Advertisement

ಕೋವಿಡ್ ಪರಿಣಾಮ ಸಕ್ಕರೆ ಉದ್ಯಮಕ್ಕೂ ಹೊಡೆತ: ಸಕ್ಕರೆ ಕಹಿ ಆಯಿತು…

10:37 AM May 03, 2020 | mahesh |

ಕರ್ನಾಟಕವೂ ಸೇರಿ ಇಡೀ ಭಾರತ, ಸಕ್ಕರೆ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ. ಕೋವಿಡ್ ಈ ಉದ್ಯಮಕ್ಕೂ ಹೊಡೆತ ನೀಡಿದೆ. ಸಕ್ಕರೆ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಅದರ ಲೆಕ್ಕಾಚಾರಗಳು ಇಲ್ಲಿವೆ.

Advertisement

ಶೇ.20ರಷ್ಟು ಉತ್ಪಾದನೆ ಕುಸಿತ
2019 ಅಕ್ಟೋಬರ್‌ 1ರಿಂದ 2020 ಏಪ್ರಿಲ್‌ 30ರ ಲೆಕ್ಕಾಚಾರವನ್ನಿಟ್ಟುಕೊಂಡರೆ, ಭಾರತದಲ್ಲಿ ಸಕ್ಕರೆ ಉತ್ಪಾದನೆ ಶೇ.20ರಷ್ಟು ಕುಸಿದು, 258.01 ಲಕ್ಷ ಟನ್‌ಗೆ
ಮುಟ್ಟಿದೆ. ಅದಕ್ಕೂ ಹಿಂದಿನ ವರ್ಷ ಇದೇ ಅವಧಿಯಲ್ಲಿ 321.71 ಲಕ್ಷ ಟನ್‌ ಉತ್ಪಾದನೆಯಾಗಿತ್ತು. ಅಂದರೆ 63.70 ಲಕ್ಷ ಟನ್‌ ಉತ್ಪಾದನೆ ಕುಸಿತವಾಗಿದೆ.

ಕರ್ನಾಟಕದಲ್ಲಿ ಕಾರ್ಖಾನೆಗಳಿಗೆ ಬಾಗಿಲು
ಕರ್ನಾಟಕದಲ್ಲಿ ಬಹುತೇಕ ಎಲ್ಲ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿವೆ. ಆದ್ದರಿಂದ ಸಹಜವಾಗಿ ಸಕ್ಕರೆ ಉತ್ಪಾದನೆ ಕುಗ್ಗಿದೆ. 2018-19ರ ಅಕ್ಟೋಬರ್‌
-ಏಪ್ರಿಲ್‌ ಅವಧಿಯಲ್ಲಿ ಕರ್ನಾಟಕ 43.25 ಲಕ್ಷ ಟನ್‌ ಸಕ್ಕರೆ ಉತ್ಪಾದಿಸಿದ್ದರೆ, 2019-20ರ ಇದೇ ಅವಧಿಯಲ್ಲಿ ಉತ್ಪಾದನೆ 33.82 ಲಕ್ಷ ಟನ್‌ಗಿಳಿದಿದೆ.

ಸಕ್ಕರೆ ಮಾರಾಟವೂ ಕಡಿಮೆ
ಸಕ್ಕರೆ ಉತ್ಪಾದನೆ ಮಾತ್ರವಲ್ಲ ಮಾರಾಟವೂ ಇಳಿದಿದೆ. ಎಲ್ಲ ಕಡೆ ದಿಗ್ಬಂಧನವಿರುವುದರಿಂದ ಕೊಳ್ಳುವ ಪ್ರಮಾಣ ಕಡಿಮೆಯಾಗಿದೆ. ಮಾರ್ಚ್‌- ಏಪ್ರಿಲ್‌ ತಿಂಗಳಲ್ಲಿ 10 ಲಕ್ಷ ಟನ್‌ನಷ್ಟು ಮಾರಾಟ ಇಳಿದಿದೆ ಎಂದು ಇಸ್ಮಾ (ಭಾರತ ಸಕ್ಕರೆ ಕಾರ್ಖಾನೆಗಳ ಸಂಸ್ಥೆ) ತಿಳಿಸಿದೆ.

2018-19ರಲ್ಲಿ ಭಾರತ ವಿಶ್ವ ನಂ.1
2018-19ನೇ ವರ್ಷದಲ್ಲಿ ಭಾರತ ವಿಶ್ವದಲ್ಲೇ ಗರಿಷ್ಠ ಸಕ್ಕರೆ ಉತ್ಪಾದನೆ ಮಾಡಿದ ರಾಷ್ಟ್ರವಾಗಿ ಗುರ್ತಿಸಲ್ಪಟ್ಟಿತ್ತು. ಬ್ರೆಜಿಲನ್ನು ಹಿಂದಿಕ್ಕಿ ಭಾರತ ಅಗ್ರಸ್ಥಾನಕ್ಕೇರಿತ್ತು. ಆ
ವರ್ಷ ಉತ್ಪಾದನೆಯಾಗಿದ್ದು 33 ಮಿಲಿಯನ್‌ ಮೆಟ್ರಿಕ್‌ ಟನ್‌ ಸಕ್ಕರೆ.

Advertisement

260 ಲಕ್ಷ ಟನ್‌
2019ರ ಅಕ್ಟೋಬರ್‌ -2020ರ ಸೆಪ್ಟೆಂಬರ್‌ ಮಾರುಕಟ್ಟೆ ವರ್ಷದಲ್ಲಿ ಭಾರತದ ಸಕ್ಕರೆ ಉತ್ಪಾದನೆ ಪ್ರಮಾಣ (ನಿರೀಕ್ಷಿತ ಕುಸಿತ).

330 ಲಕ್ಷ ಟನ್‌
2018-2019ರ ಮಾರುಕಟ್ಟೆ ವರ್ಷದಲ್ಲಿ ಉತ್ಪಾದನೆಯಾಗಿದ್ದ ಸಕ್ಕರೆ ಪ್ರಮಾಣ.

35 ಲಕ್ಷ ಟನ್‌
ಕಾರ್ಖಾನೆಗಳು, ಬಂದರುಗಳು ನೀಡಿದ ಮಾಹಿತಿ ಪ್ರಕಾರ, ಇದುವರೆಗೆ ರಫ್ತು ಮಾಡಲು ಕಳುಹಿಸಿರುವ ಸಕ್ಕರೆ ಪ್ರಮಾಣ.

Advertisement

Udayavani is now on Telegram. Click here to join our channel and stay updated with the latest news.

Next