Advertisement

ಕೋವಿಡ್ ವೈರಸ್‌: ಧಾರಾವಿಯಲ್ಲಿ ಮರಣ ಪ್ರಮಾಣದಲ್ಲಿ ಭಾರೀ ಇಳಿಕೆ

05:35 PM Jun 06, 2020 | Suhan S |

ಮುಂಬಯಿ, ಜೂ. 5: ನಗರದ ಕೋವಿಡ್ ವೈರಸ್‌ ಕಾಯಿಲೆಯ ಕೇಂದ್ರಬಿಂದುವಾಗಿರುವ ಜನನಿಭಿಡ ಧಾರವಿ ಕೊಳೆಗೇರಿ ಕಳೆದ 20 ದಿನಗಳಲ್ಲಿ 67 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಮರಣ ಪ್ರಮಾಣವು ಶೇ.2.67 ರಷ್ಟಕ್ಕೆ ಇಳಿಕೆಯಾಗಿದ್ದು, ಧಾರಾವಿಯಲ್ಲಿ ಶೇ.2.67 ರಷ್ಟಿದ್ದ ಕೋವಿಡ್‌ -19 ಸಂಬಂಧಿತ ಮರಣ ಪ್ರಮಾಣ ಮುಂಬಯಿಗಿಂತ ಶೇ. 3.27 ಕ್ಕಿಂತ ಕಡಿಮೆಯಾಗಿದೆ.

Advertisement

ಧಾರಾವಿಯಲ್ಲಿ ಏಪ್ರಿಲ್‌ 1 ರಿಂದ 23 ಸಾವುಗಳು ಸೇರಿದಂತೆ 1,872 ಕೋವಿಡ್‌ -19 ಧನಾತ್ಮಕ ಪ್ರಕರಣಗಳು ವರದಿಯಾಗಿದೆ. ಮುಂಬಯಿ ಮಹಾನಗರ ಪಾಲಿಕೆಯ ಜಿ-ನಾರ್ತ್‌ ವಾರ್ಡ್‌ನ ಸಹಾಯಕ ಆಯುಕ್ತ ಕಿರಣ್‌ ದಿಘವ್ಕರ್‌, ಅವರು ಮಾತನಾಡಿ, ಆರಂಭಿಕ ಹಂತದಲ್ಲಿ ಶಂಕಿತ ರೋಗಿಗಳಲ್ಲಿ ಆಕ್ರಮಣಕಾರಿ ಪರೀಕ್ಷೆಯು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ನಮಗೆ ಸಹಾಯ ಮಾಡಿತು. ನಾವು ಸಮಯೋಚಿತ ವೈದ್ಯಕೀಯ ಹಸ್ತಕ್ಷೇಪವನ್ನು ಖಾತ್ರಿಪಡಿಸಿದ್ದೇವೆ. ನಮ್ಮ ಕ್ರಮಗಳು ಕೋವಿಡ್‌ -19 ರೋಗಿಗಳಲ್ಲಿ ಉತ್ತಮ ಚೇತರಿಕೆ ದರಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.

ದಾದರ್‌, ಮಹೀಮ್‌ ಮತ್ತು ಧಾರಾವಿಗಳನ್ನು ಒಳಗೊಂಡಿರುವ ಜಿ-ನಾರ್ತ್‌ ವಾರ್ಡ್‌ನಲ್ಲಿ 2,820 ಕೋವಿಡ್‌ -19 ಸಕಾರಾತ್ಮಕ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 50 ಸಾವುಗಳು ದಾಖಲಾಗಿದೆ. ದಾದರ್‌ ಇದುವರೆಗೆ 368 ಕೋವಿಡ್‌ -19 ಸಕಾರಾತ್ಮಕ ಪ್ರಕರಣಗಳು ಮತ್ತು 21 ಸಾವುಗಳನ್ನು ದಾಖಲಿಸಿದ್ದು, ಮಹೀಮ್‌ನಲ್ಲಿ ಅನುಕ್ರಮವಾಗಿ 580 ಮತ್ತು ಆರು ಪ್ರಕರಣಗಳು ದಾಖಲಾಗಿವೆ.

ಜಿ-ನಾರ್ತ್‌ ವಾರ್ಡ್‌ ಮಹಾರಾಷ್ಟ್ರ ನೇಚರ್‌ ಪಾರ್ಕ್‌ನಲ್ಲಿರುವ ಧಾರಾವಿಗಾಗಿ ಡೆಡಿಕೇಟೆಡ್‌ ಕೋವಿಡ್‌ -19 ಆರೋಗ್ಯ ಕೇಂದ್ರವನ್ನು (ಡಿಸಿಎಚ್‌ಸಿ) ಪ್ರಾರಂಭಿಸಿದೆ. 200 ಆಮ್ಲಜನಕ ಹೊಂದಿದ ಹಾಸಿಗೆಗಳನ್ನು ಹೊಂದಿರುವ ಈ ಕೇಂದ್ರವು ಸುಮಾರು ಐದು ಲಕ್ಷ ಜನರನ್ನು ಪರೀಕ್ಷಿಸುವ ಗುರಿಯನ್ನು ಹೊಂದಿದೆ ಎಂದು ದಿಘವ್ಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next