Advertisement

ಕೋವಿಡ್ ವಾರಿಯರ್ಸ್‌ಗೆ ಕೋವಿಶೀಲ್ಡ್‌ ಲಸಿಕೆ

11:49 AM Jan 17, 2021 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಮೊದಲ ಹಂತದ ಕೋವಿಡ್‌-19 ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಒಟ್ಟು 1704 ಸಿಬ್ಬಂದಿ ಫಲಾನುಭವಿಗಳಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ ಪಾಟೀಲ ತಿಳಿಸಿದರು.

Advertisement

ಪಟ್ಟಣದ ಚಂದಾಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಕೆಪಿಎಂಸಿ ಖಾಸಗಿ ನೋಂದಾಯಿತ ವೈದ್ಯರು ಮತ್ತು ಸಿಬ್ಬಂದಿ ಇವೆರಲ್ಲರೂ ಫಲಾನುಭವಿಗಳಾಗಿದ್ದಾರೆ. ಕೋವಿಡ್‌ ಲಸಿಕೆ ನೀಡುವುದಕ್ಕಾಗಿ 170 ತಂಡ ರಚನೆ ಮಾಡಲಾಗಿದೆ. ಕೋವಿಡ್‌ ವ್ಯಾಕ್ಸಿನ್‌ ಪಡೆದವರಿಗೆ ಆಸ್ಪತ್ರೆಯಲ್ಲಿ ಅರ್ಧ ಗಂಟೆವರೆಗೆ ನಿಗಾ ವಹಿಸಲಾಗುತ್ತದೆ. ಅರ್ಧ ಗಂಟೆಗೊಮ್ಮೆ ಒಬ್ಬರಿಗೆ ಲಸಿಕೆ ನೀಡಲಾಗುವುದು.

ಇದನ್ನೂ ಓದಿ:ಸ್ವತ್ಛತೆ ನಿರ್ವಹಣೆ ಲೋಪ: ನಗರಸಭೆ ಅಧಿಕಾರಿಗಳಿಗೆ ತರಾಟ

ಶನಿವಾರ ಒಟ್ಟು 100 ಜನರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು. ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮವನ್ನು ತಾಪಂ ಇಒ ಅನಿಲಕುಮಾರ ರಾಠೊಡ ಉದ್ಘಾಟಿಸಿದರು. ಸರಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿ ಕಾರಿ ಡಾ| ಸಂಜಯ ಗೊಳೆ, ಕೋವಿಡ್‌ ಜಿಲ್ಲಾ ನೋಡಲ್‌ ಅಧಿ ಕಾರಿ ಡಾ| ರಾಜಕುಮಾರ ಕುಲಕರ್ಣಿ, ಡಾ| ಜಗದೀಶಚಂದ್ರ ಬುಳ್ಳ, ಡಾ| ಫಾತಿಮಾಬೇಗಂ, ಡಾ| ಸಂತೋಷ ಪಾಟೀಲ, ಡಾ| ಬೀರಪ್ಪ ಪೂಜಾರಿ, ಸಿಡಿಪಿಒ ಗುರುಪ್ರಸಾದ, ಮುಖ್ಯಾಧಿಕಾರಿ ಅಭಯಕುಮಾರ ಹಬೀಬ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next