Advertisement
ಗೋವು ಆರೋಗ್ಯವಂತವಾಗಿದ್ದಲ್ಲಿ ನಮ್ಮ ಆರೋಗ್ಯ ಉಳಿಯುತ್ತದೆ. ಇದಕ್ಕೆ ಪತಂಜಲಿ ಅವರ ದುರ್ಗಾಮೃತ ಪೂರಕವಾಗಲಿ ಎಂದವರು ಆಶಿಸಿದರು. ಹಸುವಿಗೆ ಎರಡು ಹಿಡಿ ಆಹಾರ ಗೋವು ಸಾಕದವರೂ ಪ್ರತಿನಿತ್ಯ ಮನೆ ಮುಂದೆ ಬರುವ ಗೋವುಗಳಿಗೆ ಎರಡು ಮುಷ್ಟಿ ಪಶು ಆಹಾರ ನೀಡುವು ದರಿಂದ ಪುಣ್ಯ ಲಭಿಸುತ್ತದೆ ಎಂದು ವಿಶ್ವಪ್ರಸನ್ನ ಶ್ರೀ ಹೇಳಿದರು.
Related Articles
ಹಿಂದೆ ಹಸು ಕರು ಹಾಕಿದಾಗ ಮನೆಯ ಮಗುವನ್ನು ಕರೆದು ಇದು ನಿನ್ನ ಕರು ಎನ್ನುತ್ತಿದ್ದರು. ಇದರಿಂದಾಗಿ ಮಕ್ಕಳಿಗೆ ಕರುವಿನೊಂದಿಗೆ ಆತ್ಮೀಯ ಸಂಬಂಧ ಉಂಟಾಗಿ ಮುದ್ದಾಡಿ ಬೆಳೆಸುತ್ತಿದ್ದರು. ಇಂದಿನ ಮಕ್ಕಳಿಗೆ ಹಾಲು ಎಲ್ಲಿಂದ ದೊರೆಯುತ್ತದೆ ಎನ್ನುವುದೇ ತಿಳಿದಿಲ್ಲ. ಮೊದಲು ಸಮಸ್ಯೆಯನ್ನು ನಾವು ಅರಿತು ಮಕ್ಕಳಲ್ಲಿ ಶುದ್ಧ ಬೌದ್ಧಿಕ ಚಿಂತನೆಯನ್ನು ಉಳಿಸಬೇಕು ಎಂದು ಸಂಧ್ಯಾ ಎಸ್. ಪೈ ಅವರು ಹೇಳಿದರು.
Advertisement
ಸಂಕ್ರಮಣ ಕಾಲಹೈನುಗಾರಿಕೆ ಸಂಕ್ರಮಣ ಕಾಲದಲ್ಲಿದೆ. ಪ್ರೀತಿ, ಮಮತೆ ಮರೆಯಾಗಿ ಎಲ್ಲವೂ ಲಾಭ -ನಷ್ಟಗಳ ಲೆಕ್ಕಾಚಾರದಲ್ಲಿರುವ ಈ ಕಾಲಘಟ್ಟದಲ್ಲಿ ಹಸುಗಳನ್ನು ಬಂಧನದಲ್ಲಿಟ್ಟು ಸಾಕುವ ವಾಣಿಜ್ಯ ಹೈನುಗಾರಿಕೆಯಿಂದ ಹಲವು ಸಮಸ್ಯೆಗಳು ತಲೆದೋರಿವೆ ಎಂದು ಮಂಗಳೂರಿನ ಪ್ರಮುಖ ಪಶು ವೈದ್ಯ ಡಾ| ಪಿ. ಮನೋಹರ ಉಪಾಧ್ಯ ಹೇಳಿದರು. ಪತಂಜಲಿ ಗ್ರಾಮೋದ್ಯೋಗದ ಸಿಇಒ ಸುರೇಶ್ಚಂದ್ರ ಮಲಿಕ್ ಅವರು ಯೋಗ ಋಷಿ ರಾಮದೇವ್ ಜೀ ಹಾಗೂ ಆಚಾರ್ಯ ಬಾಲಕೃಷ್ಣ ಜೀ ಅವರ ಆಶೀರ್ವಾದದೊಂದಿಗೆ ಕಾರ್ಯಾಚರಿಸುತ್ತಿರುವ ಹರಿದ್ವಾರದ ಪತಂಜಲಿ ಗ್ರಾಮೋದ್ಯೋಗ (ನ್ಯಾಸ)ದ ವೈಶಿಷ್ಟ್ಯಗಳನ್ನು ತಿಳಿಸಿದರು. ಬಿವಿಟಿ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ. ಉಡುಪ ಉಪಸ್ಥಿತರಿದ್ದರು. ವಲಯ ಪ್ರಬಂಧಕ ಆನಂದ್ ಸೊನೊನೆ ಸ್ವಾಗತಿಸಿ, ವಾಸದೇವ ಕಾರಂತ ವಂದಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ನಿರ್ವಹಿಸಿದರು.