Advertisement

ಕೋವಿಡ್‌ನಿಂದ ಮೃತಪಟ್ಟವರಲ್ಲಿ ಶೇ.87ರಷ್ಟು ಮಂದಿ ಲಸಿಕೆ ಪಡೆಯದವರು

12:31 AM Jan 30, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹಂತ ಹಂತವಾಗಿ ಇಳಿಕೆಯಾಗುತ್ತಿದ್ದರೂ, ಮರಣ ಪ್ರಮಾಣದಲ್ಲಿ ಅಷ್ಟೇ ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದೀಗ ಕಳೆದೊಂದು ತಿಂಗಳಲ್ಲಿನಲ್ಲಿ ಮೃತಪಟ್ಟ ಒಟ್ಟು ಪ್ರಕರಣಗಳಲ್ಲಿ ಕೊರೊನಾ ಲಸಿಕೆ ಎರಡು ಡೋಸ್‌ ಪೂರ್ಣಗೊಳಿಸದ ಹಾಗೂ ಲಸಿಕೆಯನ್ನೇ ಪಡೆಯದ ಶೇ.87ರಷ್ಟು ಪ್ರಕರಣಗಳು ವರದಿಯಾಗಿವೆ.

Advertisement

ರಾಜ್ಯ ಜ.20ರಿಂದ ಜ.27ವರೆಗೆ 373 ಮಂದಿ ಮೃತಪಟ್ಟಿದ್ದು ಅವರ ಪೈಕಿ 323 ಮಂದಿ ಕೊರೊನಾ ಲಸಿಕೆ ಎರಡನೇ ಡೋಸ್‌ ಪೂರ್ಣಗೊಳಿಸದ ಹಾಗೂ ಲಸಿಕೆಯನ್ನೇ ಪಡೆಯದವರಾಗಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ನಿತ್ಯ ಬಿಡುಗಡೆ ಮಾಡುತ್ತಿರುವ ಆರೋಗ್ಯ ಇಲಾಖೆಯ ವರದಿಯಲ್ಲಿ ಒಟ್ಟು ಮರಣ ಪ್ರಕರಣದಲ್ಲಿ ಮಂದಿ ಹೃದಯ ರೋಗ ಸೇರಿದಂತೆ ಇತರೆ ಅನಾರೋಗ್ಯದಿಂದ ಬಳಲುತ್ತಿರುವ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಇನ್ನೂ ಯಾವುದೇ ಸೋಂಕಿಗೆ ಒಳಗಾಗದೇ ಕೇವಲ ಕೋವಿಡ್‌ನಿಂದ ಮೃತಪಡುವವರ ಪ್ರಮಾಣ ಮೂರುಪಟ್ಟು ಏರಿಕೆಯಾಗಿದೆ.

ಜ.20ರಿಂದ 29ವರೆಗೆ 223 ಮಂದಿ ಇತರೆ ಕಾಯಿಲೆ ಬಳಲುತ್ತಿರುವ ಸೋಂಕಿತರು ಹಾಗೂ 163 ಮಂದಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

ಜ.10ರಿಂದ 19ವರೆಗೆ 165ಮಂದಿ ಮೃತಪಟ್ಟಿದ್ದು, ಅವರಲ್ಲಿ 116 ಮಂದಿ ಇತರೆ ಕಾಯಿಲೆ ಬಳಲುತ್ತಿರುವ ಸೋಂಕಿತರು ಹಾಗೂ 49 ಕೇವಲ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

Advertisement

ಡೆಲ್ಟಾ ಹೆಚ್ಚು
ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಪ್ರಕರಣದಲ್ಲಿ ಶೆ.67.5ರಷ್ಟು ಒಮಿಕ್ರಾನ್‌ ಪ್ರಕರಣಗಳಾಗಿದೆ. ಜೀನೋಮ್ಸ್‌ ಸಿಕ್ವೇನ್ಸಿಂಗ್‌ ಪರೀಕ್ಷೆಗೆ ಕಳುಹಿಸಿದ್ದ 7512ಮಂದಿ ಮಾದರಿಗಳ‌ಲ್ಲಿ 1,516 ಮಾದರಿ ತಿರಸ್ಕೃಗೊಂಡಿದ್ದು, ಉಳಿದ 5,996 ಮಾದರಿಗಳಲ್ಲಿ 1,115 ಮಂದಿಗೆ ಒಮಿಕ್ರಾನ್‌ ದೃಢಪಡುವ ಮೂಲಕ ಶೇ.67.5 ಸೋಂಕಿನ ಪ್ರಮಾಣ ದಾಖಲಾಗಿದೆ.

ಎರಡನೇ ಅಲೆಯಲ್ಲಿ ಶೇ.90.79ರಷ್ಟು ಪ್ರಕರಣಗಳು ಡೆಲ್ಟಾ ಪ್ರಕರಣಗಳು ದಾಖಲಾಗಿತ್ತು. ಎರಡನೇ ಹಾಗೂ ಮೂರನೇ ಅಲೆಗೆ ಹೋಲಿಕೆ ಮಾಡಿದರೆ ಎರಡನೇ ಅಲೆಯಲ್ಲಿ ಡೆಲ್ಟಾದ ತೀವ್ರತೆ ಅಧಿಕವಾಗಿತ್ತು ಎಂದು ಆರೋಗ್ಯ ಇಲಾಖೆ ಅಂಕಿ- ಅಂಶ ದೃಢಪಡಿಸಿದೆ.

ಕಳೆದ 10ದಿನದಲ್ಲಿ 0-9 ವರ್ಷದೊಳಗಿನ 3 , 9-19ವರ್ಷದೊಳಗಿನ 7, 20ರಿಂದ 29ವರ್ಷದೊಳಗಿನ 3, 30ರಿಂದ 39ವರ್ಷದೊಳಗಿನ 55, 40 ರಿಂದ 49ವರ್ಷದೊಳಗಿನ 46, 50ರಿಂದ 59ವರ್ಷದೊಳಗಿನ ಶೂನ್ಯ, 60 ರಿಂದ 69ವರ್ಷದೊಳಗಿನ ಶೂನ್ಯ, 70ರಿಂದ 79ವರ್ಷದೊಳಗಿನ 20, 80ರಿಂದ 89ವರ್ಷದೊಳಗಿನ 35, 90ರಿಂದ 99 ವರ್ಷದೊಳಗಿನ 35 ಮಂದಿ, 100 ವರ್ಷ ಮೇಲ್ಪಟ್ಟವರಲ್ಲಿ 23 ಮೃತಪಟ್ಟಿದ್ದಾರೆ. ಮೇಲಿನ ಅಂಕಿ ಅಂಶಗಳ ಪ್ರಕಾರ 30ರಿಂದ 39ವರ್ಷ ಮೇಲ್ಪಟವರ ಮರಣ ಪ್ರಮಾಣ ಅಧಿಕವಿದೆ.

ಕೊರೊನಾ ಪ್ರಾರಂಭವಾದ ದಿನದಿಂದ ಇದುವರೆಗೆ ದಾಖಲಾದ ಮರಣ ಪ್ರಮಾಣದಲ್ಲಿ 60ರಿಂದ 69ವರ್ಷದವರು ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ 0-9ವರ್ಷದೊಳಗಿನ 70, 10-19ವರ್ಷದೊಳಗಿನ 101, 20ರಿಂದ 29ವರ್ಷದೊಳಗಿನ 798, 30-39ವರ್ಷದೊಳಗಿನ 2411, 40ರಿಂದ 49ವರ್ಷದೊಳಗಿನ 5,135, 50ರಿಂದ 59ವರ್ಷದೊಳಗಿನ 8397, 60ರಿಂದ 69ವರ್ಷದೊಳಗಿನ 10884, 70ರಿಂದ 79ವರ್ಷದೊಳಗಿನ 7439, 80ರಿಂದ 89ವರ್ಷದೊಳಗಿನ 2789, 90ರಿಂದ 99ವರ್ಷದೊಳಗಿನ 577, 100ವರ್ಷ ಮೇಲ್ಪಟ್ಟವರಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next