಯಿಸಿ ನೀಡಿದರು.
ಇದನ್ನೂ ಓದಿ :BMW 5 Series ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ: ಉತ್ಕೃಷ್ಟ ಡ್ಯಾಶ್‌ಬೋರ್ಡ್, ವಿಶಾಲ ಒಳಾಂಗಣ
ಸಿಎಂ ವಿರುದ್ಧ ರೆಬಲ್ ಆದೆ ಅನ್ನೋ ಕಾರಣಕ್ಕೆ ಇಂಥ ಬೆಳವಣಿಗೆಯನ್ನು ರಾಜಕೀಯವಾಗಿ ನೋಡುವುದು ಬೇಡ, ಇದರಲ್ಲಿ ರಾಜಕೀಯವೇನೂ ಇಲ್ಲ ಎಂದು ಸಚಿವ ಯೋಗೇಶ್ವರ ಸ್ಪಷ್ಟಪಡಿಸಿದರು.