Advertisement

ಕೋವಿಡ್-19: 101 ದಿನದಲ್ಲಿ 1ಲಕ್ಷ ಜನರು ಬಲಿ, ಅರ್ಧದಷ್ಟು ಜನ ಕೇವಲ1 ವಾರದಲ್ಲಿ ಸಾವು

09:16 AM Apr 12, 2020 | Mithun PG |

ನ್ಯೂಯಾರ್ಕ್: ಕೋವಿಡ್-19 ವೈರಸ್ ಗೆ ಇಡೀ ಜಗತ್ತೆ ಬೆಚ್ಚಿಬಿದ್ದಿದ್ದು,  ನಿಯಂತ್ರಣಕ್ಕೆ ತರವಲ್ಲಿ ಶತಪ್ರಯತ್ನ ಮಾಡಲಾಗುತ್ತಿದೆ. ಏತನ್ಮಧ್ಯೆ ಆಘಾತಕಾರಿ ವಿಚಾರವೊಂದು ಬಯಲಾಗಿದ್ದು ಸರಾಸರಿ 90 ಸೆಕೆಂಡುವಿಗೆ ವ್ಯಕ್ತಿಯೊಬ್ಬ ವೈರಾಣುವಿಗೆ ತುತ್ತಾಗುತ್ತಿದ್ದಾನೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ತಿಳಿಸಿದೆ.

Advertisement

ಈಗಾಗಲೇ ಈ ಮಾರಕ ವೈರಸ್ ಕಂಡುಬಂದು 101 ದಿನ ಕಳೆದಿದ್ದು,  ಶುಕ್ರವಾರದ ವೇಳೆಗೆ  1 ಲಕ್ಷ  ಜನರು ಪ್ರಾಣ ತ್ಯೆಜಿಸಿದ್ದಾರೆ. ಇದರಲ್ಲಿ 50 ಸಾವಿರ ಜನರು ಕೇವಲ ಒಂದು ವಾರದಲ್ಲಿ ಬಲಿಯಾಗಿದ್ದಾರೆ. ಸಾವು ನೋವುಗಳು ದ್ವಿಗುಣಗೊಂಡಿದ್ದು, ಕಳೆದ ಒಂದು ವಾರದಿಂದ 6 ಲಕ್ಷ ಜನರಿಗೆ  ಸೋಂಕು ತಗುಲಿದೆ.  ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಭಾರತದ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ 183 ಹೊಸ ಪ್ರಕರಣ ಗಳು ದಾಖಲಾಗಿದ್ದು ಇವರಲ್ಲಿ 154 ಜನರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. ಹಾಗಾಗಿ ಶುಕ್ರವಾರ ಒಂದೇ ದಿನ ರಾಷ್ಟ್ರಾದ್ಯಂತ 855 ಪಾಸಿಟಿವ್ ವರದಿಯಾಗಿದ್ದು 19 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟಾರೆಯಾಗಿ 7,549 ಜನರು ಸೋಂಕಿತರಿದ್ದು ಮೃತರ ಪ್ರಮಾಣ 250ರ ಸನಿಹ ತಲುಪಿದೆ.

ಭಾರತದಲ್ಲಿ ವೈರಸ್ ಕಂಡುಬಂದು 39 ದಿನಗಳು ಕಳೆದಿದ್ದು ಸೋಂಕು ಹರಡುವಿಕೆ ಪ್ರಮಾಣ ಇತರ ದೇಶಗಳಿಗಿಂತ ಕಡಿಮೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಸರ್ಕಾರ ಲಾಕ್ ಡೌನ್ ಆದೇಶ ಹೊರಡಿಸಿರುವುದೇ  ಸೋಂಕು ವ್ಯಾಪಿಸದಿರಲು ಪ್ರಮುಖ ಕಾರಣವಾಗಿದೆ.

ಭಾರತದಲ್ಲಿ 6 ವಾರಗಳಿಗೊಮ್ಮೆ ಸೋಂಕು ದ್ವಿಗುಣಗೊಳ್ಳುತ್ತಿದ್ದರೇ ಇಂಗ್ಲೆಂಡ್ ನಲ್ಲಿ 3 ವಾರಗಳಲ್ಲಿ ಸೋಂಕಿತರ ಪ್ರಮಾಣ ದುಪ್ಪಟ್ಟಾಗುತ್ತಿದೆ. ಗಮನಿಸಬೇಕಾದ ಅಂಶವೆಂದರೇ ಭಾರತದಲ್ಲಿ ಸೋಂಕು ಪತ್ತೆ ಪರೀಕ್ಷೆ ವ್ಯಾಪಕ ಮಟ್ಟದಲ್ಲಿ ಆಗುತ್ತಿಲ್ಲ. ಈ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಿದರೆ ನಿಮಗೆ ನಿಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬುದು ತಿಳಿಯುತ್ತದೆ ಎಂದು ವಿಶ್ವವಿದ್ಯಾನಿಲಯದ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.

Advertisement

ವಿಶ್ವವನ್ನೇ ಕಂಗೆಡಿಸಿರುವ ಈ ವೈರಾಣುವಿಗೆ ಒಟ್ಟಾರೆಯಾಗಿ 1,02,734 ಜನರು ಸಾವನ್ನಪ್ಪಿದ್ದು, 16,99,631 ಜನರು ಸೋಂಕುವಿನಿಂದ ಬಳಲುತ್ತಿದ್ದಾರೆ.  ಅಮೆರಿಕಾದಲ್ಲೇ ಸೋಂಕಿತರ ಪ್ರಮಾಣ ಹೆಚ್ಚಿದ್ದು ಶುಕ್ರವಾರ ಒಂದೇ ದಿನ 2 ಸಾವಿರ ಜನ ಮೃತರಾಗಿರುವುದು ದಾಖಲೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next