Advertisement

ಕೋವಿಡ್‌ ಬಿಕ್ಕಟ್ಟು: 2 ಬಿಲಿಯನ್‌ ಡೋಸ್‌ ಲಸಿಕೆ ಖರೀದಿಸಲು ಸಜ್ಜಾದ UNICEF

05:27 PM Sep 08, 2020 | Karthik A |

ವಾಷಿಂಗ್ಟನ್‌: ಯುನಿಸೆಫ್ ಎಲ್ಲ ದೇಶಗಳಿಗೂ ಆರಂಭಿಕ ಪ್ರಮಾಣಗಳಿಗೆ ಸುರಕ್ಷಿತ, ವೇಗದ ಮತ್ತು ಸಮಾನವಾಗಿ ಕೊರೊನಾ ಸೋಂಕು ಲಸಿಕೆಗಳ ಖರೀದಿ ಮತ್ತು ಪೂರೈಕೆಗೆ ಮುಂದಾಗುವುದಾಗಿ ಘೋಷಿಸಿದೆ.

Advertisement

ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ವಿಶ್ವದ ಅತಿದೊಡ್ಡ ಏಕ ಲಸಿಕೆ ಖರೀದಿದಾರರಾಗಿದ್ದು, ಸುಮಾರು 100 ದೇಶಗಳ ಪರವಾಗಿ ದಿನನಿತ್ಯದ ಕೋವಿಡ್‌ ವಿರುದ್ಧದ ಹೋರಾಟಕ್ಕೆ ವಾರ್ಷಿಕ 2 ಬಿಲಿಯನ್‌ ಡೋಸ್‌ ಪ್ರಮಾಣದಷ್ಟು ವಿವಿಧ ಲಸಿಕೆಗಳನ್ನು ಸಂಗ್ರಹಿಸಲಿದೆ.
ಕೋವಿಡ್‌ ನಿಷ್ಕ್ರಿಯ ಪ್ರಕ್ರಿಯೆಯಲ್ಲಿ ಹಲವಾರು ಲಸಿಕೆಗಳು ಭರವಸೆ ಮೂಡಿಸಿದ್ದು, ವಿಶ್ವಸಂಸ್ಥೆ ಏಜೆನ್ಸಿ, ಪ್ಯಾನ್‌ ಅಮೆರಿಕನ್‌ ಹೆಲ್ತ್ಆ‌ ರ್ಗನೈಸೇಶನ್‌ (ಪಿಎಎಚ್‌ಒ) ಫ‌ಂಡ್‌ ಸಹಯೋಗದೊಂದಿಗೆ 92 ಕಡಿಮೆ ಮತ್ತು ಕಡಿಮೆ ಮಧ್ಯಮ-ಆದಾಯದ ದೇಶಗಳಿಗೆ ಲಸಿಕೆ ಖರೀದಿಯನ್ನು ಯಾಂತ್ರಿಕತೆಯಿಂದ ಬೆಂಬಲಿಸಲಾಗುತ್ತದೆ ಎಂದಿದೆ.

ಜಾಗತಿಕವಾಗಿ ಕೋವಿಡ್‌ ಲಸಿಕೆಗಳನ್ನು ಪೂರೈಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದು, ಈ ಸಾಂಕ್ರಾಮಿಕ ಪಿಡುಗಿನಿಂದ ಸಂಪೂರ್ಣವಾಗಿ ಹೊರ ತರುವ ಗುರಿಯೊಂದಿಗೆ ನಾವು ಹೊಸ ಸವಾಲಿಗೆ ಸಿದ್ಧರಿದ್ದೇವೆ ಎಂದು ಯುನಿಸೆಫ್ ಟ್ವೀಟ್‌ ಮಾಡಿದೆ.
ಯುನಿಸೆಫ್ ದಡಾರ ಮತ್ತು ಪೋಲಿಯೊದಂತಹ ಕಾಯಿಲೆಗಳಿಗೆ ಲಸಿಕೆಗಳನ್ನು ಖರೀದಿಸುವ ವಿಶ್ವದ ಅತಿದೊಡ್ಡ ಏಕ ಖರೀದಿದಾರನಾಗಿದ್ದು, ಪ್ರತಿವರ್ಷ ಸುಮಾರು 100 ದೇಶಗಳ ಪರವಾಗಿ 2 ಬಿಲಿಯನ್‌ ಡೋಸ್‌ಗಳನ್ನು ಸಂಗ್ರಹಿಸುತ್ತಿದೆ.

ನಮ್ಮ ಬೆಂಬಲಿಗರಿಗೆ ಧನ್ಯವಾದಗಳು, ನಾವು ಈಗ ಕೊವಿಡ್‌ ಲಸಿಕೆಯನ್ನು ತಲುಪಿಸುವ ಅನುಭವ ಮತ್ತು ಪರಿಣತಿಯನ್ನು ಹೊಂದಿದ್ದೇವೆ ಎಂದು ಹೇಳಿದೆ.

ಹೆಚ್ಚು ಆದಾಯ ಪಡೆಯುವ 80 ರಾಷ್ಟ್ರಗಳಿಗೆ ಲಸಿಕೆ ಖರೀದಿಸಲು ಯುನಿಸೆಫ್ ಖರೀದಿ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತದೆ. ಈ ದೇಶಗಳು ಕೊವಾಕ್ಸ್‌ ಫೆಸಿಲಿಟಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದು ಮತ್ತು ತಮ್ಮ ಸ್ವಂತ ಹಣದಿಂದಲೇ ಲಸಿಕೆಗಳನ್ನು ಖರೀದಿಸುವುದಾಗಿ ತಿಳಿಸಿವೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next