Advertisement

ಕೊಪ್ಪಳದಲ್ಲಿ ಕೋವಿಡ್ ಗೆ ಮತ್ತಿಬ್ಬರು ಬಲಿ: ಒಟ್ಟು ಮೃತರ ಸಂಖ್ಯೆ 22ಕ್ಕೆ ಏರಿಕೆ

01:51 PM Jul 29, 2020 | Mithun PG |

ಕೊಪ್ಪಳ: ಕೋವಿಡ್ ಸೋಂಕಿಗೆ ಕೊಪ್ಪಳ ಜಿಲ್ಲೆಯಲ್ಲಿ ಇಂದು ಮತ್ತಿಬ್ಬರು ಸಾವನ್ನಪ್ಪಿದ್ದಾರೆ‌. ಈ ಮೂಲಕ ಒಟ್ಟಾರೆ ಮೃತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯ ಯಲಬುರ್ಗಾ ತಾಲೂಕಿನ ಸೋಂಪುರ ಗ್ರಾಮದ 70 ವರ್ಷದ ವೃದ್ದ ಇಂದು ಮೃತಪಟ್ಟಿದ್ದಾರೆ. ಗಂಗಾವತಿ ನಗರದ 49 ವರ್ಷದ ಮಹಿಳೆ ಕೂಡ ಜು.27 ರಂದು ಸೋಂಕಿನಿಂದ ಬಳಲಿ ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಇಂದು ಮೃತಪಟ್ಟಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್  ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದ್ದು,  ಇದು ಸಹಜವಾಗಿಯೇ  ಜನರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next