Advertisement

ಪುತ್ತೂರು: ಮೂವರು ಪೊಲೀಸ್ ಸಿಬ್ಬಂದಿ ಸೇರಿ 9 ಜನರಿಗೆ ಕೋವಿಡ್ ಪಾಸಿಟಿವ್

05:24 PM Jul 16, 2020 | Team Udayavani |

ಪುತ್ತೂರು: ನಗರ ಮಹಿಳಾ ಪೊಲೀಸ್ ಠಾಣೆಯ ಜೀಪು ಚಾಲಕ, 27 ವರ್ಷದ ನಗರ ಪೊಲೀಸ್ ಠಾಣೆಯ ಸಿಬ್ಬಂದಿ, 23 ವರ್ಷದ ಅದೇ ಠಾಣೆಯ ಇನ್ನೋರ್ವ ಮಹಿಳಾ ಸಿಬ್ಬಂದಿ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ‌ಗುರುವಾರ ಒಟ್ಡು 9 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದೆ.

Advertisement

ಪೊಲೀಸರಲ್ಲಿ ಪತ್ತೆಯಾದ 3 ಪಾಸಿಟಿವ್ ‌ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಉಂಟಾಗಿದೆ. ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿಯ 32 ವರ್ಷದ ಮಹಿಳಾ ಸಿಬ್ಬಂದಿ, ಕಬಕ ಗ್ರಾಪಂ ವ್ಯಾಪ್ತಿಯ ಮುರ ನಿವಾಸಿ 63 ವರ್ಷದ ಮಹಿಳೆ, 23 ವರ್ಷದ ಉಪ್ಪಿನಂಗಡಿ ಹಳೆ ಬಸ್ಸು ನಿಲ್ದಾಣದ ಬಳಿಯ ನಿವಾಸಿ, ಪುತ್ತೂರು ಪುರಸಭಾ ವ್ಯಾಪ್ತಿಯ ಪಡೀಲು ನಿವಾಸಿ 29 ವರ್ಷದ ಮಹಿಳೆಯಲ್ಲಿ ಕೋವಿಡ್ ದೃಢಪಟ್ಟಿದೆ.

ಕಡಬ ತಾಲೂಕಿನಲ್ಲಿ ಮಸ್ಕತ್ ನಿಂದ ಜು. 12ರಂದು ಆಗಮಿಸಿದ ಕೋಡಿಂಬಾಳ ನಿವಾಸಿ 59 ವರ್ಷ ಪ್ರಾಯದ ವ್ಯಕ್ತಿ ಹಾಗೂ 6 ವರ್ಷದ ಅವರ ಪುತ್ರನಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರು ಈಗಾಗಲೇ ಕ್ವಾರಂಟೈನ್ ನಲ್ಲಿದ್ದಾರೆ.

ಜು.14ರಂದು ಕಬಕ ಗ್ರಾಪಂ ವ್ಯಾಪ್ತಿಯ ಮುರ ನಿವಾಸಿ ಮಹಿಳೆ ಊರಿಗೆ ಆಗಮಿಸಿದ್ದು, ಈಗಾಗಲೇ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದಾರೆ. ಪಡೀಲು ನಿವಾಸಿ ಮಹಿಳೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ಉಳಿದವರು ಸುಬ್ರಹ್ಮಣ್ಯದಲ್ಲಿ ಸಿದ್ದಪಡಿಸಲಾಗಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next