Advertisement

ಬರಲಿದೆ ಸಗಣಿಯ ಸೋಪ್‌!

06:00 AM Sep 23, 2018 | |

ಮಥುರಾ: ಆಕಳ ಮೂತ್ರ ಹಾಗೂ ಸಗಣಿಯಿಂದ ತಯಾರಿಸಿದ ಸೋಪ್‌ಗ್ಳು, ಫೇಸ್‌ಪ್ಯಾಕ್‌ಗಳು, ಶಾಂಪೂಗಳು ಮತ್ತು ಔಷಧೀಯ ಸಸ್ಯಗಳು ಶೀಘ್ರದಲ್ಲೇ ಗ್ರಾಹಕರಿಗೆ ಲಭ್ಯವಾಗಲಿದೆ. ಆರೆಸ್ಸೆಸ್‌ ಬೆಂಬಲಿತ ಸಂಸ್ಥೆ ದೀನ ದಯಾಳ ಧಾಮ್‌ ಈಗ ಈ ಉತ್ಪನ್ನಗಳನ್ನು ಆನ್‌ಲೈನ್‌ ಮಾರುಕಟ್ಟೆ ಅಮೆಜಾನ್‌ನಲ್ಲಿ ಮಾರಾಟ ಮಾಡಲು ಸಿದ್ಧವಾಗಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆ, ಆರಂಭದಲ್ಲಿ 12 ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲಿದೆ. 

Advertisement

ಈ ಬಗ್ಗೆ ನಾವು ಅಮೆಜಾನ್‌ ಜೊತೆಗೆ ಮಾತುಕತೆ ನಡೆಸಿದ್ದೇವೆ. ಇನ್ನೊಂದು ವಾರದಲ್ಲಿ ಅಮೆಜಾನ್‌ನಲ್ಲಿ ನಮ್ಮ ಉತ್ಪನ್ನಗಳ ಜಾಹೀರಾತು ಪ್ರಕಟವಾಗಲಿದೆ. ಅಲ್ಲಿಯೇ ಜನರು ಉತ್ಪನ್ನಗಳನ್ನು ಆರ್ಡರ್‌ ಮಾಡಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಘನಶ್ಯಾಮ್‌ ಗುಪ್ತಾ ಹೇಳಿದ್ದಾರೆ. ಸಂಸ್ಥೆಯು ದೀನ ದಯಾಳ ಕಾಮಧೇನು ಗೋಶಾಲೆ ಫಾರ್ಮಸಿಯನ್ನು ಹೊಂದಿದ್ದು, ಇಲ್ಲಿಯೇ ಉತ್ಪನ್ನಗಳ ತಯಾರಿಕೆ ನಡೆಯಲಿದೆ.

ರೋಗಕ್ಕೆ ಚಿಕಿತ್ಸೆ ನೀಡಲು ಘನ್ವಟಿ, ಪಂಚಗವ್ಯ ಚೂರ್ಣ ಮತ್ತು ಚ್ಯವನ್‌ಪ್ರಾಶ್‌ ಅನ್ನು ಈಗಾಗಲೇ ಉತ್ಪಾದಿಸಲಾಗುತ್ತಿದೆ. ಜೊತೆಗೆ, ಈ ಸಂಸ್ಥೆಯು ಟೇಲರಿಂಗ್‌ ಘಟಕವನ್ನೂ ಹೊಂದಿದ್ದು, ಇಲ್ಲಿ ತಯಾರಾದ ಕುರ್ತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಪ್ರಚುರಪಡಿಸಿದ್ದಾರೆ ಎಂದು ಗುಪ್ತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next