Advertisement
ಕೋವಿಡ್ ತನ್ನ ಕಬಂಧ ಬಾಹುಗಳನ್ನು ಚಾಚಲು ಪ್ರಾರಂಭಿಸಿದ ದಿನಗಳಿಂದಲೂ ಅಂದರೆ ಕಳೆದ ಮಾರ್ಚ್ ತಿಂಗಳಿಂದಲೂ ನಿರಂತರವಾಗಿ ನ್ಯೂಜೆರ್ಸಿಯ ಕನ್ನಡ ಸಮುದಾಯದ ಜತೆಗಿದ್ದು, ಸೂಕ್ತ ಸಲಹೆ, ಮಾರ್ಗದರ್ಶನ, ವೈದ್ಯಕೀಯ ಸಹಾಯಗಳನ್ನು ಕೊಟ್ಟು, ಕನ್ನಡಿಗರಲ್ಲಿ ಧೈರ್ಯ ತುಂಬುತ್ತಿರುವ ನ್ಯೂಜರ್ಸಿಯ ಎಡಿಸನ್ ಪ್ರದೇಶದ ಹಿರಿಯ ವೈದ್ಯ, ಪಲ್ಮೊನರಿ ಹಾಸ್ಪೈಸ್ ಪ್ಯಾಲಿಯೇಟಿವ್ ಕೇರ್ ಮತ್ತು ಸ್ಲಿàಪ್ ಮೆಡಿಸಿನ್ ತಜ್ಞರಾದ ಡಾ| ರಾಮ್ ಬೆಂಗಳೂರು ಅವರು ಕಾರ್ಯಕ್ರಮ ನಡೆಸಿಕೊಟ್ಟರು.
Related Articles
Advertisement
ಡಾ| ರಾಮ್ ಅವರು ತಿಳಿಸಿದ ಮುಖ್ಯಾಂಶಗಳು :
- – ಕೋವಿಡ್ ಒಂದು ರೆಸ್ಪಿರೇಟರಿ ವೈರಸ್. ಈ ರೋಗದ ಲಕ್ಷಣಗಳು- ಸೋರುವ ಮೂಗು, ಜ್ವರ, ಕೆಮ್ಮು, ಮೈಕೈ ನೋವು ಮತ್ತು ಕೆಲವೊಮ್ಮೆ ಅತಿಸಾರ.
- ಕೋವಿಡ್ ವ್ಯಾಕ್ಸಿನ್ ಜೀವಂತ ವೈರಸ್ ಅಲ್ಲ. ಇದು ನಮ್ಮ ಶರೀರದ ರಕ್ಷಣಾ ವ್ಯವಸ್ಥೆ antibody ಗಳನ್ನು ಉತ್ಪಾದಿಸಲು ಪ್ರೇರೇಪಿಸುವ ಮೆಸೆಂಜರ್ RNA . ಇದನ್ನು Antigen ಎಂದು ಕರೆಯುತ್ತಾರೆ.
- ಅಮೆರಿಕ ದೇಶದಲ್ಲಿ ಈಗ ಎರಡು ವ್ಯಾಕ್ಸಿನ್‌ಗಳು ಲಭ್ಯವಿವೆ. ಫೈಜರ್ ಮತ್ತು ಮಡೋರ್ನಾ. ಫೈಜರ್ ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಂಡ 21 ದಿನಗಳಿಗೆ ಎರಡನೇ ಡೋಸ್ ತೆಗೆದುಕೊಳ್ಳಬೇಕು. ಮಡೋರ್ನಾ ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಂಡ 28 ದಿನಗಳಿಗೆ ಎರಡನೇ ಡೋಸ್ ಪಡೆಯಬೇಕು. ತೀರಾ ತುರ್ತುಪರಿಸ್ಥಿತಿ ಇಲ್ಲದಿದ್ದಲ್ಲಿ, ಈ ಶೆಡ್ನೂಲ್ ಅನ್ನು ಖಂಡಿತವಾಗಿ ಪಾಲಿಸಬೇಕು.
- ಮೊದಲ ಡೋಸ್‌ನ ಅನಂತರ ಕೋವಿಡ್ ವಿರುದ್ಧ ಶೇ. 50ರಷ್ಟು ರೋಗ ನಿರೋಧಕ ಶಕ್ತಿಯೂ, ಎರಡನೇ ಡೋಸ್‌ನ ಅನಂತರ ಶೇ. 90- 95ರಷ್ಟು ರೋಗ ನಿರೋಧಕ ಶಕ್ತಿಯೂ ಬರುತ್ತದೆ.
- ಡಬ್ಲ್ಯುಎಚ್‌ಒ ಮತ್ತು ಸಿಡಿಸಿ ನಿಯಮಿತ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಎಲ್ಲ ಅಮೆರಿಕ ನಿವಾಸಿಗಳಿಗೂ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತದೆ. ಅವರು ಯಾವುದೇ ರೀತಿಯ ವೀಸಾದಲ್ಲಿದ್ದರೂ ಈ ವ್ಯಾಕ್ಸಿನ್ ಲಭ್ಯವಿದೆ ಮತ್ತು ಇದು ಎಲ್ಲರಿಗೂ ಸಂಪೂರ್ಣವಾಗಿ ಉಚಿತ. ನಿಯಮಿತ ಸಂಸ್ಥೆಗಳಲ್ಲಿ ವ್ಯಾಕ್ಸಿನ್‌ಗಾಗಿ ನೋಂದಾಯಿಸಿಕೊಳ್ಳಬೇಕು.
- ಈ ವ್ಯಾಕ್ಸಿನ್‌ನಿಂದ ಯಾವುದೇ ಗಂಭೀರ ರೀತಿಯ ದುಷ್ಪರಿಣಾಮಗಳಿಲ್ಲ. ವ್ಯಾಕ್ಸಿನ್ ಕೊಟ್ಟ ಜಾಗದಲ್ಲಿ ಕೆಂಪಾಗಿದ್ದು, ನೋವು, ಸಣ್ಣಗೆ ಜ್ವರ ಕಾಣಿಸಿಕೊಳ್ಳಬಹುದು. ಕೆಲವರಿಗೆ ಕೀಲುನೋವು ಬರಬಹುದು. ಆದರೆ ತಂಕಕಾರಿಯಲ್ಲ.
- ವ್ಯಾಕ್ಸಿನ್ ತೆಗೆದುಕೊಳ್ಳಲು ಬರಿ ಹೊಟ್ಟೆಯಲ್ಲಿ ಹೋಗುವ ಅವಶ್ಯಕತೆಯಿಲ್ಲ. ಕೊಟ್ಟ ಸಮಯಕ್ಕೆ ಸರಿಯಾಗಿ ವ್ಯಾಕ್ಸಿನ್ ಕೇಂದ್ರಕ್ಕೆ ಹೋಗಬೇಕು. ಅಲ್ಲಿಯೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಬೇಕು.
- ವ್ಯಾಕ್ಸಿನ್ ತೆಗೆದುಕೊಂಡ ಅನಂತರವೂ ಆ ವ್ಯಕ್ತಿ ವೈರಸ್ಸನ್ನು ಹರಡುವ ಸಾಧ್ಯತೆ ಇದೆ. ಆದ್ದರಿಂದ ಶೇ. 70ರಷ್ಟು ಜನರಿಗೆ ವ್ಯಾಕ್ಸಿನ್ ಸಿಗುವವರೆಗೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು.
- ವ್ಯಾಕ್ಸಿನ್ ತೆಗೆದುಕೊಂಡ ಅನಂತರವೂ ಕೋವಿಡ್ ತಗಲುವ ಸಾಧ್ಯತೆ ಇದೆ. ಆದರೆ ಅದು ತೀವ್ರ ಸ್ವರೂಪದಾಗಿರುವುದಿಲ್ಲ.
- 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಹಾಲುಣಿಸುತ್ತಿರುವ ಮಹಿಳೆಯರಿಗೆ ವ್ಯಾಕ್ಸಿನ್ ನೀಡಲಾಗುವುದಿಲ್ಲ.
- ವ್ಯಾಕ್ಸಿನ್ ತೆಗೆದುಕೊಳ್ಳುವ ಸಮಯದಲ್ಲಿ, ಬೇರೆ ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವನ್ನು ನಿಲ್ಲಿಸುವ ಅಗತ್ಯವಿಲ್ಲ. ಆದರೆ ಬೇರೊಂದು ವ್ಯಾಕ್ಸಿನ್‌ನ ಅಗತ್ಯವಿದ್ದರೆ ಕೋವಿಡ್ ವ್ಯಾಕ್ಸಿನಿಗೂ ಅದಕ್ಕೂ ಒಂದು ವಾರದ ಅಂತರವಿರಲಿ.
- ಅಂತಾರಾಷ್ಟ್ರೀಯ ಪ್ರಯಾಣ/ಪ್ರವಾಸ ಮಾಡುತ್ತಿದ್ದಲ್ಲಿ, ಆಯಾ ದೇಶಗಳ ಕೋವಿಡ್ ನಿಯಮಗಳನ್ನು ಪಾಲಿಸಬೇಕು.