- ಉತ್ತರಪ್ರದೇಶ ಪ್ರತಿನಿತ್ಯ ಸರಾಸರಿ73 ಲಕ್ಷ ಡೋಸ್ ಲಸಿಕೆ ನೀಡುತ್ತಿದ್ದು, ಇದು ದೇಶದಲ್ಲೇ ಅತ್ಯಂತ ವೇಗದ ವ್ಯಾಕ್ಸಿನೇಶನ್. ಉ.ಪ್ರ.ದ ವೇಗದ ಮುಂದೆ “ದೊಡ್ಡಣ್ಣ’ ಅಮೆರಿಕ ಕೂಡ ಮಂಕು. ಅಲ್ಲಿ ನಿತ್ಯದ ಲಸಿಕೆ ನೀಡಿಕೆ ಕೇವಲ 8.07 ಲಕ್ಷ ಡೋಸ್!
- ಗುಜರಾತ್‌ನಲ್ಲಿ ಪ್ರತಿನಿತ್ಯ08 ಲಕ್ಷ ಮಂದಿ ವ್ಯಾಕ್ಸಿನ್ ಪಡೆಯುತ್ತಿದ್ದು, ಈ ಪ್ರಮಾಣವು 4.56 ಲಕ್ಷ ನಿತ್ಯದ ಲಸಿಕೆ ವಿತರಣೆ ಹೊಂದಿರುವ ಮೆಕ್ಸಿಕೋಗಿಂತ ಹೆಚ್ಚು.
- ಕರ್ನಾಟಕದಲ್ಲಿ ಪ್ರತಿನಿತ್ಯ82 ಲಕ್ಷ ಫಲಾನುಭವಿಗಳಿಗೆ ಲಸಿಕೆ. ರಷ್ಯಾದಲ್ಲಿ ನಿತ್ಯ 3.68 ಲಕ್ಷ ಮಂದಿಗೆ ಲಸಿಕೆ. ರಷ್ಯಾಗಿಂತ ನಾವೇ ಮುಂದು.
- ಫ್ರಾನ್ಸ್‌ನ ನಿತ್ಯದ ಲಸಿಕೆ ವಿತರಣೆ84 ಲಕ್ಷ; ಮಧ್ಯಪ್ರದೇಶದಲ್ಲಿ ಅದಕ್ಕಿಂತ ಹೆಚ್ಚು. ನಿತ್ಯ 3.71 ಮಂದಿಗೆ ವ್ಯಾಕ್ಸಿನ್.
- ಹರಿಯಾಣದ ನಿತ್ಯದ ವ್ಯಾಕ್ಸಿನೇಶನ್ ಸಾಮರ್ಥ್ಯವು (1.52 ಲಕ್ಷ), ಕೆನಡಾ (85 ಸಾವಿರ) ದೇಶಕ್ಕಿಂತ ಅಧಿಕ.
Advertisement
ಲಸಿಕೆ ಪಡೆದವರಲ್ಲಿ “ಹೈಬ್ರಿಡ್ ಇಮ್ಯುನಿಟಿ’! :
Related Articles
Advertisement
ಚಂಡೀಗಢ: ಒಂದೂ ವ್ಯಾಕ್ಸಿನ್ ಪಡೆಯದ ರಾಜ್ಯ ಸರಕಾರಿ ನೌಕರರಿಗೆ ಸೆ.15ರ ಬಳಿಕ ಕಡ್ಡಾಯವಾಗಿ ರಜೆ ಮೇಲೆ ಕಳುಹಿಸಲು ಪಂಜಾಬ್ ಸಿಎಂ ಕ್ಯಾ| ಅಮರೀಂದರ್ ಸಿಂಗ್ ಸೂಚಿಸಿದ್ದಾರೆ. “ಮೊದಲ ಡೋಸ್ ಪಡೆಯದ ಹೊರತು ಕರ್ತವ್ಯಕ್ಕೆ ಮರಳುವಂತಿಲ್ಲ’ ಎಂದೂ ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದಕ್ಕೂ ಮೊದಲು ಅಲ್ಲಿನ ಶಿಕ್ಷಣ ಸಚಿವರು, ಎರಡೂ ಡೋಸ್ ಪಡೆದ ಸಿಬಂದಿಗೆ ಮಾತ್ರವೇ ಶಾಲಾ- ಕಾಲೇಜುಗಳಿಗೆ ಪ್ರವೇಶ ನೀಡುವಂತೆ ಸೂಚಿಸಿದ್ದರು. ಮುಂದಿನ ವರ್ಷ ಪಂಜಾಬ್ ವಿಧಾನಸಭೆ ಚುನಾವಣೆಗೆ ಅಣಿಯಾಗಿದ್ದು, ಅಷ್ಟರೊಳಗೆ ಎಲ್ಲ ಸರಕಾರಿ ಅಧಿಕಾರಿಗಳು- ಸಿಬಂದಿಗೆ ಸಂಪೂರ್ಣ ವ್ಯಾಕ್ಸಿನ್ ನೀಡಲು ಸರಕಾರ ಪಣತೊಟ್ಟಿದೆ. ಏತನ್ಮಧ್ಯೆ, ಕೋವಿಡ್ ನಿರ್ಬಂಧಗಳನ್ನು ರಾಜ್ಯ ಸರಕಾರ ಸೆ.15ರಿಂದ 30ರವರೆಗೆ ವಿಸ್ತರಿಸಿದೆ. ಒಳಾಂಗಣ ಶುಭ ಸಮಾರಂಭಗಳಿಗೆ ಜನರ ಮಿತಿಯನ್ನು 150ರಿಂದ 300ಕ್ಕೆ ಹೆಚ್ಚಿಸಲಾಗಿದೆ.
ಲಸಿಕೆ ಪಡೆಯದಿದ್ದಲ್ಲಿ ರಾಜೀನಾಮೆ ನೀಡಿ… :
ಕಡ್ಡಾಯ ಲಸಿಕೆ ಇದೀಗ ಜಗತ್ತಿನ ಮಂತ್ರ. ಒಂದು ಡೋಸ್ ಪಡೆಯದಿದ್ದರೆ ಕಡ್ಡಾಯ ರಜೆ ಶಿಕ್ಷೆಯನ್ನು ಪಂಜಾಬ್ ಜಾರಿಗೊಳಿಸಿರುವಂತೆ, ಜಗತ್ತಿನ ವಿವಿಧ ರಾಷ್ಟ್ರಗಳೂ ಕಠಿನ ನೀತಿಗಳನ್ನು ರೂಪಿಸಿವೆ.
ರಾಜೀನಾಮೆ ಕೊಡಿ! :
ಇದು ಜಿಂಬಾಬ್ವೆ ಪ್ರಯೋಗಿಸಿದ ಅಸ್ತ್ರ. ಲಸಿಕೆ ಪಡೆಯದ ಸಿಬಂದಿಯಿಂದ ಕಡ್ಡಾಯವಾಗಿ ರಾಜೀನಾಮೆ ಪಡೆಯಲಾಗುತ್ತಿದೆ.
ಪ್ರವೇಶ ನಿಷೇಧ:
ಲಸಿಕೆ ಪಡೆಯದವರು ಆಸ್ಪತ್ರೆ, ಶಾಲೆ ಅಥವಾ ಸಾರ್ವಜನಿಕ ಸಾರಿಗೆಗಳನ್ನು ಪ್ರವೇಶಿಸುವಂತಿಲ್ಲ ಎಂಬುದು ಚೀನದ ಕೆಲವು ಸ್ಥಳೀಯ ಆಡಳಿತಗಳ ರೂಲ್ಸ್. ಯುನ್ನಾನ್ ಪ್ರಾಂತ್ಯದ ಚುಕ್ಸಿಯಾಂಗ್ ಸೇರಿದಂತೆ 20 ಸ್ಥಳೀಯ ಆಡಳಿತಗಳು ಈ ನಿಯಮ ಜಾರಿಗೆ ತಂದಿವೆ.
ಕಚೇರಿಗೆ ಬರಬೇಡಿ:
ಲಸಿಕೆ ಪಡೆಯದ ಉದ್ಯೋಗಿಗಳನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದಂತೆ ಸೌದಿ ಅರೇಬಿಯಾ ಸರಕಾರ ಕಟ್ಟಾ ಜ್ಞೆ ಹೊರಡಿಸಿದೆ.
ವೈದ್ಯರಿಗೇ ನಿರ್ಬಂಧ:
ವ್ಯಾಕ್ಸಿನೇಶನ್ ಪಡೆಯದ ವೈದ್ಯರು, ಆರೋಗ್ಯ ಸಿಬಂದಿಯು ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ ಎನ್ನುವುದು ಇಟಲಿಯ ರಾಜಾಜ್ಞೆ.
ಕೆಲಸದಿಂದ ವಜಾ:
ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಆಡಳಿತ, ಲಸಿಕೆ ಪಡೆಯದ ಪೌರ ಸಿಬಂದಿಗೆ ದಂಡ ಶುಲ್ಕ ವಿಧಿಸುತ್ತಿದೆ. ಅಲ್ಲದೆ ಕೆಲಸದಿಂದಲೂ ವಜಾಗೊಳಿಸುತ್ತಿದೆ.