Advertisement

ಕೋವಿಡ್‌: ಒಮ್ಮತದ ಹೋರಾಟ ಅಗತ್ಯ

03:45 PM Jun 25, 2020 | sudhir |

ವಿಶ್ವಸಂಸ್ಥೆ: ಕೋವಿಡ್‌ ನಿಯಂತ್ರಣಕ್ಕೆ ಜಾಗತಿಕವಾಗಿ ಸಹಕಾರವಿಲ್ಲ. ಇದರಿಂದ ಕೋವಿಡ್‌ ಹಬ್ಬುತ್ತಲೇ ಇದೆ. ಪ್ರತಿ ದೇಶಗಳು ತಮ್ಮಲ್ಲಿನ ಸ್ಥಿತಿಗತಿ ಬಗ್ಗೆ ಮಾತ್ರ ಚಿಂತಿಸುತ್ತಿರುವುದರಿಂದ ಕೋವಿಡ್‌ ನಿಯಂತ್ರಣದ ಹೋರಾಟ ದುರ್ಬಲಗೊಂಡಿದೆ ಎಂದು ವಿಶ್ವಸಂಸ್ಥೆ ಮುಖ್ಯ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರ್ರರ್ಸ್‌ ಹೇಳಿದ್ದಾರೆ.

Advertisement

ಅಸೋಸಿಯೇಟೆಡ್‌ ಪ್ರಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶಗಳು ಇಂತಹ ಸಂದರ್ಭದಲ್ಲಿ ಒಬ್ಬರೇ ಆಗಿ ಹೋರಾಡಲು ಸಾಧ್ಯವಿಲ್ಲ. ಹಲವಾರು ದೇಶಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಜಾಗತಿಕ ಸಹಕಾರಿ ಈ ವೇಳೆ ಅಗತ್ಯವಾಗಿ ಬೇಕಾಗಿದೆ ಎಂದವರು ಹೇಳಿದ್ದಾರೆ.

ಕೋವಿಡ್‌ ಚೀನದಲ್ಲಿ ಶುರುವಾಗಿ ಯುರೋಪ್‌ ದೇಶಕ್ಕೆ ಪಸರಿಸಿತು. ಬಳಿಕ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಫ್ರಿಕಾ, ಭಾರತದಲ್ಲಿ ಇದರ ಪರಿಣಾಮ ಹೆಚ್ಚಾಗಿದೆ. ಅಲ್ಲದೇ ಎರಡನೇ ಬಾರಿಗೆ ಕೋವಿಡ್‌ ಸೋಂಕು ಹರಡಲಿದೆ ಎಂದೂ ತಜ್ಞರು ಎಚ್ಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಮ್ಮತದ ಹೋರಾಟ ಅಗತ್ಯ ಎಂದು ಹೇಳಿದ್ದಾರೆ. ದೇಶಗಳು ತಮ್ಮ ಸ್ವಸಾಮರ್ಥ್ಯಕ್ಕೆ ಅನುಗುಣವಾಗಿ ಒಮ್ಮತದಲ್ಲಿ ಹೋರಾಟ ನಡೆಸಬೇಕಿದೆ. ರೋಗ ಪತ್ತೆ, ಚಿಕಿತ್ಸೆಯಲ್ಲಿ ಸಹಕಾರ ಬೇಕು. ಔಷಧ ಶೋಧದಲ್ಲೂ ನೆರವು ನೀಡಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next