Advertisement

ಜಿಲ್ಲೆ ಪ್ರವಾಸಿ ತಾಣಗಳು ಬಹುತೇಕ ಬಂದ್‌

05:12 PM Mar 16, 2020 | Suhan S |

ಕಾರವಾರ: ಕೊರೊನಾ ವೈರಸ್‌ನಿಂದ ಎಚ್ಚರಿಕೆಯಿಂದ ಇರಲು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಬಹುತೇಕ ಪ್ರವಾಸಿತಾಣಗಳನ್ನು ಮುಚ್ಚಲಾಗಿದೆ. ಪ್ರವಾಸಿಗರು, ಅದರಲ್ಲೂ ವಿದೇಶಿ ಪ್ರವಾಸಿಗರು ಜಿಲ್ಲೆಗೆ ಬರದಂತೆ ಸೂಚಿಸಲಾಗಿದೆ.

Advertisement

ಈಗಾಗಲೇ ಜಿಲ್ಲೆಯಲ್ಲಿರುವ ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ತಪಾಸಣೆಗೆ ಗುರಿಪಡಿಸಲಾಗುತ್ತಿದೆ. ಗೋಕರ್ಣದಲ್ಲಿ ಬಸ್‌ ನಿಲ್ದಾಣ ಮತ್ತು ಆಸ್ಪತ್ರೆಗಳಲ್ಲಿ ವಿದೇಶಿ ಪ್ರವಾಸಿಗರಿಗೆ ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ರೆಸಾರ್ಟ್‌ ಮತ್ತು ಹೋಂ ಸ್ಟೇಗಳಿಗೆ ಕಟ್ಟಪ್ಪಣೆ ಮಾಡಲಾಗಿದ್ದು, ಪ್ರವಾಸಿಗರಿಗೆ ಉಳಿಯಲು ಅವಕಾಶ ನೀಡದಂತೆ ಜಿಲ್ಲಾಡಳಿತ ಸೂಚಿಸಿದೆ. ಪ್ರತಿ ತಾಲೂಕಿಗೆ ವೈದ್ಯಾಧಿಕಾರಿಗಳನ್ನು ನೇಮಿಸಿ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ನೀಡಲಾಗಿದೆ. ಜನರು ಹೆಚ್ಚಾಗಿ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. 7ರಿಂದ 9ನೇ ತರಗತಿಗೆ ಸೋಮವಾರದಿಂದ ಆರಂಭವಾಗಬೇಕಿದ್ದ ಪರೀಕ್ಷೆಗಳನ್ನು ಮಾ. 31 ವರೆಗೆ ನಡೆಸದಿರಲು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸೂಚಿಸಿದೆ.

ಶಾಲೆಯಲ್ಲಿ 1-6ರ ವರೆಗಿನ ಫಲಿತಾಂಶ ಸಿದ್ಧತೆ ಹಾಗೂ ಮುಂದಿನ ಶೈಕ್ಷಣಿಕ ವರ್ಷದ ಪಠ್ಯಕ್ರಮದ ವೇಳಾಪಟ್ಟಿಗಳನ್ನು ಸಿದ್ಧ ಮಾಡಿಕೊಳ್ಳಲು ಶಿಕ್ಷಕರಿಗೆ ಸೂಚಿಸಲಾಗಿದೆ. ಎರಡು ಮೂರು ದಿನಗಳ ನಂತರ ಶಿಕ್ಷಕರಿಗೂ ಮನೆಯಲ್ಲಿ ಉಳಿಯಲು ಸೂಚಿಸುವ ಸಾಧ್ಯತೆಗಳಿವೆ. ಪರೀಕ್ಷೆಗಳು ಮುಂದೂಡಲ್ಪಟ್ಟ ಕಾರಣ ಮಕ್ಕಳು ಮನೆಯ ಹತ್ತಿರದ ಬಯಲುಗಳಲ್ಲಿ ಕ್ರಿಕೆಟ್‌ ಆಡುವಲ್ಲಿ ನಿರತರಾಗಿದ್ದರು. ಮಕ್ಕಳ ಆಟದ ದೃಶ್ಯಗಳು ನಗರದ ವಿವಿಧೆಡೆ ಕಂಡು ಬಂದವು.

ಪ್ರವಾಸಿ ತಾಣಗಳಲ್ಲಿ ಜನರಿಲ್ಲ  : ಸಿಂತೇರಿ ರಾಕ್‌, ಅತ್ತಿವೇರಿ, ಕುಳಗಿ ಪಕ್ಷಿಧಾಮ, ಅಣಶಿ ಸಫಾರಿ ರದ್ದು ಮಾಡಲಾಗಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರ ಬರುವಿಕೆ ನಿಷೇಧಿಸಲಾಗಿದೆ. ಹಾಗಾಗಿ ಈ ತಾಣಗಳಿಗೆ ಪ್ರವಾಸಿಗರ ಆಗಮನ ನಿಂತಿದೆ. ಕಡಲತೀರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಬಹುತೇಕ ನಿಂತಿದೆ. ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಆದರೆ ಇದು ಅನಿವಾರ್ಯ ಎಂಬ ಮಾತು ಕೇಳಿ ಬಂದಿದೆ.

ವಿದೇಶದಿಂದ ಬಂದವರ ಮೇಲೆ ನಿಗಾ : ವಿದೇಶದಿಂದ ಬಂದವರ ಮೇಲೆ ನಿಗಾ ಇರಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿದೇಶಕ್ಕೆ ಹೋಗಿ ಮರಳಿದವರು 14 ದಿನ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅಲ್ಲದೇ ಕಫದ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ಭಟ್ಕಳದ ಈರ್ವರು ಯುವಕರ ಮೇಲೆ ನಿಗಾ ಇಡಲಾಗಿತ್ತು. ಅವರ ಕಫದ ಪರೀಕ್ಷೆ ಮಾಡಲಾಗಿದ್ದು, ಕೊರೊನಾ ನೆಗೆಟಿವ್‌ ಬಂದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಎಲ್ಲೆಡೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸ್ವಚ್ಚತೆ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸಲಾಗುತ್ತಿದೆ. ನೆಗಡೆ, ತಲೆನೂವು, ಕೆಮ್ಮು ಮತ್ತು ಜ್ವರ ಬಂದಾಗ ತಕ್ಷಣ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳುವಂತೆ ಹಾಗೂ ಶೀನು ಬಂದಾಗ ಕರವಸ್ತ್ರ ಬಳಸುವಂತೆ ಸೂಚಿಸಲಾಗುತ್ತಿದೆ.

Advertisement

ಬಸ್‌ಗಳಲ್ಲಿ ಜನ ಸಂಚಾರ ವಿರಳ : ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜನ ಸಂಚಾರ ವಿರಳವಾಗಿದೆ. ಅಲ್ಪಸ್ವಲ್ಪ ಜನರು ಮಾತ್ರ ಬಸ್‌ ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸಹ ಇದರಿಂದ ಹೊಡೆತ ಬಿದ್ದಿದೆ. ಹೋಟೆಲ್‌, ಲಾಡ್ಜ್ಗಳಿಗೆ ಪ್ರವಾಸಿಗರು ಬರುವುದು ನಿಂತಿರುವ ಕಾರಣ ಜನ ಸಂಚಾರ ನಗರಗಳಲ್ಲಿ ವಿರಳವಾಗಿದೆ. ನಗರದ ನಿವಾಸಿಗಳು ಸಹ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಹೊರಗೆ ಬರುತ್ತಿದ್ದಾರೆ. ಬಿಟ್ಟರೆ ಬಹುತೇಕ ಜನರು ಮನೆಯಲ್ಲಿ ಕುಳಿತು ಆರೋಗ್ಯ ಎಮರ್ಜನ್ಸಿ ಎಂದು ಮಾತಾಡಿಕೊಳ್ಳತೊಡಗಿದ್ದಾರೆ.

ಭಾನುವಾರದ ಸಂತೆಯಲ್ಲಿ ಜನರಿಲ್ಲ : ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜನ ಸಂಚಾರ ವಿರಳವಾಗಿದೆ. ಅಲ್ಪಸ್ವಲ್ಪ ಜನರು ಮಾತ್ರ ಬಸ್‌ ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸಹ ಇದರಿಂದ ಹೊಡೆತ ಬಿದ್ದಿದೆ. ಹೋಟೆಲ್‌, ಲಾಡ್ಜ್ಗಳಿಗೆ ಪ್ರವಾಸಿಗರು ಬರುವುದು ನಿಂತಿರುವ ಕಾರಣ ಜನ ಸಂಚಾರ ನಗರಗಳಲ್ಲಿ ವಿರಳವಾಗಿದೆ. ನಗರದ ನಿವಾಸಿಗಳು ಸಹ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಹೊರಗೆ ಬರುತ್ತಿದ್ದಾರೆ. ಬಿಟ್ಟರೆ ಬಹುತೇಕ ಜನರು ಮನೆಯಲ್ಲಿ ಕುಳಿತು ಆರೋಗ್ಯ ಎಮರ್ಜನ್ಸಿ ಎಂದು ಮಾತಾಡಿಕೊಳ್ಳತೊಡಗಿದ್ದಾರೆ.

ವಿದೇಶಿ ಪ್ರವಾಸಿಗರು ಮತ್ತು ಪ್ರವಾಸಿಗರು ಜಿಲ್ಲೆಗೆ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೋವಿಡ್‌ -19 ಕ್ರೆಸಸ್‌ ಸಮಸ್ಯೆಯ ದಿನಗಳಲ್ಲಿ ಔಷಧಿ ಅಂಗಡಿಯವರು ಮಾನವೀಯತೆ ಮತ್ತು ಸಿದ್ಧಾಂತದ ಮೇಲೆ ನಡೆದುಕೊಳ್ಳುವಂತೆ ಸೂಚಿಸಲಾಗಿದೆ.  –ಡಾ| ಹರೀಶ್‌ ಕುಮಾರ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next