Advertisement
ಬೆಂಗಳೂರು: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಭೂಗತವಾಗಿದ್ದ ಅಂತಾರಾಜ್ಯ ಮತ್ತು ಗಡಿಭಾಗಗಳಕಳ್ಳರ ಗ್ಯಾಂಗ್‌ಗಳು ರಾಜಧಾನಿ ಮತ್ತು ಇತರೆ ನಗರಗಳಲ್ಲಿ ಸಕ್ರಿಯವಾಗಿದ್ದು, ತಮ್ಮ ಕೈ ಚಳಕ ತೋರಿಸಲಾರಂಭಿಸಿವೆ! ಹೆಚ್ಚೇಕೆ, ಇತರೆ ರಾಜ್ಯಗಳಿಂದ ಬೆಂಗಳೂರಿಗೆ ವಿಮಾನ ಮೂಲಕವೂ ಪ್ರಯಾಣ ಬೆಳೆಸಿ ತಮ್ಮಕೈಂಕರ್ಯದಲ್ಲಿ ನಿರತರಾಗಿದ್ದಾರೆ!!
Related Articles
ಅಪರಾಧ ಕೃತ್ಯ ಎಸಗುವ ಸಂದರ್ಭದಲ್ಲಿ ಸಹಾಯಕ್ಕಾಗಿ ಕಮಿಷನ್ ಕೊಟ್ಟು ಸ್ಥಳೀಯ ಕಳವು ಆರೋಪಿಗಳನ್ನು ನೇಮಿಸಿಕೊಳ್ಳುತ್ತವೆ.
Advertisement
ಕೃತ್ಯ ಎಸಗುವ ಸ್ಥಳದ ಸಮೀಪದಲ್ಲಿಯೇ ಮುಸುಕುಧರಿಸಿ ದ್ವಿಚಕ್ರ ವಾಹನಗಳನ್ನುಕಳವು ಮಾಡಿ, ಅವುಗಳ ಮೂಲಕವೇ ಸುಲಿಗೆ, ದರೋಡೆ, ಸರಗಳ್ಳತನ ಸೇರಿ ಇತರೆ ಅಪರಾಧ ಕೃತ್ಯ ಎಸಗಿ ಅದೇ ವಾಹನದಲ್ಲಿ ರಾಜ್ಯ ತೊರೆಯುತ್ತಾರೆ. ಕೆಲವೊಮ್ಮೆ ಗಡಿಭಾಗದಲ್ಲಿ ವಾಹನಗನ್ನು ನಿಲ್ಲಿಸಿ ಪರಾರಿಯಾಗಿರುವ ಉದಾಹರಣೆಗಳು ಇವೆ. ವಿಶೇಷವೆಂದರೆ, ಪ್ರಮುಖ ಗ್ಯಾಂಗ್‌ಗಳಾದ ಭವೇರಿಯಾ, ರಾಮ್‌ಜೀ, ಇರಾನಿ, ಓಜಿಕುಪ್ಪಂ, ಶ್ಯಾಮ್ಲಿ ಗ್ಯಾಂಗ್‌ಗಳು ವಿಮಾನ, ರೈಲುಗಳ ಮೂಲಕ ಬೆಂಗಳೂರಿಗೆ ಬಂದು ಕೃತ್ಯ ಎಸಗಿದ ಬಳಿಕ ಅದೇ ಮಾರ್ಗ ದಲ್ಲಿ ತಮ್ಮ ಊರುಗಳು ಸೇರಿಕೊಳ್ಳುತ್ತವೆ ಎಂದು ಪೊಲೀಸರು ತಿಳಿಸುತ್ತಾರೆ.
ಊರಿಗೆ ಊರೇ ಕಳ್ಳರ ಸಂತೆ!: ಈ ಗ್ಯಾಂಗ್ ಸದಸ್ಯರ ಬೆನ್ನು ಹತ್ತಿದಾಗ ಇಡೀ ಊರಿಗೆ ಊರೇ ಕಳ್ಳರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಂಥ ಪ್ರದೇಶಕ್ಕೆ ಹೋಗಲು ಸ್ಥಳೀಯ ಪೊಲೀಸರೇ ಹಿಂದೇಟು ಹಾಕುತ್ತಾರೆ. ಪ್ರಮುಖವಾಗಿ ಬಿಲ್ಸ್, ಭವೇರಿಯಾ, ರಾಮ್‌ಜೀ, ಓಜಿಕುಪ್ಪಂ ಗ್ಯಾಂಗ್‌ಗಳ ಸದಸ್ಯರ ಮೇಲೆ ದಾಳಿಗೆ ಪೊಲೀಸರು ಹಿಂದೇಟು ಹಾಕುತ್ತಾರೆ. ಏಕೆಂದರೆ, ಪೊಲೀಸರ ಕಂಡರೆ ಇಡೀ ಊರಿನ ಸದಸ್ಯರೇ ಕಲ್ಲು, ದೊಣ್ಣೆ, ಬಾಣಗಳ ಮೂಲಕ ಬೆದರಿಕೆ ಹಾಕುತ್ತಾರೆ. ಆದರೆ, ಬೆಂಗಳೂರು ಪೊಲೀಸರು ಇಂಥ ಗ್ಯಾಂಗ್‌ನ ಸದಸ್ಯರನ್ನು ಸ್ಥಳೀಯಪೊಲೀಸರಜತೆ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿ ಕರೆ ತಂದಿದ್ದಾರೆ.
ದೇವರಿಗೆ ಹರಕೆಇನ್ನುಕೆಲ ಗ್ಯಾಂಗ್‌ನ ಸದಸ್ಯರು ಅಪರಾಧಕೃತ್ಯಕ್ಕೆ ಹೊರಡುವ ಮೊದಲು ತಮ್ಮ ಗ್ರಾಮ ದೇವರಿಗೆ ಹರಕೆ ಕಟ್ಟಿಕೊಂಡು ಹೊರಡುತ್ತಾರೆ.ಕೃತ್ಯ ಎಸಗಿ ವಾಪಸ್
ಹೋದ ಬಳಿಕಕಳವು ವಸ್ತು ಮಾರಾಟ ಮಾಡಿ ಬಂದ ಹಣದಲ್ಲಿ ಹರಕೆ ತೀರಿಸುತ್ತಾರೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. *ಮೋಹನ್ ಭದ್ರಾವತಿ