ಮೈಸೂರು: ಗೋಹತ್ಯೆಗೂ ಕೇರಳದಲ್ಲಿ ಆಗಿರುವ ಪ್ರವಾಹಕ್ಕೂ ಯಾವ ಸಂಬಂಧವೂ ಇಲ್ಲ . ಹಿಂದೆ ಕೇರಳದಲ್ಲಿ ಗೋಮಾಂಸ ತಿನ್ನುತ್ತಿರಲಿಲ್ಲವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬಿಜೆಪಿ ಶಾಸಕ ಯತ್ನಾಳ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಬಿಜೆಪಿಯವರು ಭಾವಾನಾತ್ಮಕವಾಗಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಗೋವಾದಲ್ಲಿ ಗೋಹತ್ಯೆ ನಡೆಯುತ್ತದೆಯಲ್ಲ, ಈಶಾನ್ಯ ರಾಜ್ಯದಲ್ಲಿ ನಡೆಯುತ್ತದೆ,ರಫ್ತಾಗುತ್ತಿದೆ. ಅದನ್ನು ತಡೆದಿದ್ದಾರಾ ಎಂದು ಪ್ರಶ್ನಿಸಿದರು.
ಯತ್ನಾಳ್ ಅವರು ಕೇರಳದಲ್ಲಿ ಬಹಿರಂಗವಾಗಿ ಆಕಳು ಕಡಿದು ವರ್ಷವಾಗುವ ಒಳಗೆ ಪ್ರವಾಹ ಬಂತು. ಹಿಂದೂ ಭಾವನೆಗಳಿಗೆ ಧಕ್ಕೆ ತಂದುದಕ್ಕೆ ಸಾಕ್ಷಿ ಇದಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಸಾಮಾಜಿಕ ತಾಣಗಳಲ್ಲೂ ಇದೇ ವಿಚಾರ ಗೋಹತ್ಯೆ ಮಾಡಿದಕ್ಕೆ ಪ್ರವಾಹ ಬಂದು ಜನ ಸಂಕಷ್ಟಕ್ಕೀಡಾಗಿದ್ದಾರೆ ಎನ್ನುವ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡಿದ್ದವು.