Advertisement

ಕೊರೊನಾ ವಿರುದ್ಧ ಸಮರ ಸಾರಲು “ಕಿಯಾಸ್ಕ್”

03:37 PM May 09, 2021 | Team Udayavani |

ಗದಗ: ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಜನರಿಗೆ ಉತ್ತಮ ನಾಗರಿಕಸೌಲಭ್ಯಗಳನ್ನು ಕಲ್ಪಿಸುವ ಮೂಲಕ ದೇಶಕ್ಕೆ ನಂ.1 ಸ್ಥಾನ ಗಳಿಸಿರುವ ಹುಲಕೋಟಿಗ್ರಾಮದಲ್ಲಿ ಜನರಿಗೆ ಔಷಧಯುಕ್ತ ಹಬೆ ಸೌಲಭ್ಯ, ರೋಗ ನಿರೋಧಕ ಶಕ್ತಿ ವೃದ್ಧಿಸುವಔಷಧ ವಿತರಣೆ ಮೂಲಕ ಕೊರೊನಾ ವಿರುದ್ಧ ಸಮರ ಸಾರಲಾಗಿದೆ.ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಆಯುಷ್‌ ಇಲಾಖೆ ಇಂತಹ ಪ್ರಯತ್ನ ನಡೆಸಿದೆ.

Advertisement

ಕೊರೊನಾ ಹರಡದಂತೆ ಸಾರ್ವಜನಿಕರಿಗೆ ವೈಜ್ಞಾನಿಕವಾಗಿ ಮುನ್ನೆಚ್ಚರಿಕೆಯಪಾಠ ಬೋಧಿಸಲಾಗುತ್ತಿದೆ. ಜನರ ಆಕರ್ಷಣೆಗಾಗಿ ವಿಶಿಷ್ಟವಾದ ಕಿಯಾಸ್ಕ್(ಚೌಕಾಕಾರದಟೆಂಟ್‌) ಸ್ಥಾಪಿಸಿ, ಕೋವಿಡ್‌ ಸುರಕ್ಷತಾ ಕ್ರಮಗಳ ಕಾರ್ಯಕ್ರಮ ನಡೆಸಲಾಗುತ್ತಿದೆ.

ಮುಗಿ ಬಿದ್ದ ಜನ: ಕಿಯಾಸ್ಕ್ಗೆ ಭೇಟಿ ನೀಡುವವರನ್ನು ಮೊದಲಿಗೆ ಥರ್ಮಲ್‌ ಸ್ಕ್ಯಾನರ್‌ನಿಂದ ದೇಹದ ಉಷ್ಣಾಂಶ, ಪಲ್ಸ್‌ ಆಕ್ಸಿಮೀಟರ್‌ ಮೂಲಕ ಉಸಿರಾಟ ಪ್ರಮಾಣಪರೀಕ್ಷಿಸಲಾಗುತ್ತದೆ. ಬಳಿಕ ಶುಂಠಿ, ಹವೀಜ, ಜೀರಿಗೆ, ಲವಂಗ, ಯಾಲಕ್ಕಿ, ದಾಲಚಿನ್ನಿ, ಅರಿಷಿಣ ಪುಡಿ ಮಿಶ್ರಿತ ಬಿಸಿ ಬಿಸಿ ಕಷಾಯ ನೀಡಲಾಗುತ್ತದೆ.

ಔಷ ಧಯುಕ್ತ ಬಿಸಿ ಹಬೆ ತೆಗೆದುಕೊಳ್ಳಲು ಮಾಡಿರುವ ವಿಶೇಷ ವ್ಯವಸ್ಥೆ ಎಲ್ಲರಆಕರ್ಷಣೆಗೆ ಕಾರಣವಾಗಿದೆ. ಗ್ಯಾಸ್‌ ಸ್ಟೌವ್‌ ಮೇಲೆ ಕುಕ್ಕರ್‌ಗೆ ಪೈಪ್‌ಲೈನ್‌ ಮೂಲಕನೇರವಾಗಿ ಬಿಸಿಯಾದ ಹಬೆ ಪಡೆಯಬಹುದು. ವಿಶೇಷವಾಗಿ ಯೂನಾನಿ ಪದ್ಧತಿ ಆರ್ಕ್‌ಅಜೀಬ್‌ ದ್ರಾವಣ ಮಿಶ್ರಿತ ಹಬೆಯಿಂದ ಕೆಲವೇ ಕ್ಷಣದಲ್ಲಿ ಜನರು ಬೆವರುತ್ತಾರೆ.ಇದರಿಂದ ಅನೇಕರಿಗೆ ಉಸಿರಾಟ ಸಂಬಂಧಿ ತ ಸಮಸ್ಯೆಗಳು ಶೀಘ್ರದಲ್ಲಿ‌ಯೇ ನಿವಾರಣೆಯಾಗಿವೆ.

ನೆಗಡಿ, ಗಂಟಲು ಕಟ್ಟುವಿಕೆ, ಪಿತ್ತ ಮತ್ತಿತರೆ ಸಮಸ್ಯೆಗಳೂ ಪರಿಹಾರವಾಗಿದ್ದು, ‌ ಪ್ರತಿನಿತ್ಯಸುಮಾರು 80 ರಿಂದ 120 ಜನರು ಭೇಟಿ ನೀಡುತ್ತಿದ್ದಾರೆ ಎನ್ನುತ್ತಾರೆ ಕಿಯಾಸ್ಕ್ಮೇಲ್ವಿಚಾರಕ ಆಯುಷ್‌ ವೈದ್ಯ ಡಾ|ಕಮಲಾಕರ್‌ ಅರಳೆ.

Advertisement

ಬಿಸಿ ಹಬೆ ತೆಗೆದುಕೊಂಡ ನಂತರ ಪ್ರತಿಯೊಬ್ಬರಿಗೂ 5 ದಿನಕ್ಕೆ ಹೋಮಿಯೋಪಥಿ ಔಷಧ ಆರ್ಸೆನಿಕ್‌ ಅಲ್ಬಂ-30, ಆರ್ಯುವೇದ ಔಷಧ ‌ ಅÍಗಂ‌Ì ಧವಟಿ, ಯುನಾನಿ ಪದ್ಧತಿಯಆರ್ಕ ಅಜೀಬ ದ್ರಾವಣವನ್ನು ಉಚಿತವಾಗಿ ನೀಡಲಾಗುತ್ತದೆ. ಇದೇ ವೇಳೆ ಗ್ರಾಮಸ್ಥರಿಗೆ ಕೊರೊನಾ ಬಗ್ಗೆ ತಿಳಿವಳಿಕೆ ನೀಡಿ, ತಪ್ಪು ಗ್ರಹಿಕೆಗಳನ್ನು ನಿವಾರಿಸಿ ಸೋಂಕು ತಡೆಗೆ ಸರಕಾರದ ಕೋವಿಡ್‌-19 ಮಾರ್ಗಸೂಚಿ ಪಾಲಿಸುವಂತೆ ವೈದ್ಯರು ಮನವರಿಕೆ ಮಾಡುತ್ತಿದ್ದಾರೆ.

ಈಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ನಡೆಸಿದ ವಿಶೇಷ ಪ್ರಯತ್ನಕ್ಕೆ ಗ್ರಾಮಸ್ಥರಿಂದಲೂ ಮೆಚ್ಚುಗೆ ಮಾತು ಕೇಳಿ ಬರುತ್ತಿವೆ.

ಶಾಸಕರು, ಆಯುಷ್‌ ಇಲಾಖೆ ಹಾಗೂ ಗ್ರಾಪಂನಿಂದತಾತ್ಕಾಲಿಕವಾಗಿ ಸ್ಥಾಪಿಸಿದ ಈ ಕೇಂದ್ರದಿಂದ ಗ್ರಾಮದಅನೇಕರಿಗೆ ಅನುಕೂಲವಾಗಿದೆ. ಇಲ್ಲಿ ವಿತರಿಸಿದ ಆರ್ಕ್‌ ಅಜಿಬ್‌ದ್ರಾವಣದಿಂದ ಹೋಂ ಐಸೋಲೇಷನ್‌ನಲ್ಲಿದ್ದ ಸೋಂಕಿತರುಮನೆಯಲ್ಲಿ ಹಬೆ ತೆಗೆದುಕೊಳ್ಳುತ್ತಿದ್ದಾರೆ. ಬಹುತೇಕರಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ.

ಮೋಹನ ದುರ್ಗಣ್ಣವರ, ತಾಪಂ ಮಾಜಿ ಅಧ್ಯಕ್ಷ

 

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next