ಉಡುಪಿ ಜಿಲ್ಲೆಗೆ ಪ್ರತೀ ವರ್ಷ ನೆರೆಯ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಿಂದ ಮಳೆಗಾಲದಲ್ಲಿ ಹೇರಳ ಪ್ರಮಾಣದಲ್ಲಿ ಬೈಹುಲ್ಲು ಸರಬರಾಜಾಗುತ್ತಿತ್ತು. ಹಿಂದೆಲ್ಲ ಆ ಹುಲ್ಲಿಗೆ ಹೆಚ್ಚೆಂದರೆ ಒಂದು ಕಂತೆಗೆ 40-50 ರೂ.ಗಳಿತ್ತು. ಈ ಬಾರಿ 70ರಿಂದ 80 ರೂ.ಗೇರಿದೆ. ಹಿಂದೆ ಲೋಡಿಗೆ 20-30 ಸಾವಿರ ರೂ. ಇದ್ದರೆ ಈ ಬಾರಿ ದುಪ್ಪಟ್ಟಾಗಿದೆ. ಈ ಪ್ರಮಾಣದಲ್ಲಿ ದುಬಾರಿಯಾಗಿರುವುದು ಇದೇ ಮೊದಲು.
Advertisement
ಹೈನುಗಾರರಿಗೆ ಸಮಸ್ಯೆಎಷ್ಟೇ ಪ್ರಮಾಣದಲ್ಲಿ ಹಸಿ ಹುಲ್ಲು, ಇತರ ಮೇವು ಇದ್ದರೂ ಜಾನುವಾರುಗಳಿಗೆ ಬೈಹುಲ್ಲು ಅಗತ್ಯವಾಗಿ ಬೇಕಿದೆ. ಮೂರ್‍ನಾಲ್ಕು ದನಗಳಿದ್ದರೆ ದಿನಕ್ಕೆ ಕನಿಷ್ಠ ಆರೇಳು ಸೂಡಿ ಬೈಹುಲ್ಲು ಖರ್ಚಾಗುತ್ತದೆ. ಆದರೆ ಪ್ರಸ್ತುತ ದರದಲ್ಲಿ ಬೈಹುಲ್ಲು ಖರೀದಿಸುವುದು, ದನ ಸಾಕುವುದು ರೈತರಿಗೆ ಅಸಾಧ್ಯವಾಗಿದೆ. ಹಿಂದಿನ ಜಾನುವಾರು ಗಣತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 1.95 ಲಕ್ಷ ಹಾಗೂ ದ.ಕ. ಜಿಲ್ಲೆಯಲ್ಲಿ 2.34 ಲಕ್ಷ ಜಾನುವಾರುಗಳಿವೆ.