Advertisement

ಇಂದಿನಿಂದ ಹಿರಿಯ ನಾಗರಿಕರಿಗೆ ಕೋವಿಡ್‌ ಲಸಿಕೆ

01:03 PM Mar 01, 2021 | Team Udayavani |

ಚಾಮರಾಜನಗರ: ಜಿಲ್ಲಾದ್ಯಂತ ಸೋಮವಾರದಿಂದ ಸಾರ್ವಜನಿಕರಿಗೂ ಕೋವಿಡ್‌ ವಿರುದ್ಧ ರೋಗನಿರೋಧಕ ಶಕ್ತಿ ಒದಗಿಸುವ ಮೂರನೇ ಹಂತ ಅಭಿಯಾನ ಆರಂಭವಾಗಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಈ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ 45 ರಿಂದ 59 ವರ್ಷದೊಳಗಿನನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುತ್ತದೆ.

Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದು. ಖಾಸಗಿಆಸ್ಪತ್ರೆಯಲ್ಲಿ 250 ರೂ. ನೀಡಿ ಲಸಿಕೆಪಡೆಯಲು ಅವಕಾಶ ಕಲ್ಪಿಸಲಾಗಿದೆ. 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ.ಜೊತೆಗೆ ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವ 45 ರಿಂದ 59 ವರ್ಷದೊಳಗಿನನಾಗರಿಕರಿಗೂ ಲಸಿಕೆ ಕೊಡಲಾಗುತ್ತದೆ. ಅನಾರೋಗ್ಯಸಮಸ್ಯೆಯುಳ್ಳ 45 ರಿಂದ 59 ವರ್ಷದೊಳಗಿನವರ್ಗದಲ್ಲಿ ಲಸಿಕೆ ಪಡೆಯಲು 20 ರೀತಿಯಅನಾರೋಗ್ಯ ಸಮಸ್ಯೆಗಳ ಪಟ್ಟಿ ಮಾಡಲಾಗಿದೆ. ಹೃದಯ ಸಮಸ್ಯೆ, ತೀವ್ರ ರಕ್ತದೊತ್ತಡ ಮತ್ತುಮಧುಮೇಹ ಸಮಸ್ಯೆಗೆ ಒಟ್ಟಾಗಿ ಚಿಕಿತ್ಸೆ ಪಡೆಯುತ್ತಿರುವವರು,

ಪಾರ್ಶ್ವವಾಯು ಸಂಬಂಧಿ ಕಾಯಿಲೆ ಉಳ್ಳವರು 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಮಧುಮೇಹದಿಂದ ಬಳಲುತ್ತಿರುವವರು, ಕಿಡ್ನಿ, ಲಿವರ್‌, ಇತರೆಕ್ಯಾನ್ಸರ್‌ ಕಾಯಿಲೆ ಉಳ್ಳವರು, ಎಚ್‌ಐವಿ ಸೋಕಿತರುಸೇರಿದಂತೆ 20 ರೋಗಗಳನ್ನು ಪಟ್ಟಿ ಮಾಡಲಾಗಿದೆ.ಈ ಸಮಸ್ಯೆ ಇರುವವರು ಲಸಿಕೆ ಪಡೆಯಲು ಅರ್ಹರು ಎಂದು ತಿಳಿಸಲಾಗಿದೆ.

ಸ್ವಯಂ ನೋಂದಣಿ: ಲಸಿಕೆ ಪಡೆಯುವಫ‌ಲಾನುಭವಿಗಳು ಕಡ್ಡಾಯವಾಗಿ ಆನ್‌ಲೈನ್‌ಅಥವಾ ಖುದ್ದಾಗಿ ನೋಂದಣಿ ಮಾಡಿ ಕೊಳ್ಳಬೇಕು.ಕೋವಿನ್‌ 2.0 ಆ್ಯಪ್‌ ಮೂಲಕ ಅಥವಾ ಆರೋಗ್ಯಸೇತು ಇಲ್ಲವೇ ಇತರೇ ಐ.ಟಿ ಅಪ್ಲಿಕೇಶನ್‌ ಮೂಲಕಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್‌ ನೋಂದಣಿ ಮಾಡದಫ‌ಲಾನುಭವಿಗಳು ಗುರುತಿಸಲಾಗಿರುವಲಸಿಕಾ ಕೇಂದ್ರಗಳು ಅಂದರೆ ಆಸ್ಪತ್ರೆಗಳಿಗೆ ನೇರವಾಗಿ ಬಂದು ಹೆಸರುನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪ್ರಾರಂಭಿಕ ಹಂತದ ಮೊದಲ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಆನ್‌ಲೈನ್‌ ನೋಂದಾಯಿತರಿಗೆಮತ್ತು ಖಾಸಗಿ ಆರೊಗ್ಯ ಕೇಂದ್ರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಫ್ಲೈನ್‌ ಮತ್ತುಆನ್‌ಲೈನ್‌ ಮೂಲಕ ನೋಂದಣಿಯಾದವರಿಗೆಲಸಿಕೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಾರದಲ್ಲಿ 4 ದಿನಗಳ ಕಾಲ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರಗಳಂದು ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ವಾರದ ಎಲ್ಲಾ ದಿನಗಳಂದುಲಸಿಕೆ ನೀಡಲಾಗುತ್ತದೆ. ಮದ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲಿದ್ದು, ಪ್ರತಿ ಲಸಿಕಾಕೇಂದ್ರದಲ್ಲಿ 200 ಫ‌ಲಾನುಭವಿಗಳಿಗೆ ಲಸಿಕೆ ನೀಡುವಗುರಿ ಹೊಂದಲಾಗಿದೆ. ಮೊದಲು ಬಂದವರಿಗೆಆದ್ಯತೆ ನೀಡಲಿದ್ದು, ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡವರಿಗೆ ನಿಗದಿತ ಸಮಯದಲ್ಲಿ ಲಸಿಕೆ ನೀಡಲಾಗುವುದು.

Advertisement

ಲಸಿಕೆ ಪಡೆಯಲು ಆಸ್ಪತ್ರೆಗೆ ಬರುವ ವೇಳೆ ಗುರುತಿಗಾಗಿ ಆಧಾರ್‌ಕಾರ್ಡ್‌ ಅಥವಾ ಚುನಾವಣಾ ಮತದಾರರಗುರುತಿನ ಚೀಟಿ ತರಬೇಕು, ಆನ್‌ಲೈನ್‌ ನಲ್ಲಿ ನೊಂದಾಯಿಸುವಾಗ ಕೇಳಲಾದಗುರುತಿನ ಚೀಟಿ ತರಬೇಕು, 45 ರಿಂದ59 ರ ವರ್ಷದೊಳಗಿನ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ವೈದ್ಯರಿಂದ ಆರೋಗ್ಯ ಸಮಸ್ಯೆ ಇರುವ ಕುರಿತು ದೃಢೀಕರಣ ಪತ್ರ ಹಾಜರುಪಡಿಸಬೇಕು. ಮೊದಲನೇ ಮತ್ತು ಎರಡನೇ ಹಂತದ ಲಸಿಕಾ ಅಭಿಯಾನದಲ್ಲಿ ಬಿಟ್ಟುಹೋಗಿರುವ ಅಥವಾ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರು ಹಾಗೂ ಇತರೇ ಇಲಾಖೆಗಳ ಮುಂಚೂಣಿ ಕಾರ್ಯ

ಕರ್ತರು ಸಹ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ ಸೂಚಿಸಲಾಗಿರುವ ಆರೋಗ್ಯಕೇಂದ್ರಗಳಳಲ್ಲಿ ಕೋವಿಡ್‌-19 ಲಸಿಕೆ ಪಡೆಯಬಹುದು. ಲಸಿಕಾ ಕೇಂದ್ರಕ್ಕೆ ಬರುವ ವೇಳೆ ಅವರ ಗುರುತಿನ ಚೀಟಿ ತರಬೇಕಿದೆ.

ಲಸಿಕೆ ಅತ್ಯಂತ ಸುರಕ್ಷಿತ: ಜಿಲ್ಲಾಧಿಕಾರಿ ರವಿ :  ಕೋವಿಡ್  ವಿರುದ್ಧದ ಹೋರಾಟದಲ್ಲಿ ಲಸಿಕೆ ನೀಡುವಹಂತವು ಅತ್ಯಂತ ಪ್ರಮುಖ ಘಟ್ಟವಾಗಿದೆ. ಲಸಿಕೆಯು ಅತ್ಯಂತ ಸುರಕ್ಷಿತವೆಂದು ಸಾಕಷ್ಟು ಪ್ರಯೋಗ ಪರೀಕ್ಷೆಗಳನಂತರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 60 ವರ್ಷಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಗಂಭೀರ ಆರೋಗ್ಯಸಮಸ್ಯೆ ಕಾಯಿಲೆಗಳಿಂದ ಬಳಲುತ್ತಿರುವ 45 ರಿಂದ 59 ರ ವರ್ಷದೊಳಗಿನ ವ್ಯಕ್ತಿಗಳು ಯಾವುದೇ ಭಯಪಡದೇ ಕೋವಿಡ್ ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಮನವಿ ಮಾಡಿದ್ದಾರೆ.

ಲಸಿಕೆ ಸಿಗುವ ಆಸ್ಪತ್ರೆಗಳು :

ಚಾಮರಾಜನಗರ ಪಟ್ಟಣದ ಜಿಲ್ಲಾ ಆಸ್ಪತ್ರೆ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರುತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಾದ ಚಾಮರಾಜನಗರ ಪಟ್ಟಣದ ಜೆ.ಎಸ್‌.ಎಸ್‌ ಆಸ್ಪತ್ರೆ, ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿರುವ ಹೋಲಿಕ್ರಾಸ್‌ಆಸ್ಪತ್ರೆಯಲ್ಲಿ 250 ರೂ. ನೀಡಿ ಲಸಿಕೆ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next