ಮಾಸ್ಕೋ : ರಷ್ಯಾದ ಮೊದಲ ಕೋವಿಡ್ ನಿಗ್ರಹ ಲಸಿಕೆ ಸ್ಪುಟ್ನಿಕ್-ವಿ ಈಗಾಗಲೇ ನೋಂದಣಿಯಾಗಿ ದೇಶದಲ್ಲಿ ಬಳಕೆಗೆ ಮುಕ್ತವಾಗಿದೆ. ಜತೆಗೆ ಸರಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ವಿಶ್ವ ಮಾನ್ಯತೆಗೆ ಪರಿಗಣಿಸುವಂತಾಗಲು 3ನೇ ಹಂತದಲ್ಲಿ 30 ಸಾವಿರಕ್ಕೂ ಅಧಿಕ ಜನರ ಮೇಲೆ ಪ್ರಯೋಗಿಸಲಾಗುತ್ತಿದೆ. ಇದೀಗ ರಷ್ಯಾದ ಇನ್ನೊಂದು ಲಸಿಕೆ ಕೂಡ ಮಾನವ ಬಳಕೆಗೆ ಸುರಕ್ಷಿತ ಎಂದು ಸಾಬೀತಾಗಿದ್ದು, 2ನೇ ಲಸಿಕೆ ಮೊದಲನೆಯದಕ್ಕಿಂತ ತುಂಬಾ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಈ ಲಸಿಕೆಗೆ ಎಪಿವ್ಯಾಕ್ ಕೋವಿಡ್ (EpiVacCorona) ಎಂದು ಹೆಸರಿಸಲಾಗಿದ್ದು, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ ಎಂದು ರಷ್ಯಾದ ಮಾನವ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಎಪಿವ್ಯಾಕ್ ಕೋವಿಡ್ ಕ್ಲಿನಿಕಲ್ ಟ್ರಯಲ್ ಗಳು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿವೆ. ಇದನ್ನು ಕೂಡ ಸರಕಾರಿ ಸ್ವಾಮ್ಯದ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಆ್ಯಂಡ್ ಬಯೋಟೆಕ್ನಾಲಜಿ (ವೆಕ್ಟರ್) ಸಂಸ್ಥೆ ಅಭಿವೃದ್ಧಿಪಡಿಸಿದೆ. 14 ಹಾಗೂ 21 ದಿನಗಳ ಅಂತರದಲ್ಲಿ ಎರಡು ಬಾರಿ ಲಸಿಕೆ ನೀಡಿದಾಗ ದೇಹದಲ್ಲಿ ಪ್ರತಿರೋಧ ಶಕ್ತಿ ಬೆಳವಣಿಗೆಯಾಗುತ್ತಿರುವುದು ಗೊತ್ತಾಗಿದೆ. ಆದರೆ ಈ ವರೆಗೆ ಓರ್ವ ವ್ಯಕ್ತಿಗೆ ಮಾತ್ರ ಎರಡು ಬಾರಿ ಈ ಲಸಿಕೆ ನೀಡಲಾಗಿದೆಯಂತೆ.
ಲಸಿಕೆ ನೀಡಲಾದ ಎಲ್ಲ 57 ಜನರು ಆರೋಗ್ಯದಿಂದ ಇದ್ದು, ಅದರಲ್ಲಿ 14 ಜನರಿಗಷ್ಟೇ ಲಸಿಕೆ ನೀಡಲಾಗಿದೆ. ಉಳಿದವರಿಗೆ ಡಮ್ಮಿ ಚುಚ್ಚುಮದ್ದು ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಟ್ಯುನೇಶಿಯಾದಲ್ಲಿ 2021ರ ಹೊತ್ತಿಗೆ ಕೋವಿಡ್‌ಗೆ ಲಸಿಕೆ
ಟುನಿಸ್: 2021ರ ಆರಂಭದಲ್ಲಿ ಕೊರೊನಾ ವೈರಸ್ ಲಸಿಕೆ ಸಿದ್ಧವಾಗಲಿದೆ ಎಂದು ಟುನೀಶಿಯಾ ಹೇಳಿದೆ. ದೇಶದಲ್ಲಿ ಅಭಿವೃದ್ಧಿಪಡಿಸಿರುವ ಡಿಎನ್‌ಎ ಆಧಾರಿತ ಈ ಲಸಿಕೆ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಫಾಸ್ಟರ್ ಇನ್‌ಸ್ಟಿ ಟ್ಯೂಟ್ ಆಫ್ ಟುನಿಸ್ (ಐಪಿಟಿ) ಮಹಾ ನಿರ್ದೇಶಕ ಹೆಚಿ¾ ಲೌಜಿರ್ ಹೇಳಿದ್ದಾರೆ.