Advertisement

ಕೋವಿಡ್‌ 19 ತಡೆಗಟ್ಟಲು ಮುಂದಾಗೋಣ: ಕೊಹ್ಲಿ ದಂಪತಿ

12:15 AM Mar 22, 2020 | Sriram |

ಹೊಸದಿಲ್ಲಿ: ವಿಶ್ವಾದ್ಯಂತ ಹರಡುತ್ತಿರುವ ಕೋವಿಡ್‌ 19 ವೈರಸ್‌ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಜನತೆಗೆ ಸಂದೇಶ ನೀಡಿದ ಬೆನ್ನಲ್ಲೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆರಂಭಿಸಿದ್ದಾರೆ.

Advertisement

ಪ್ರಧಾನಿ ಮೋದಿ ನೀಡಿರುವ ಸಂದೇಶವನ್ನು ಎಲ್ಲರೂ ಪಾಲಿಸಿ, ಇದನ್ನು ಯಾರೂ ಕಡೆಗಣಿಸದಿರಿ ಎಂದು ಕೊಹ್ಲಿ ದಂಪತಿ ಟ್ವಿಟರ್‌ನಲ್ಲಿ ವೀಡಿಯೋ ಸಂದೇಶ ರವಾನಿಸಿದ್ದಾರೆ.

“ನಾವೆಲ್ಲ ಅತ್ಯಂತ ಕಠಿನ ಪರಿಸ್ಥಿತಿಯಲ್ಲಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಬಹುದಾಗಿದೆ. ನಮ್ಮ ಹಾಗೂ ಸುತ್ತಮುತ್ತಲಿನ ಎಲ್ಲರ ಸುರಕ್ಷತೆಗಾಗಿ ನಾವು ಮನೆಯಲ್ಲೇ ಇದ್ದು ಕೋವಿಡ್‌ 19 ಸೋಂಕು ಮತ್ತಷ್ಟು ಹರಡುವುದನ್ನು ತಪ್ಪಿಸಲು ಒಟ್ಟಾಗಿ ಶ್ರಮಿಸೋಣ. ಸ್ವಯಂ ಏಕಾಂತವಾಸದ ಮೂಲಕ ನಾವು ಹಾಗೂ ಎಲ್ಲರೂ ಸುರಕ್ಷಿತವಾಗಿರೋಣ’ ಎಂದು ಕೊಹ್ಲಿ ಮತ್ತು ಅನುಷ್ಕಾ ಸಂದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next