Advertisement
ಬಿಜೆಪಿ ಸಂಸದರೊಬ್ಬರು ಸಂಸತ್ ನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಗುರುತಿಸುವ ಬಗ್ಗೆ ಯೋಚನೆಯಿದೆಯೇ ಎಂದು ಕೇಳಿದ್ದಾರೆ.
Related Articles
Advertisement
ಇದಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಉತ್ತರಿಸಿ, ಪಶುಸಂಗೋಪನಾ ಇಲಾಖೆಯು ತಿಳಿಸುವಂತೆ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸಕಾಂಗ ಅಧಿಕಾರಗಳ ವಿತರಣೆಯ ಅಡಿಯಲ್ಲಿ, (ಸಂವಿಧಾನದ 246 (3) ವಿಧಿ) ಪ್ರಾಣಿಗಳ ಸಂರಕ್ಷಣೆಯು ರಾಜ್ಯ ಶಾಸಕಾಂಗವು ಶಾಸನ ಮಾಡಲು ವಿಶೇಷ ಅಧಿಕಾರವನ್ನು ಹೊಂದಿರುವ ವಿಷಯವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿದ ಪ್ರಯತ್ನಗಳಿಗೆ ಪೂರಕವಾಗಿ ಮತ್ತು ಪ್ರೇರಕವಾಗಿ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಸ್ಥಳೀಯ ತಳಿಯ ಜಾನುವಾರು ಸೇರಿದಂತೆ ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ರಾಷ್ಟ್ರೀಯ ಗೋಕುಲ ಮಿಷನ್ ಅನ್ನು ಅನುಷ್ಠಾನಗೊಳಿಸುತ್ತಿದೆ. ಇಲಾಖೆಯು ಹಸು ಮತ್ತು ಅದರ ಸಂತತಿ ಸೇರಿದಂತೆ ಪ್ರಾಣಿಗಳನ್ನು ರಕ್ಷಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸಹ ಸ್ಥಾಪಿಸಿದೆ” ಎಂದು ಅವರು ಹೇಳಿದರು.
ಹುಲಿಯು ಭಾರತದ ರಾಷ್ಟ್ರೀಯ ಪ್ರಾಣಿ ಮತ್ತು ನವಿಲು ರಾಷ್ಟ್ರೀಯ ಪಕ್ಷಿ ಆಗಿದೆ ಎಂದು ಅವರು ಉತ್ತರದಲ್ಲಿ ಹೇಳಿದ್ದಾರೆ.