Advertisement

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ವೈರಸ್ ಸಮುದಾಯಕ್ಕೆ ಹರಡಿಲ್ಲ: ಜಿಲ್ಲಾಧಿಕಾರಿ ಜಿ.ಜಗದೀಶ್‌

04:14 PM Jul 01, 2020 | keerthan |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್‌ ಸಮುದಾಯಕ್ಕೆ ಹರಡಿರುವುದಕ್ಕೆ ಯಾವುದೇ ಪುರಾವೆಯಾಗಿ ಪ್ರಕರಣಗಳು ಸಿಕ್ಕಿಲ್ಲ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಟ್ರಾವೆಲ್‌ ಹಿಸ್ಟರಿ ಇಲ್ಲದ ವ್ಯಕ್ತಿಯಲ್ಲಿ ಕೋವಿಡ್-19 ಕಂಡು ಬಂದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

Advertisement

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ನಿತ್ಯ 250 ರಿಂದ 300 ಜನರು ರೈಲು ಹಾಗೂ ಬೇರೆ ವಾಹನಗಳಲ್ಲಿ ಜಿಲ್ಲೆಗೆ ಬರುತ್ತಿದ್ದಾರೆ. ಅವರಲ್ಲಿ ವಿಶೇಷ ವರ್ಗ, ರೋಗದ ಲಕ್ಷಣ ಇರುವವರನ್ನು ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್-19 ಪಾಸಿಟಿವ್‌ ಪ್ರಕರಣ ಕಂಡು ಬರುತ್ತಿದೆ ಎಂದರು.

ಹಿಂದೆ ಮಾರ್ಗಸೂಚಿ ಅನ್ವಯ ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಇದೀಗ ಹೊಸ ಮಾರ್ಗಸೂಚಿ ಪ್ರಕಾರ ಅವರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿಲ್ಲ. ಈಗ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ ಸಾಕಷ್ಟು ಮಂದಿಯಲ್ಲಿ ಸೋಂಕು ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳಲ್ಲಿ ನಿತ್ಯ ಸುಮಾರು ಆರು ಪ್ರಕರಣಗಳು ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್-19 ವಾರಿಯರ್ಸ್‌, ವೈದ್ಯರು ಹಾಗೂ ಪೊಲೀಸ್‌, ಬಸ್‌ ಚಾಲಕರು ಹಾಗೂ ಜವಳಿ ವ್ಯಾಪಾರಿಗೆ ಬೆಂಗಳೂರು ಹೋಗಿ ಬಂದ ಪರಿಣಾಮ ಪಾಸಿಟಿವ್‌ ಬಂದಿದೆ.  ಆದರೆ ಸಮುದಾಯಕ್ಕೆ ಹರಡಿರುವಂತಹ ಯಾವುದೇ ಪ್ರಕರಣಗಳು ಈವರೆಗೆ ಕಂಡುಬಂದಿಲ್ಲ. ಈ ರೋಗ ಸಮುದಾಯಕ್ಕೆ ಹೋಗದಂತೆ ತಡೆ ಯಲು ಮನೆಮನೆ ಸರ್ವೆ ಮಾಡಲಾಗುತ್ತಿದೆ. ಉಸಿರಾಟ, ಜ್ವರ, ಶೀತ, ಕೆಮ್ಮು ಇರುವವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆದುದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ವಹಿಸಬೇಕಿರುವುದು ಬಹಳ ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next