Advertisement

ಹಸು ಜಗತ್ತಿನ ತಾಯಿ: ವಿಶ್ವಪ್ರಸನ್ನ ಶ್ರೀ

02:25 PM Mar 16, 2018 | |

ಬ್ರಹ್ಮಾವರ : ವಿವಿಧ ಉತ್ಪನ್ನಗಳ ಮೂಲಕ ಬದುಕಿನುದ್ದಕ್ಕೂ ನಮ್ಮನ್ನು ಪೋಷಿಸುವ ಗೋವು ತಾಯಿಗೆ ಸಮಾನವಾದುದು. ಅಂತಹ ಹಸುಗಳನ್ನು ಪಾಲಿಸುವವರು ಪಿತೃ ಸಮಾನ ಎಂದು ಉಡುಪಿ ಶ್ರೀ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ಗುರುವಾರ ಬ್ರಹ್ಮಾವರ ಸಿಟಿ ಸೆಂಟರ್‌ನಲ್ಲಿ ಪತಂಜಲಿಯವರ ದುರ್ಗಾಮೃತ ಪಶು ಆಹಾರವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

Advertisement

ಗೋವು ಆರೋಗ್ಯವಂತವಾಗಿದ್ದಲ್ಲಿ ನಮ್ಮ ಆರೋಗ್ಯ ಉಳಿಯುತ್ತದೆ. ಇದಕ್ಕೆ ಪತಂಜಲಿ ಅವರ ದುರ್ಗಾಮೃತ ಪೂರಕವಾಗಲಿ ಎಂದವರು ಆಶಿಸಿದರು. ಹಸುವಿಗೆ ಎರಡು ಹಿಡಿ ಆಹಾರ ಗೋವು ಸಾಕದವರೂ ಪ್ರತಿನಿತ್ಯ ಮನೆ ಮುಂದೆ ಬರುವ ಗೋವುಗಳಿಗೆ ಎರಡು ಮುಷ್ಟಿ ಪಶು ಆಹಾರ ನೀಡುವು ದರಿಂದ ಪುಣ್ಯ ಲಭಿಸುತ್ತದೆ ಎಂದು ವಿಶ್ವಪ್ರಸನ್ನ ಶ್ರೀ ಹೇಳಿದರು.

ರಾಸಾಯನಿಕ ಮುಕ್ತ ಆಹಾರ 1845ರ ವರೆಗೆ ಪ್ರಪಂಚದಲ್ಲಿ ರಾಸಾಯನಿಕ ಎಂಬುದೇ ಇರಲಿಲ್ಲ. ಎರಡನೇ  ಹಾಯುದ್ಧದ ಅನಂತರ ಶಸ್ತ್ರಾಸ್ತ್ರ ತಯಾರಿ ಕಾರ್ಖಾನೆಗಳು ಖಾಲಿಯಾಗಿ ರಾಸಾಯನಿಕಗಳ ತಯಾರಿ ಪ್ರಾರಂಭಿಸಿದವು. ಭಾರತ ಅದಕ್ಕೆ ಮಾರುಕಟ್ಟೆಯಾಯಿತು. ಆದರೆ ತಂತ್ರಾದನಂತರವೂ ರಾಸಾಯನಿಕ ಬಳಸುವ ವ್ಯವಸಾಯ ಪದ್ಧತಿ ಬದಲಾಗದೆ ಈಗ ದುಷ್ಪರಿಣಾಮ ಎದುರಿಸುತ್ತಿದ್ದೇವೆ ಎಂದು ಅಧ್ಯಕ್ಷತೆ ವಹಿಸಿದ್ದ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌. ಪೈ ಅವರು ಹೇಳಿದರು.

ನಮ್ಮ ಜೀವನ ಶೈಲಿ ರೋಗಗಳಿಗೆ ಮೂಲವಾಗುತ್ತಿದೆ. ಆದ್ದರಿಂದ ಪ್ರಾಚೀನ ವ್ಯವಸಾಯ ಪದ್ಧತಿ, ಪರಿಸರ ಜನರ ನಡುವಿನ ಸಂಬಂಧ ಉಳಿಸೋಣ ಎಂದರು.

ಕರು- ಮಗು!
ಹಿಂದೆ ಹಸು ಕರು ಹಾಕಿದಾಗ ಮನೆಯ ಮಗುವನ್ನು ಕರೆದು ಇದು ನಿನ್ನ ಕರು ಎನ್ನುತ್ತಿದ್ದರು. ಇದರಿಂದಾಗಿ ಮಕ್ಕಳಿಗೆ ಕರುವಿನೊಂದಿಗೆ ಆತ್ಮೀಯ ಸಂಬಂಧ ಉಂಟಾಗಿ ಮುದ್ದಾಡಿ ಬೆಳೆಸುತ್ತಿದ್ದರು. ಇಂದಿನ ಮಕ್ಕಳಿಗೆ ಹಾಲು ಎಲ್ಲಿಂದ ದೊರೆಯುತ್ತದೆ ಎನ್ನುವುದೇ ತಿಳಿದಿಲ್ಲ. ಮೊದಲು ಸಮಸ್ಯೆಯನ್ನು ನಾವು ಅರಿತು ಮಕ್ಕಳಲ್ಲಿ ಶುದ್ಧ ಬೌದ್ಧಿಕ ಚಿಂತನೆಯನ್ನು ಉಳಿಸಬೇಕು ಎಂದು ಸಂಧ್ಯಾ ಎಸ್‌. ಪೈ ಅವರು ಹೇಳಿದರು.

Advertisement

ಸಂಕ್ರಮಣ ಕಾಲ
ಹೈನುಗಾರಿಕೆ ಸಂಕ್ರಮಣ ಕಾಲದಲ್ಲಿದೆ. ಪ್ರೀತಿ, ಮಮತೆ ಮರೆಯಾಗಿ ಎಲ್ಲವೂ ಲಾಭ -ನಷ್ಟಗಳ ಲೆಕ್ಕಾಚಾರದಲ್ಲಿರುವ ಈ ಕಾಲಘಟ್ಟದಲ್ಲಿ ಹಸುಗಳನ್ನು ಬಂಧನದಲ್ಲಿಟ್ಟು ಸಾಕುವ ವಾಣಿಜ್ಯ ಹೈನುಗಾರಿಕೆಯಿಂದ ಹಲವು ಸಮಸ್ಯೆಗಳು ತಲೆದೋರಿವೆ ಎಂದು ಮಂಗಳೂರಿನ ಪ್ರಮುಖ ಪಶು ವೈದ್ಯ ಡಾ| ಪಿ. ಮನೋಹರ ಉಪಾಧ್ಯ ಹೇಳಿದರು.

ಪತಂಜಲಿ ಗ್ರಾಮೋದ್ಯೋಗದ ಸಿಇಒ ಸುರೇಶ್‌ಚಂದ್ರ ಮಲಿಕ್‌ ಅವರು ಯೋಗ ಋಷಿ ರಾಮದೇವ್‌ ಜೀ ಹಾಗೂ ಆಚಾರ್ಯ ಬಾಲಕೃಷ್ಣ ಜೀ ಅವರ ಆಶೀರ್ವಾದದೊಂದಿಗೆ ಕಾರ್ಯಾಚರಿಸುತ್ತಿರುವ ಹರಿದ್ವಾರದ ಪತಂಜಲಿ ಗ್ರಾಮೋದ್ಯೋಗ (ನ್ಯಾಸ)ದ ವೈಶಿಷ್ಟ್ಯಗಳನ್ನು ತಿಳಿಸಿದರು. ಬಿವಿಟಿ ಮ್ಯಾನೇಜಿಂಗ್‌ ಟ್ರಸ್ಟಿ ಕೆ.ಎಂ. ಉಡುಪ ಉಪಸ್ಥಿತರಿದ್ದರು. ವಲಯ ಪ್ರಬಂಧಕ ಆನಂದ್‌ ಸೊನೊನೆ ಸ್ವಾಗತಿಸಿ, ವಾಸದೇವ ಕಾರಂತ ವಂದಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next