Advertisement

Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್‌ ಲಸಿಕೆ!

09:49 PM Dec 31, 2024 | Team Udayavani |

ಗಾಂಧಿನಗರ: ಹೆಂಡತಿಯನ್ನು ಕೊಂದು ಪರಾರಿಯಾಗಿ 2 ದಶಕಗಳಿಂದ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸುತ್ತಿದ್ದ ಭೂಪನನ್ನು ಕೋವಿಡ್‌ ಲಸಿಕೆ ಮಾಹಿತಿ ಮೂಲಕ ಗುಜರಾತ್‌ ಪೊಲೀಸರು ಕೊನೆಗೂ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯನ್ನು ವಿನೋದ್‌ ಕುಮಾರ್‌ ಶರ್ಮಾ ಎಂದು ಗುರುತಿಸಲಾಗಿದೆ.

Advertisement

1996ರಿಂದ ಕರ್ನಾಟಕ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಸೇರಿ ವಿವಿಧ ರಾಜ್ಯಗಳಲ್ಲಿ ವಾಯುಪಡೆಯಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡಿದ್ದ ಶರ್ಮಾ, 2000ದ ಇಸವಿಯಲ್ಲಿ ಗುಜರಾತ್‌ನ ಗಾಂಧೀನಗರಕ್ಕೆ ವರ್ಗಾವಣೆಗೊಂಡು ಊರ್ಮಿಳಾ ಎಂಬುವರ ಜತೆ ಮದುವೆಯಾಗಿದ್ದರು.  ಪತ್ನಿ ಊರ್ಮಿಳಾ ಮತ್ತೂಬ್ಬನ ಜತೆಗೆ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ 2004ರಲ್ಲಿ ಆಕೆಯನ್ನು ಕೊಂದು ಪರಾರಿಯಾಗಿದ್ದ.

ಉತ್ತರ ಪ್ರದೇಶದ ಆಗ್ರಾದ ಗ್ರಾಮವೊಂದಕ್ಕೆ ಬಂದು ಸೇರಿ, ಮತ್ತೂಬ್ಬಳನ್ನೂ ವರಿಸಿದ್ದರು. ಗುಜರಾತ್‌ ಪೊಲೀಸರು ಬೆನ್ನು ಬಿದ್ದಿದ್ದ ಕಾರಣ ಫೋನ್‌ ನಂಬರ್‌, ಬ್ಯಾಂಕ್‌ ಖಾತೆಯನ್ನೂ ಆತ ಹೊಂದಿರಲಿಲ್ಲ. ಆದರೆ, ಪೊಲೀಸರು ಆತ ಆಗ್ರಾದಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿ ಕೋವಿಡ್‌ ಲಸಿಕೆ ಪಟ್ಟಿ ಪರಿಶೀಲಿಸಿದಾಗ ಶರ್ಮಾ ತನ್ನ 2ನೇ ಹೆಂಡತಿ ಪತಿಯ ಪೂರ್ಣ ಹೆಸರಿನೊಂದಿಗೆ ಲಸಿಕೆ ಪಡೆದಿದ್ದಳು. ಆ ಮಾಹಿತಿ ಆಧಾರದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next