ಬೆಂಗಳೂರು: ದೇಶದಲ್ಲಿ ಅತ್ಯಧಿಕ ಕೊರೊನಾ ಲಸಿಕೆ ವಿತರಣೆ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿದ್ದು, ಶೇ. 96.76 ಮಂದಿಗೆ ಪ್ರಥಮ ಹಾಗೂ ಶೇ. 75.25ರಷ್ಟು ಮಂದಿಗೆ ದ್ವಿತೀಯ ಡೋಸ್ ವಿತರಿಸಲಾಗಿದೆ. ಇದುವರೆಗೆ ರಾಜ್ಯಾದ್ಯಂತ 8.41 ಕೋಟಿ ಲಸಿಕೆ ವಿತರಿಸಲಾಗಿದೆ.
ರಾಜ್ಯದಲ್ಲಿ 7 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ, 8.90 ಲಕ್ಷ ಫ್ರಂಟ್ ಲೈನ್ ವರ್ಕರ್, 18ರಿಂದ 44ವರ್ಷದೊಳಗಿನ 2 ಕೋಟಿ ಮಂದಿ, 45 ವರ್ಷ ಮೇಲ್ಪಟ್ಟ 1.53 ಕೋಟಿ ಮಂದಿಗೆ ಎರಡನೇ ಡೋಸ್ ಪೂರ್ಣಗೊಳಿಸಲಾಗಿದೆ.
4.73 ಕೋಟಿ ಮೊದಲ ಹಾಗೂ 3.60 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ.
ಆಂಧ್ರಪ್ರದೇಶದಲ್ಲಿ 3.89 ಕೋಟಿ ಪ್ರಥಮ ಹಾಗೂ 2.80 ಕೋಟಿ ಎರಡನೇ ಡೋಸ್ ವಿತರಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಕರ್ನಾಟಕದ ಅನಂತರ ಸ್ಥಾನದಲ್ಲಿ ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ ಕ್ರಮವಾಗಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.