Advertisement

ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ

06:49 PM Jan 19, 2021 | Team Udayavani |

ಸುರಪುರ: ಗೋ ಸಂರಕ್ಷಣೆ ಮತ್ತು ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿ ವಿರೋಧಿಸಿ ರಾಜ್ಯ ಸರಕಾರ ಹೊರಡಿಸುತ್ತಿರುವ ಸುಗ್ರೀವಾಜ್ಞೆ ಕೈ ಬಿಡುವಂತೆ ಒತ್ತಾಯಿಸಿ ಪ್ರಗತಿಪರ ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಸಂಘ ಸಂಘಟನೆಗಳು ಜಂಟಿಯಾಗಿ ಸೋಮವಾರ ನಗರದಲ್ಲಿ ಪ್ರತಿಭಟಿಸಿದರು.

Advertisement

ತಥಾಗತ್‌ ಗೌಥಮಬುದ್ದ ವೃತ್ತದಿಂದ ಅರಮನೆ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಮಹಾತ್ಮಾ ಗಾಂಧಿಧೀಜಿ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟಿಸಿದರು. ಕಾಯ್ದೆ ಮತ್ತು ಸುಗ್ರೀವಾಜ್ಞೆ ವಿರೋಧಿಸಿ ಕೇಂದ್ರ  ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬೆಂಬಲಿಸಿ ಕಾಂಗ್ರೆಸ್‌ ಪಕ್ಷದ ಕೆಲ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ದಲಿತ ಸಂಘಟನೆ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲಿಕಾರ್ಜುನ ಕ್ರಾಂತಿ ಮಾತನಾಡಿ, ಪ್ರಧಾನಿ ಮೋ ದಿ ನೇತೃತ್ವದ ಕೇಂದ್ರ ಸರಕಾರ
ಇದೊಂದು ಜನವಿರೋಧಿ ಸರಕಾರವಾಗಿದೆ. ಕಾಯ್ದೆಯ ಸಾಧಕ-ಬಾಧಕಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸದೆ ಯಾವುದೇ ದೂರದೃಷ್ಟಿ ಇಲ್ಲದೆ ತರಾತರುಯಲ್ಲಿ ಜಾರಿ ಮಾಡುವ ಮೂಲಕ ಅಲ್ಪಸಂಖ್ಯಾತರ ಆಹಾರ ಪದ್ಧತಿಗೆ ಕಡಿವಾಣ ಹಾಕುವ ಹುನ್ನಾರು ನಡೆಸಿದೆ ಎಂದು ಆರೋಪಿಸಿದರು.

ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ಮೂಲಕ ಸಲ್ಲಿಸಿದರು. ರಾಜಾ  ವೇಣುಗೋಪಾಲ ನಾಯಕ, ಮಲ್ಲಿಕಾರ್ಜುನ ಸತ್ಯಂಪೇಟ, ವೆಂಕೋಬ ದೊರೆ, ಮಲ್ಲಯ್ಯ ಕಮತಗಿ, ದೇವಿಂದ್ರಪ್ಪ ಪತ್ತಾರ, ರಾಹುಲ್‌ ಹುಲಿಮನಿ ಮಾತನಾಡಿದರು. ತಿಪ್ಪಣ್ಣ ಶೆಳ್ಳಗಿ, ಜಟ್ಟೆಪ್ಪ ನಾಗರಾಳ, ಗಂಗಾದರ ನಾಯಕ, ರಮೇಶ ದೊರೆ, ಅಹ್ಮದ ರಿಯಾಜ್‌, ಶೇಖ ದಾವುದ್‌, ಮಹಮದ್‌ ಹುಸ್ಮಾನ, ಬಸೀರ್‌ ತಾಳಿಕೋಟಿ, ಮಹಮದ್‌ ಉಸ್ಮಾನ, ರಾಜು ಕಟ್ಟಿಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next