Advertisement

ಕೋವಿಡ್ ಗೆ ಬಲಿಯಾದ ವಾರಿಯರ್ಸ್ : ಬ್ಲ್ಯಾಕ್ ಫಂಗಸ್ ಶಂಕೆ ?

10:42 AM May 19, 2021 | Team Udayavani |

ಮೈಸೂರು : ಕ್ರೂರಿ ಕೋವಿಡ್ ಗೆ ಇಬ್ಬರು ಕೋವಿಡ್ ವಾರಿಯರ್ಸ್ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

Advertisement

ಮೈಸೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ  ವಿನೋದ್ (28) ಹಾಗೂ ಸೋಂಕಿತರ ಮೃತ ದೇಹವನ್ನು ಸಾಗಿಸುವ ವಾಹನದ ಚಾಲಕನಾಗಿದ್ದ ರವಿ (38) ಮೃತರಾದವರು.

ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ, 2.67 ಲಕ್ಷ ಕೋವಿಡ್ ಪ್ರಕರಣ ಪತ್ತೆ

ರವಿಗೆ 16 ದಿನದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದಾರೆ. ಇವರಿಗೆ ಬ್ಲ್ಯಾಕ್ ಫಂಗಸ್ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು ಎನ್ನಲಾಗಿದೆ.

ಮೃತ ದೇಹವನ್ನು ಸಾಗಿಸುವ ವಾಹನದ ಚಾಲಕನಾಗಿದ್ದ ವಿನೋದ್ ಗೆ ಮೂರು ದಿನದ‌ ಹಿಂದೆ ಸೋಂಕು‌ ಧೃಡವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Advertisement

ಇಬ್ಬರ ಸಾವಿಗೆ ಬ್ಲ್ಯಾಕ್ ಫಂಗಸ್ ಕಾರಣವೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next