Advertisement

ಡಿಜಿಟಲ್‌ ಪಾವತಿ ಉತ್ತೇಜಿಸಿದ ಕೋವಿಡ್‌

02:30 PM Jun 05, 2020 | mahesh |

ನ್ಯೂಯಾರ್ಕ್‌: ಪ್ರಮುಖ ರೆಸ್ಟೋರೆಂಟ್‌ಗಳು ಇದೀಗ ಸಂಪೂರ್ಣ ಡಿಜಿಟಲ್‌ ಪಾವತಿಯತ್ತ ಹೊರಳಿದ್ದು, ಅದನ್ನೇ ಪ್ರಚುರಪಡಿಸುತ್ತಿವೆ. ಕೋವಿಡ್‌ ವೈರಸ್‌ ಹರಡುವ ಮೊದಲೇ ಡಿಜಿಟಲ್‌ ಪಾವತಿ ಸಾಕಷ್ಟು ಟ್ರೆಂಡ್‌ ಆಗಿತ್ತಾದರೂ, ಇತ್ತೀಚಿನ ದಿನಗಳಲ್ಲಿ ವೈರಸ್‌ ಹರಡುವಿಕೆ ಕಾರಣದಿಂದ ಜನರು ನಗದು ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಹಜವಾಗಿ ಡಿಜಿಟಲ್‌ ಪಾವತಿಗೆ ಉತ್ತೇಜನ ಸಿಕ್ಕಿದೆ.

Advertisement

ಇದಕ್ಕೆ ಪೂರಕವಾಗಿ ಡಿಜಿಟಲ್‌ ಪಾವತಿಯ ಎಲ್ಲ ಮಾದರಿಗಳನ್ನು ಹೊಟೇಲುಗಳೂ ಅಳವಡಿಸಿಕೊಂಡಿದ್ದು, ಆ್ಯಪ್‌ ಮೂಲಕ ಆರ್ಡರ್‌ ಪಡೆದುಕೊಳ್ಳುವುದು, ವಾಯ್ಸ ಮೆಸೇಜ್‌ಗಳಿಂದಲೂ ಆರ್ಡರ್‌ ಪಡೆಯುವುದು, ಡಿಜಿಟಲ್‌ ಪಾವತಿ, ಡೆಲಿವರಿ ವ್ಯವಸ್ಥೆಗಳನ್ನು ಮಾಡುತ್ತಿವೆ. ಗ್ರಾಹಕರು ವೈರಸ್‌ನ ಭೀತಿಯಿಂದಾಗಿ ಏನನ್ನೂ ಮುಟ್ಟದಿದ್ದರೂ ಮೊಬೈಲ್‌ ಒಂದನ್ನು ಮುಟ್ಟಿದರೆ ಸಾಕು. ಎಲ್ಲ ರೀತಿಯ ಸೇವೆಗಳು ಅವರಿಗೆ ದೊರಕುತ್ತವೆ. ಹೊಸ ಸಂದರ್ಭದಲ್ಲಿ ಆ್ಯಪ್‌ನಲ್ಲಿ ಆರ್ಡರ್‌ ವ್ಯವಸ್ಥೆಯೊಂದಿಗೆ ವಾಯ್ಸ ಆರ್ಡರ್‌ ವ್ಯವಸ್ಥೆಯನ್ನೂ ಶುರುಮಾಡಲಾಗಿದೆ. ಅಲ್ಲದೆ ಗ್ರಾಹಕರು ಹೊಟೇಲ್‌ಗೆ ಭೇಟಿ ನೀಡುತ್ತಿದ್ದರೆ ಅದಕ್ಕೆ ಪೂರಕ ವ್ಯವಸ್ಥೆ, ಆಹಾರಗಳನ್ನು ತಯಾರು ಮಾಡಲೂ ಅವಕಾಶವಿದೆ, ಇದು ಅಂಗಡಿಗಳಲ್ಲೂ ಬಳಕೆ ಮಾಡುವಂತೆ ಇದೆ.

ಇದೇ ವೇಳೆ ಹೊಟೇಲ್‌ಗ‌ಳು ಮೊಬೈಲ್‌ ಆರ್ಡರ್‌ಗಳನ್ನು ಪಡೆಯುವ ಮತ್ತು ಆರ್ಡರ್‌ ಡೆಲಿವರಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಾಗಿ ಹೇಳಿವೆ. ರೆಸ್ಟೋರೆಂಟ್‌ಗಳು, ಇತರ ಆ್ಯಪ್‌ಗ್ಳ ಮೂಲಕ ಗ್ರಾಹಕರು ಆರ್ಡರ್‌ ಮಾಡುವಾಗ, ಆದಷ್ಟು ಎಚ್ಚರಿಕೆಯಿಂದ ಇರಬೇಕು. ವಿಳಾಸಗಳನ್ನು ನೀಡುವುದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next