Advertisement

ಲಾಕ್‌ಡೌನ್‌ ನಿಯಮ ಸಡಿಲಗೊಳಿಸುವಂತೆ ಬರ್ಲಿನಲ್ಲೂ ಪ್ರತಿಭಟನೆ

04:39 PM Apr 28, 2020 | sudhir |

ಬರ್ಲಿನ್‌: ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸುವಂತೆ ಈ ಹಿಂದೆ ಅಮೆರಿಕದ ಪ್ರಜೆಗಳು ಪ್ರತಿಭಟನೆ ನಡೆಸಿದ್ದರು. ಈಗ ಜರ್ಮನ್ನರ ಸರದಿ.

Advertisement

ಕಳೆದ 2 ತಿಂಗಳಿನಿಂದ ದೇಶವ್ಯಾಪಿ ಜಾರಿ ಮಾಡಲಾದ ಲಾಕ್‌ಡೌನ್‌ ನಿಯಮಗಳನ್ನು ತೆರವುಗೊಳಿಸುವಂತೆ ಕೆಲ ಗುಂಪುಗಳು ಬರ್ಲಿನ್‌ನಲ್ಲಿ ಪ್ರತಿಭಟನೆ ಮಾಡುತ್ತಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಶನಿವಾರ ಪೊಲೀಸರು ಲಾಕ್‌ಡೌನ್‌ ನಿಯಮ ಉಲ್ಲಂ ಸಿದ್ದಕ್ಕೆ ಸುಮಾರು 1 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ಜರ್ಮನ್‌ ರಾಜಧಾನಿ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಜತೆಗೆ ಹೋರಾಟ ನಡೆಸುವುದು ಹವ್ಯಾಸದಂತಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.

ಚಾನ್ಸೆಲರ್‌ಏಂಜೆಲಾ ಮರ್ಕೆಲ್‌ ಅವರ ವಿರುದ್ಧ ಕೆಲವು ಪ್ರತಿಭಟನಾಕಾರರು ಜನರ ದೈನಂದಿನ ಬದುಕನ್ನು ಅಸ್ತವ್ಯಸ್ತಗೊಳಿಸಿದ್ದಾರೆ ಎಂಬ ಸಂದೇಶ ಹೊತ್ತ ಟಿಶರ್ಟ್‌ಗಳನ್ನು ಧರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು “ಸ್ವಾತಂತ್ಯ ನೀಡಿ ಎಂದು ಆಗ್ರಹಿಸಿದರೆ, ಮತ್ತೂ ಹಲವರು ದೇಶದಲ್ಲಿ ನಡೆಯುತ್ತಿರುವ “ಔಷಧೀಯ ಲಾಬಿಯನ್ನು ತಡೆಗಟ್ಟಿ ಎಂಬ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಪ್ರದರ್ಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next