Advertisement

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

11:25 PM Jun 05, 2023 | Team Udayavani |

ಬೀದರ್ : ಗೋವುಗಳನ್ನು ಏಕೆ ಕಡಿಯಬಾರದೆಂಬ ಹೇಳಿಕೆ ನೀಡಿರುವ ಪಶು ಸಂಗೋಪನೆ ಸಚಿವ ವೆಂಕಟೇಶ್ ಅವರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದು, ಅಧಿಕಾರದ ಅಹಂಕಾರ ಹೆಚ್ಚಿದೆ. ಒಂದು ಸಮಾಜದ ಓಲೈಕೆಗಾಗಿ ಇಂಥ ಹೇಳಿಕೆಗಳು ಖಂಡನೀಯ. ಕೂಡಲೇ ಅವರ ಖಾತೆ ಬದಲಿಸಬೇಕು, ಇಲ್ಲವೇ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಚಿವ ಪ್ರಭು ಚೌಹಾಣ್ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಈ ಮೊದಲೇ ಜಾರಿಗೆ ಬಂದದ್ದು ೧೯೬೪ರ ನಿಜಲಿಂಗಪ್ಪ ನೇತೃತ್ವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಬಿಜೆಪಿ ಸರ್ಕಾರ ಕಾಯ್ದೆಯನ್ನು ಬದಲಪಡಿಸಿದೆ. ಮೂಕ ಪ್ರಾಣಿಗಳ ರಕ್ಷಣೆಗಾಗಿ ಶಿಕ್ಷೆ ಮತ್ತು ದಂಡವನ್ನು ಹೆಚ್ಚಿಸಲಾಗಿದೆ. ಪಶು ಸಂಗೋಪನೆ ಜವಾಬ್ದಾರಿ ಹೊತ್ತು ತಿಂಗಳಾಗಿದೆ. ಸಚಿವರು ಮೊದಲು ಕಾನೂನು ಓದಲಿ, ಕಸಾಯಿ ಖಾನೆಗಳಿಗೆ ಭೇಟಿ ಕೊಡಲು ಪರಿಸ್ಥಿತಿಯನ್ನು ಅವಲೋಕಿಸಲಿ. ಕೇವಲ ಒಂದು ಸಮುದಾಯದ ಓಲೈಕೆಗಾಗಿ ಇಂಥ ಹೇಳಿಕೆ ನೀಡುವುದು ಸರಿಯಲ್ಲ, ಕೂಡಲೇ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಕೆಂಡಾಮಂಡಲರಾದರು.

ಗೋ ಹತ್ಯೆ ನಿಷೇಧ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುವುದನ್ನು ಬಿಡಲಿ. ಜನರು ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದು, ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಮೊದಲು ಜಾರಿಗೆ ತರಲಿ. ಕಾಯ್ದೆ ರದ್ದುಗೊಳಿಸುವ ಕೆಲಸಕ್ಕೆ ಸರ್ಕಾರ ಕೈಹಾಕಿದರೆ, ವಿರೋಧ ಪಕ್ಷವಾದ ಬಿಜೆಪಿ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next