Advertisement

ಗ್ರಾಮಮಟ್ಟದಲ್ಲಿ ಲಸಿಕೆ ಕಾರ್ಯ ಯಶಸ್ಸಿಗೆ ಜಿಲ್ಲಾಧಿಕಾರಿ ಕರೆ

05:26 PM Mar 23, 2021 | Team Udayavani |

ಬೀದರ: ಕೋವಿಡ್ ಒಬ್ಬರಿಂದ ಒಬ್ಬರಿಗೆಹರಡದಂತೆ ಗ್ರಾಮೀಣ ಭಾಗದಲ್ಲಿ ತಡೆಗಟ್ಟಲುಸರ್ಕಾರದ ಮಾರ್ಗಸೂಚಿ ಪಾಲಿಸಬೇಕು.ಗ್ರಾಮ ಮಟ್ಟದಲ್ಲಿ ಕೋವಿಡ್‌ ಲಸಿಕೆಯನ್ನು ಸುಗಮಗೊಳಿಸಲು ಅಗತ್ಯ ರೀತಿಯಚಟುವಟಿಕೆಗಳನ್ನು ಕೈಗೊಳ್ಳಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಅವರು ತಹಶೀಲ್ದಾರರು ಮತ್ತು ತಾಪಂ ಇಒಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಇಲಾಖೆಯಿಂದ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿಹಾಗೂ ಆಯ್ದ ಖಾಸಗಿ ಆರೋಗ್ಯಕೇಂದ್ರಗಳಲ್ಲಿ ಲಸಿಕೆ ನೀಡಲು ಕ್ರಮ ವಹಿಸಬೇಕು. ಗ್ರಾಮೀಣಾಭಿವೃದ್ಧಿಇಲಾಖೆ ಸಹಯೋಗದೊಂದಿಗೆ ಗ್ರಾಪಂ ಕಾರ್ಯಪಡೆ ಹಾಗೂ ಗ್ರಾಮಮಟ್ಟದ ಕಾರ್ಯಪಡೆ ಒಗ್ಗೂಡಿಚಟುವಟಿಕೆ ನಡೆಸಬೇಕು ಎಂದು ಸಲಹೆ ಮಾಡಿದರು.

ಗ್ರಾಮೀಣ ಜನರಿಗೆ ಲಸಿಕೆ ಹಾಕಲು ಅನುಕೂಲವಾಗುವಂತೆ ಆಯಾ ಗ್ರಾಮದಲ್ಲಿನ60 ವಯಸ್ಸು ದಾಟಿದ ಫಲಾನುಭವಿಗಳ ಪಟ್ಟಿಯನ್ನು ಗ್ರಾಪಂ ಕಾರ್ಯಪಡೆ ಆರೋಗ್ಯಸಿಬ್ಬಂದಿಗೆ ಒದಗಿಸಬೇಕು. ಗ್ರಾಮದ ನಿರ್ದಿಷ್ಟ ಸಹ ಅಸ್ವಸ್ಥತೆ ಹೊಂದಿರುವ 45 ವಯಸ್ಸುದಾಟಿದ ಫಲಾನುಭವಿಗಳ ಪಟ್ಟಿಯನ್ನುಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಪಡೆದುಅವರಿಗೆ ಕೋವಿಡ್‌ ಲಸಿಕೆ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕೋವಿಡ್ ವಾರಿಯರ್ಸ್‌ ಗುರುತಿಸಿ: ಲಸಿಕೆಕುರಿತು ಜಾಗೃತಿ ಮೂಡಿಸಲು ಒಬ್ಬರಿಂದಒಬ್ಬರಿಗೆ ಸಂವಹನಕ್ಕಾಗಿ ಕೊರೊನಾ ವಾರಿಯರ್ಸ್ ಗಳನ್ನು ಗುರುತಿಸುವ ಕಾರ್ಯವನ್ನು ಗ್ರಾಪಂಕಾರ್ಯಪಡೆ ನಿರ್ವಹಿಸಬೇಕು. ಲಸಿಕೆಯಬಗೆಗಿನ ಜನರ ತಪ್ಪು ಕಲ್ಪನೆ ನಿವಾರಿಸಲು ಸಭೆಗಳಮೂಲಕ ಮಾಹಿತಿ ನೀಡಬೇಕು ಎಂದರು.

ಜಿಪಂ ಸಿಇಒ ಜಹೀರಾ ನಸೀಮ್‌ ಮಾತನಾಡಿ,ಗ್ರಾಪಂ ಕಾರ್ಯಪಡೆಯು ಗ್ರಾಮದಲ್ಲಿಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲುಗ್ರಾಪಂ ಸಹಾಯ ಕೇಂದ್ರದ ಸಂಖ್ಯೆಗಳನ್ನುಪ್ರತಿಯೊಂದು ವರ್ಗದ ಜನರಿಗೆ ತಿಳಿಸಬೇಕು.ದುರ್ಬಲವರ್ಗದ ಜನರ ಅಗತ್ಯಗಳನ್ನುಮೇಲ್ವಿಚಾರಣೆ ಮತ್ತು ಸಾಧ್ಯವಾದರೆ ಅವರಮನೆಗಳ ಮುಂದಿನ ಗೋಡೆಗಳ ಮೇಲೆ ಲಸಿಕೆಕುರಿತು ಮಾಹಿತಿ ಅಂಟಿಸುವುದು ಹಾಗೂ ಲಸಿಕೆಕಾರ್ಯಕ್ರಮ ಕುರಿತು ಪ್ರಚುರ ಪಡಿಸಬೇಕು.ಗ್ರಾಪಂ ಕಾರ್ಯದರ್ಶಿಗಳು ಲಸಿಕಾ ಕೇಂದ್ರದಲ್ಲಿ ನೆರವು ನೀಡಲು ಡಾಟಾ ಎಂಟ್ರಿ ಆಪರೇಟರ್‌ಗಳ ಸೇವೆ ಒದಗಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶಗಾಳಿ, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಮತ್ತು ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next