Advertisement

ಗ್ರಾಮಾಂತರ ಪ್ರದೇಶಕ್ಕೂ ಕಾಲಿಟ್ಟ ಕೋವಿಡ್

06:06 PM Apr 28, 2021 | Team Udayavani |

ಸಕಲೇಶಪುರ: ತಾಲೂಕಿನ ಕೆಲವು ಭಾಗಗಳಿಗೆಸೀಮಿತವಾಗಿ ಕೋವಿಡ್ ಗ್ರಾಮಾಂತರ ಪ್ರದೇಶಗಳಿಗೆ ವ್ಯಾಪಿಸುತ್ತಿದ್ದು ಜನತೆ ಆತಂಕಕ್ಕೀಡಾಗಿದ್ದಾರೆ.ತಾಲೂಕಿನ ಹುಲ್ಲಹಳ್ಳಿ ಹಾಗೂ ಮಠಸಾಗರಗ್ರಾಮದಲ್ಲಿ ಕೋವಿಡ್‌ ನಿಂದ ಎರಡು ಸಾವು ಸಂಭವಿಸಿದೆ.

Advertisement

ತಾಲೂಕಿನಲ್ಲಿ ತಾಲೂಕು ಆಸ್ಪತ್ರೆ ಸೇರಿ ಒಟ್ಟು16 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಒಟ್ಟಾರೆಯಾಗಿ 357 ಸಕ್ರಿಯ ಕೊರೊನಾ ಪ್ರಕರಣಗಳಿವೆ.ಕಳೆದ 1 ವರ್ಷದಿಂದ ಸುಮಾರು 18 ಮಂದಿಕೋವಿಡ್‌ ನಿಂದ ತಾಲೂಕಿನಲ್ಲಿ ಮೃತಪಟ್ಟಿದ್ದಾರೆ.

ಇನ್ನು ಹಲವರ ವರದಿ ಬರಬೇಕಾಗಿದ್ದು ಜತೆಗೆಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೆಚ್ಚಿನ ಜನ ಸ್ವಗ್ರಾಮಗಳಿಗೆ ಮಗಳಿಗೆ ಬರುವ ನಿರೀಕ್ಷೆಯಿದ್ದು ಇದರಿಂದ ಮತ್ತಷ್ಟು ಗ್ರಾಮಗಳಿಗೆ ಕೋವಿಡ್‌ ಹರಡುವಸಾಧ್ಯತೆಯಿದೆ. ಒಟ್ಟಾರೆಯಾಗಿ ಕೋವಿಡ್‌ 2ನೇಅಲೆ ತಾಲೂಕನ್ನು ವ್ಯಾಪಕವಾಗಿ ಬಾದಿಸುತ್ತಿರುವುದು ಆತಂಕಕಾರಿ.

ಮೇಲಿನ ವರದಿಗಳು ಕೋವಿಡ್‌ಪರೀಕ್ಷೆಗೆ ಸ್ಯಾಂಪಲ್‌ ನೀಡಿರುವ ಆಧಾರದಲ್ಲಿ ಮಾಡಲಾಗಿದ್ದು ವಾಸ್ತವವಾಗಿ ತಾಲೂಕಿನ ಕೋವಿಡ್‌ ಪ್ರಕರಣ ಇನ್ನೂ ಹೆಚ್ಚಿದೆ. ಏಕೆಂದರೆ ಹಲವರು ಕೋವಿಡ್‌ ಲಕ್ಷಣ ಕಾಣಿಸಿಕೊಂಡರೂ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದರೆ ಇನ್ನು ಕೆಲವರು ಕೋವಿಡ್‌ ಲಕ್ಷಣ ಇದ್ದರೂ ಚಿಕಿತ್ಸೆ ಮಾಡಿಸಲು ಮುಂದಾಗದೆ ಅಡ್ಡಾದಿಡ್ಡಿತಿರುಗಾಡುತ್ತಿದ್ದಾರೆ.

ಇನ್ನು ಕೆಲವರಿಗೆ ಕೋವಿಡ್‌ಲಕ್ಷಣ ಇಲ್ಲದ ಕಾರಣ ಎಲ್ಲೆಂದರಲ್ಲಿ ಹೋಗುತ್ತಿದ್ದುಇಂತಹವರಿಂದ ಸಹ ತಾಲೂಕಿನಲ್ಲಿ ಕೋವಿಡ್‌ಪ್ರಕರಣ ಹೆಚ್ಚುತ್ತಿದೆ. ಅಧಿಕಾರಿಗಳು ಕೋವಿಡ್‌ನಿಯಂತ್ರಣಕ್ಕೆ ವ್ಯಾಪಕ ಕಸರತ್ತು ಮಾಡುತ್ತಿದ್ದರೂಜನರ ನಿರ್ಲಕ್ಷ್ಯದಿಂದ ಪ್ರಕರಣ ಹೆಚ್ಚಳವಾಗುತ್ತಿದೆ.

Advertisement

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next