Advertisement

ಮನೆಯಲ್ಲೇ ಚಿಕಿತ್ಸೆ ಪಡೆದು ಕೋವಿಡ್ ಗೆದ್ದ 105 ವರ್ಷದ ಕಮಲಮ್ಮ

02:52 PM Sep 12, 2020 | sudhir |

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಹಿರಿಯ ಜೀವ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆದು ಕೋವಿಡ್ ಗೆದ್ದು ಗುಣಮುಖರಾಗಿ ಎಲ್ಲರ ಗಮನ ಸೆಳೆದಿದ್ದಾರೆ.

Advertisement

ಕಳೆದ ವಾರವರಷ್ಟೇ ಅವರಿಗೆ ಕೋವಿಡ್ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಅವರ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಮ್‌ ಐಸೋಲೇಶನ್‌ ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಜ್ವರ ಸೇರಿದಂತೆ ಮೊದಲಾದ ತೊಂದರೆ ಅನುಭವಿಸುತ್ತಿದ್ದ ಇವರನ್ನು ಕೋವಿಡ್‌ ಪರೀಕ್ಷೆ ಒಳಪಡಿಸಿದಾಗ ವರದಿಯಲ್ಲಿ ಪಾಸಿಟಿವ್‌ ಬಂದಿತ್ತು. ಉಳಿದಂತೆ ಯಾವುದೇ ತೊಂದರೆ ಇರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದರು. ಒಂದು ವಾರ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.

ಮತ್ತೂಮ್ಮೆ ಟೆಸ್ಟ್‌ ಮಾಡಿಸಿದಾಗ ನೆಗಟಿವ್‌ ಬಂದಿದ್ದು, ಕೋವಿಡ್‌ ಗೆದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಕಮಲಮ್ಮ ಅವರಿಗೆ ಇತರೆ ಕಾಯಿಲೆಗಳು ಇರದೆ ಇರುವುದರಿಂದ ಆಸ್ಪತ್ರೆಗೆ ಹೋಗುವುದಕ್ಕೆ ಹಿಂದೇಟು ಹಾಕಿದ್ದರು. ಹೀಗಾಗಿ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಯಿತು. ಅವರೀಗ ಕೋವಿಡ್ ಗೆದ್ದು ಬಂದಿದ್ದಾರೆ. ಇನ್ನೂ ಕಮಲಮ್ಮ ಅವರಿಗೆ ಚಿಕಿತ್ಸೆ ನೀಡಿದ ಡಾ| ಶ್ರೀನಿವಾಸ ಹ್ಯಾಟಿ ಅವರು, ನನ್ನ ವೃತ್ತಿ ಬದುಕಿನಲ್ಲಿ ಇದು ಸವಾಲು ಎನ್ನುವಂತೆ ಆಗಿತ್ತು. ಆದರೂ ಯಾವುದೇ ಕಾಯಿಲೆಗಳು ಇರದೆ ಇರುವುದರಿಂದ ಸಾಮಾನ್ಯ ಚಿಕಿತ್ಸೆ ನೀಡಲಾಗಿದೆ. ಈಗ ಅವರ ಕೋವಿಡ್‌ ವರದಿ ನೆಗಟಿವ್‌ ಬಂದಿದೆ. ನಿಜಕ್ಕೂ ಕೋವಿಡ್‌ಗೆ ಭಯ ಪಡುವವರು ಅಜ್ಜಿಯನ್ನು ನೋಡಿ ಕಲಿಯಬೇಕಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next