Advertisement

ಕೋವಿಡ್‌ ಸೋಂಕು “ಇನ್ನೂ ತೀವ್ರ ಸ್ವರೂಪ ಪಡೆದಿಲ್ಲ’ : ವಿಶ್ವಸಂಸ್ಥೆ ಎಚ್ಚರಿಕೆ

03:55 PM Jul 12, 2020 | sudhir |

ಜಿನೀವಾ: ಕೋವಿಡ್‌-19 ಸೋಂಕಿನ ಬಗ್ಗೆ ಮಹತ್ವದ ಸಂದೇಶ ಕಳುಹಿಸಿರುವ ವಿಶ್ವಸಂಸ್ಥೆ ಕೋವಿಡ್ ಇನ್ನು ತೀವ್ರ ಸ್ವರೂಪವನ್ನು ಪಡೆದುಕೊಂಡಿಲ್ಲ ಇನ್ನಾದರೂ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಎಚ್ಚೆತ್ತುಕೊಳ್ಳಿ ಎಂದು ಹೇಳಿದೆ.

Advertisement

ಮಹಾ ನಿರ್ದೇಶಕರಾದ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌ ಮಾತನಾಡಿ, ವಿಶ್ವದ ಬಹುತೇಕ ಭಾಗಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದು, ಸೋಂಕಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ವೈರಸ್‌ ಕೆಟ್ಟ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕಳೆದ ಆರು ವಾರಗಳಲ್ಲಿ ಜಾಗತಿಕವಾಗಿ ಕೋವಿಡ್ ವೈರಸ್‌ ಪ್ರಕರಣಗಳು ದ್ವಿಗುಣವಾಗಿದೆ ಎಂದಿದ್ದಾರೆ.

ಕೆಲವು ದೇಶಗಳಿಂದ ಯುಕೆಗೆ ಮರಳುವ ಅಥವಾ ಭೇಟಿ ನೀಡುವ ಜನರಿಗೆ ಕ್ವಾರಂಟೈನ್‌ ನಿಯಮಗಳಲ್ಲಿ ಇಂದಿನಿಂದ ಸಡಿಲಗೊಳಿಸಿದ ಬೆನ್ನಲ್ಲೇ ಘೆಬ್ರೆಯೆಸಸ್‌ ಅವರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಕೋವಿಡ್ ವೈರಸ್‌ ವಿಶ್ವದ ಕೆಲ ಶ್ರೀಮಂತ ರಾಷ್ಟ್ರಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ.

ಕೋವಿಡ್ ಕಟ್ಟಿಹಾಕಲು ಸೋಂಕಿತ ಜನರನ್ನು ಪ್ರತ್ಯೇಕವಾಗಿರಿಸುವುದು, ಶೀಘ್ರ ಪತ್ತೆ ಪರೀಕ್ಷೆಗಳನ್ನು ನಡೆಸುವುದು, ಸೋಂಕಿತರಿಗೆ ಉತ್ತಮ ಚಿಕಿತ್ಸೆ ಮತ್ತು ಸೋಂಕಿತರ ಸಂಪರ್ಕ ಮತ್ತು ಕ್ವಾರೈಂಟೈನ್‌ ಮುಂತಾದವುಗಳನ್ನು ಯಶಸ್ವಿಯಾಗಿ ನಡೆಸಿದಾಗಲೇ ಸೋಂಕನ್ನು ನಿಯಂತ್ರಣಕ್ಕೆ ತರಬಹುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next