Advertisement
ಭಾರತದ 20,160 ಕೋವಿಡ್ ಸಾವುಗಳಲ್ಲಿ ಕಾಲು ಭಾಗ ನಗರದಿಂದ ದಾಖಲಾಗಿದೆ. ಮಾರ್ಚ್ 11ರಂದು ಮೊದಲ ಎರಡು ಪ್ರಕರಣಗಳನ್ನು ಪತ್ತೆಹಚ್ಚಿದ ಆರು ದಿನಗಳಲ್ಲಿ ಮುಂಬಯಿ ತನ್ನ ಮೊದಲ ಸಾವನ್ನು ದಾಖಲಿಸಿದೆ. 70 ದಿನಗಳ ಅನಂತರ ಮೊದಲ ಸಾವಿರ ಸಾವುಗಳು ಸಂಭವಿಸಿವೆ. ಅನಂತರದ ಸಾವಿರ ಸಾವುಗಳು ಕ್ರಮವಾಗಿ 18 ದಿನಗಳು, ನಾಲ್ಕು ಮತ್ತು ಒಂಬತ್ತು ದಿನಗಳಲ್ಲಿ ದಾಖಲಾಗಿದೆ. 12 ದಿನಗಳಲ್ಲಿ 4,000ರಿಂದ 5,000ಕ್ಕೆ ಏರಿಕೆಯಾಗಿದೆ. ಮಾರ್ಚ್ ನಲ್ಲಿ 7 ಸಾವುಗಳು ಸಂಭವಿಸಿದರೆ, ಈ ಸಂಖ್ಯೆ ಏಪ್ರಿಲ್‌ನಲ್ಲಿ 281ಕ್ಕೆ ಮತ್ತು ಮೇ ತಿಂಗಳಲ್ಲಿ 989ಕ್ಕೆ ಏರಿತು. ಜೂನ್‌ನಲ್ಲಿ 3,277, ಜುಲೈನಲ್ಲಿ ಇದುವರೆಗೆ 446 ಸಾವುಗಳು ಸಂಭವಿಸಿವೆ. ನಗರದ ಪ್ರಕರಣಗಳ ಸಾವಿನ ಪ್ರಮಾಣವು ಏಪ್ರಿಲ್‌ನಲ್ಲಿ ಶೇ. 7ರಷ್ಟಿತ್ತು ಪ್ರಸ್ತುತ ಸುಮಾರು 6ರಷ್ಟಿದ್ದು, ಈ ದರವು ಕೋವಿಡ್ ಕಾರ್ಯಪಡೆಯ ರಚನೆಗೆ ಕಾರಣವಾಗಿದೆ. ಮುಂಬಯಿಗೆ ಸಂಬಂಧಿಸಿದಂತೆ 56 ದಿನಗಳ ಅನಂತರ ಕೋವಿಡ್ ಹೊಸ ಪ್ರಕರಣಗಳು 800ಕ್ಕಿಂತಲೂ ಕಡಿಮೆಯಾಗಿದೆ. 785 ಪ್ರಕರಣಗಳ ಸೇರುವಿಕೆಯೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 86,509ಕ್ಕೆ ತಲುಪಿದೆ. ಮುಂಬಯಿಯ ಉಪನಗರಗಳಿಂದ ಸಾವುಗಳು ನಗರಕ್ಕಿಂತ ಹೆಚ್ಚಿನದಾಗಿದೆ. ಈ ಮಧ್ಯೆ ರೋಗದ ಬಗ್ಗೆ ನಗರದ ಹಿಡಿತ ಸುಧಾರಿಸಿದೆ ಎಂದು ಎಎಂಸಿ ಸುರೇಶ್ ಕಾಕಾನಿ ಹೇಳಿದರು.
Advertisement
ಕೋವಿಡ್ ಸಾವು: ಚೀನವನ್ನು ಮೀರಿಸಿದ ಮಹಾನಗರ
05:39 PM Jul 10, 2020 | Suhan S |
Advertisement
Udayavani is now on Telegram. Click here to join our channel and stay updated with the latest news.