Advertisement

ಕೋವಿಡ್19ಗೆ ಜಗತ್ತಿನಾದ್ಯಂತ 1,19,699 ಬಲಿ: ಭಾರತದಲ್ಲಿ 10ಸಾವಿರ ದಾಟಿದ ಸೋಂಕಿತರ ಸಂಖ್ಯೆ

09:08 AM Apr 15, 2020 | Mithun PG |

ನ್ಯೂಯಾರ್ಕ್: ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಮಹಾಮಾರಿ ದಿನೇ ದಿನೇ ತನ್ನ ಆರ್ಭಟವನ್ನು ಮುಂದುವರೆಸಿದ್ದು ಈವರೆಗೂ 1,19,699 ಜನರು ಪ್ರಾಣ ತ್ಯೆಜಿಸಿದ್ದಾರೆ. ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬರುತ್ತಿದ್ದು 19,25,138 ಜನರು ಈ ವೈರಾಣುವಿನಿಂದ ಬಳಲುತ್ತಿದ್ದಾರೆ.

Advertisement

ವೈರಸ್ ಹೊಡೆತಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕಾ ನಲುಗಿ ಹೋಗಿದ್ದು ಈ ದೇಶದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ವೈರಸ್​ ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರಿದ ಪರಿಣಾಮ ಅಮೆರಿಕದಲ್ಲಿ ಕೋವಿಡ್ 19 ಮಿತಿಮೀರಿ ಬೆಳೆಯಲು ಕಾರಣವಾಗಿದ್ದು ಈಗಾಗಲೇ 23,644 ಜನರು   ಕೊನೆಯುಸಿರೆಳೆದಿದ್ದಾರೆ. ಸೋಂಕಿತರ ಸಂಖ್ಯೆ 5.87  ಲಕ್ಷ ದಾಟಿದೆ. ನ್ಯೂಯಾರ್ಕ್​ನಲ್ಲಂತೂ ವೈರಸ್ ರುದ್ರ ನರ್ತನ ಮೆರೆದಿದೆ.

ಅಮೆರಿಕಾದ ನಂತರ ಸ್ಪೇನ್ ಕೂಡ ಈ ವೈರಸ್ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು 1,70,099 ಜನರಲ್ಲಿ ಸೋಂಕು ದೃಢಪಟ್ಟಿದ್ದು, 17,756 ಜನರು ಮೃತಪಟ್ಟಿದ್ದಾರೆ. ಈ ಮೊದಲು ಅತೀ ಹೆಚ್ಚು ನಲುಗಿದ್ದ ದೇಶವಾದ ಇಟಲಿಯಲ್ಲಿ 1,59,516 ಜನರಿಗೆ ಸೋಂಕು ಅಂಟಿದ್ದು, ಸಾವಿನ ಸಂಖ್ಯೆ 20 ಸಾವಿರದ ಗಡಿ ತಲುಪಿದೆ. ಫ್ರಾನ್ಸ್​, ಜರ್ಮನಿಯಲ್ಲೂ  ಸೋಂಕಿತರ ಪ್ರಮಾಣ ಮತ್ತು ಸಾವನ್ನಪ್ಪುವವರ ಪ್ರಮಾಣ ಪ್ರತಿನಿತ್ಯ ಏರಿಕೆಯಾಗುತ್ತಿದೆ.

ಭಾರತದಲ್ಲಿ ಕೂಡ  ದಿನದಿಂದ ದಿನಕ್ಕೆ ಈ ಮಾರಕ ವೈರಸ್ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು,  ಕಳೆದ 24 ಗಂಟೆಗಳಲ್ಲಿ ಸುಮಾರು 796 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಮೃತರ ಸಂಖ್ಯೆ 339 ಮತ್ತು ಸೋಂಕಿತರ ಸಂಖ್ಯೆ 10,453 ರ ಗಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು ಇಲ್ಲಿಯೇ ಅತೀ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next