Advertisement
ರಾಜ್ಯದ 9 ಮೃಗಾಲಯಗಳಲ್ಲಿನ ಹುಲಿ, ಸಿಂಹ,ಚಿರತೆ, ಮೊಸಳೆ ಸೇರಿದಂತೆ ಹಲವು ಮಾಂಸಹಾರಿಪ್ರಾಣಿಗಳಿಗೆ ಪ್ರತಿ ದಿನ ಸುಮಾರು 1300ಕೆ.ಜಿ.ದನದ ಮಾಂಸ ಮುಖ್ಯ ಆಹಾರವಾಗಿ ಬಳಕೆಯಾಗುತ್ತಿದೆ. ಇದಕ್ಕೆ ಮೃಗಾಲಯಗಳೇ ನೇರವಾಗಿ ಮಾಂಸಸರಬರಾಜು ಮಾಡುವವರೊಂದಿಗೆ ಒಪ್ಪಂದಮಾಡಿಕೊಂಡಿದೆ. ಹೀಗಿರುವಾಗ ಸರ್ಕಾರ ಸಂಪೂರ್ಣ ಗೋ ಹತ್ಯೆನಿಷೇಧ ಕಾನೂನು ಜಾರಿಗೆ ತಂದರೆ ರಾಜ್ಯದಲ್ಲಿನಬಹುತೇಕ ಕಸಾಯಿಖಾನೆಗಳು ಬಂದ್ ಆದರೆ ಆಗ 9 ಮೃಗಾಲಯಗಳಲ್ಲಿನ ಮಾಂಸಹಾರಿ ಪ್ರಾಣಿಗಳಿಗೆ ದನದ ಮಾಂಸ ಸರಬರಾಜು ನಿಂತಂತೆ ಆಗುತ್ತದೆ.
Related Articles
Advertisement
ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಪಾಲನೆಗೆ ಸೂಚನೆ ನೀಡಿದ ಕೂಡಲೇ ಪರ್ಯಾಯ ಆಹಾರ ನೀಡುವ ಚಿಂತನೆ ಮಾಡಲಾಗುವುದು ಎಂದು ರಾಜ್ಯ ಮೃಗಾಲಯಗಳ ಪ್ರಾದಿಕಾರದ ಸದಸ್ಯಕಾರ್ಯದರ್ಶಿ ಬಿ.ಪಿ.ರವಿ ಹೇಳಿದರು. ಉದಯವಾಣಿಯೊಂದಿಗೆ ಮಾತನಾಡಿದ ಅವರು, ಸರ್ಕಾರಗಳು ಯಾವುದೇ ಕಾನೂನು ಜಾರಿಗೆ ತರುತ್ತಿದ್ದಂತೆ ಪರ್ಯಾಯ ಮಾರ್ಗಗಳಿಗೂ ಅವಕಾಶ ಕಲ್ಪಿಸಿರುತ್ತದೆ. ಹಾಗೆ ಮೃಗಾಲಯಗಳ ಪ್ರಾಣಿಗಳಿಗೆ ಸರಬರಾಜು ಆಗುತ್ತಿರುವ ದನದ ಮಾಂಸದ ಬಗ್ಗೆಯೂ ಒಂದು ಸ್ಪಷ್ಟ ನಿರ್ದೇಶನ ಸೂಚಿಸಿರುತ್ತದೆ. ನಿಷೇಧದ ನಿಯಮಗಳು ನಾವು ಪರಿಶೀಲಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ರಾಜ್ಯದ 9 ಮೃಗಾಲಯಗಳಿಗೂ ಪ್ರತಿ ದಿನಕೇವಲ 1300 ಕೆ.ಜಿ.ಗಳಷ್ಟು ದನದ ಮಾಂಸ ಅವಶ್ಯಕತೆ ಇದೆ. ನಿಷೇಧದ ನಡುವೆ ಪ್ರಾಣಿಗಳಿಗೆ ದನದ ಮಾಂಸ ನೀಡಲು ಕಾಯ್ದೆಯಲ್ಲಿ ಅವಶ್ಯಕತೆ ಇದ್ದರೆ ಮಾಂಸಕೊಳ್ಳಲು ದುಬಾರಿಯಾಗದು ಎಂದು ಅವರು ಹೇಳಿದರು.
ಆರೋಗ್ಯದಲ್ಲಿ ಏರುಪೇರು ಸಾಧ್ಯತೆ : ಕುರಿ, ಮೇಕೆ ಮಾಂಸಕ್ಕಿಂತ ಕಡಿಮೆ ಬೆಲೆಯಲ್ಲಿ ಕೋಳಿ ಮಾಂಸ ಸಿಗಲಿದೆ. ಆದರೆ ಕೋಳಿಯಲ್ಲಿ ಕೊಬ್ಬಿನಾಂಶಹೆಚ್ಚಾಗಿರುವುದರಿಂದಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಪ್ರತಿದಿನ ಸೇವಿಸಿದರೆ ಆರೋಗ್ಯದಲ್ಲಿ ಬದಲಾವಣೆಯೂ ಆಗಬಹುದು ಎಂಬ ವಿಚಾರವೂ ಪ್ರಾಣಿ ತಜ್ಞರಲ್ಲಿ ನಡೆಯುತ್ತಿದೆ.
ಬೇರೆ ಆಹಾರಕ್ಕೆ ಹೇಗೆ ಹೊಂದಿಕೊಳ್ಳಲಿವೆ? : ಕಾಡಿನ ರಾಜ ಸಿಂಹ, ಹುಲಿ, ಚಿರತೆ, ಮೊಸಳೆ, ಕಾಡುನಾಯಿ,ತೋಳ,ಕೆಲಪಕ್ಷಿಗಳಿಗೆಇಲ್ಲಿವರೆಗೂ ಲಭ್ಯವಿದ್ದ ದನದ ಮಾಂಸಬಂದ್‌ಆಗಲಿದೆಯೇ? ಒಂದು ವೇಳೆ ದನದ ಮಾಂಸ ಸಿಗದಿದ್ದರೆ ಪ್ರಾಣಿ ಗಳು ಬೇರೆ ಆಹಾರಕ್ಕೆ ಹೇಗೆ ಹೊಂದಿಕೊಳ್ಳಲಿವೆ ಎಂಬುದು ಕುತೂಹಲ ಮೂಡಿಸಿದೆ.
–ಮಂಜುನಾಥ್ ಎನ್.ಬನ್ನೇರುಘಟ್ಟ