Advertisement
ಆಶಾದಾಯಕ ಹೊಸ ಬೆಳವಣಿಗೆಯೊಂದು ನಡೆದಿದ್ದು, ಸೋಂಕಿತರಿಗೆ ಡೆಕ್ಸಾಮೆಥಾಸೋನ್(Dexamethasone) ನೀಡಿದಲ್ಲಿ ಗುಣಮುಖರಾಗುತ್ತಾರೆ ಎಂದು ಇಂಗ್ಲೆಂಡ್ ಸಂಶೋಧಕರು ಹೇಳಿದ್ದಾರೆ. ಆ ಮೂಲಕ ಕೋವಿಡ್-19 ಸೋಂಕು ಹರಡುವಿಕೆಗೂ ಕಡಿವಾಣ ಹಾಕಬಹುದಾಗಿದ್ದು, ಪ್ರಾಯೋಗಿ ಪರೀಕ್ಷೆ ವೇಳೆ ಈ ಅಂಶ ತಿಳಿದುಬಂದಿದೆ.
ಸೋಂಕಿಗೆ ತುತ್ತಾಗಿ ಸಾವಿನ ಕದ ತಟ್ಟಿದ್ದ ಸುಮಾರು 5 ಸಾವಿರ ಕೋವಿಡ್-19 ಸೋಂಕಿತರಿಗೆ ಡೆಕ್ಸಾಮೆಥಾಸೋನ್ ಔಷಧ ನೀಡಿದ್ದು, ಸೋಂಕಿತರು ಶೀಘ್ರವಾಗಿ ಗುಣಮುಖವಾಗುವ ಮೂಲಕ ಸಾವಿನ ದವಡೆಯಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಪರಿಣಾಮಕಾರಿ ಔಷಧ
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಂಡ ಈ ಕುರಿತು ಅಧ್ಯಯನ ನಡೆಸಿದ್ದು, ಡೆಕ್ಸಾಮೆಥಾಸೋನ್ ಪರಿಣಾಮಕಾರಿ ಔಷಧವಾಗಿ ಕಾರ್ಯನಿರ್ವಸುತ್ತದೆ ಎಂದು ಸಂಶೋಧನ ವರದಿ ತಿಳಿಸಿದೆ. ಜತೆಗೆ ಈ ತಂಡದ ಸದಸ್ಯ ಪ್ರೊ. ಪೀಟರ್‌ಹಾರ್ಬಿ ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ಡೆಕ್ಸಾಮೆಥಾಸೋನ್ ಸಾವಿನ ಪ್ರಮಾಣವನ್ನು ಕಡಿತಗೊಳಿಸುವಲ್ಲಿಯೂ ಉಪಕಾರಿಯಾಗಿದೆ ಮತ್ತು ಸೋಂಕು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದ್ದಾರೆ.
Related Articles
1960ರಿಂದಲೇ ವಿಶ್ವದೆಲ್ಲೆಡೆ ಡೆಕ್ಸಾಮೆಥಾಸೋನ್ ಔಷಧ ಬಳಕೆಯಾಗುತ್ತಿದ್ದು, ಅಸ್ತಮಾ ಸೇರಿದಂತೆ ಹಲವು ರೋಗಿಗಳ ಚಿಕಿತ್ಸೆಯಲ್ಲಿ ಉಪಯೋಗ ಮಾಡಲಾಗುತ್ತಿದೆ. ಸದ್ಯ ಕೊರೊನಾ ತಡೆಗೆ ಹೆಚ್ಚಾಗಿ ಬಳಸುತ್ತಿರುವ ಹೈಡ್ರಾಕ್ಸಿಕ್ಲೊರೋಕ್ವಿನ್ ನಿಂದ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಡೆಕ್ಸಾಮೆಥಾಸೋನ್ ಸಿಕ್ಕಿರುವ ಆಶಾದಾಯಕ ಬೆಳವಣಿಗೆಯಾಗಿದೆ.
Advertisement