Advertisement
ಮನೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದಿದ್ದರೆ ಮಾತ್ರ ಮಕ್ಕಳಿಗೆ ಲಸಿಕೆ ಹಾಕಿಸಲಾಗುತ್ತಿದೆ. ಇಲ್ಲ ವಾದರೆ ಮಕ್ಕಳಿಗೆ ಲಸಿಕೆ ಹಾಕಿಯೂ ಪ್ರಯೋಜನವಿಲ್ಲ. ದೊಡ್ಡವರಿಂದ ಇತರರಿಗೂ ಸೋಂಕು ಹರಡಬಹುದು ಎಂಬುದು ಆರೋಗ್ಯ ಇಲಾಖೆ ಲೆಕ್ಕಾಚಾರ.
ಜಿಲ್ಲೆಯಲ್ಲಿ ಹಿಂದೆ 9 ಲಕ್ಷ ಜನರ ಪರಿಷ್ಕೃತ ಗುರಿಯಲ್ಲಿ ಶೇ. 101 ಸಾಧನೆಯಾದ ಬಳಿಕ ಈಗ 9.99 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಹಿಂದೆ ಇದ್ದ 10.2 ಲಕ್ಷ ಗುರಿಗೂ ಪರಿಷ್ಕೃತ ಗುರಿಗೂ ಬಹಳ ವ್ಯತ್ಯಾಸಗಳಿಲ್ಲ. ಹೀಗಾಗಿ ಇದುವರೆಗೆ ಮೊದಲ ಬಾರಿಯ ಲಸಿಕೆ ನೀಡಿದ ಸಾಧನೆ ಶೇ. 91.36 ಆಗಿದೆ. ಎರಡನೆಯ ಲಸಿಕೆ ಶೇ. 47 ಸಾಧನೆಯಾಗಿದೆ. ಮೊದಲ ಬಾರಿ ಪರಿಷ್ಕೃತಗೊಂಡಾಗ 2ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಮೊದಲಿನಂತೆ ಈಗಿನ ಪರಿಷ್ಕೃತ ಗುರಿಯಲ್ಲಿ 3ನೇ ಸ್ಥಾನದಲ್ಲಿದೆ.
Related Articles
Advertisement
15 ದಿನಗಳಿಂದ ಮೊದಲ ಡೋಸ್ ತೆಗೆದುಕೊಂಡವರಿಗಿಂತ 2ನೇ ಡೋಸ್ ತೆಗೆದುಕೊಂಡವರ ಸಂಖ್ಯೆ ಹೆಚ್ಚಿದೆ. ನವರಾತ್ರಿಯ 3 ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಆಯೋಜಿಸಿದ ವಿಶೇಷ ಲಸಿಕಾ ಅಭಿಯಾನದಲ್ಲಿ ಗುರಿ ಮೀರಿ ಸಾಧನೆ ಯಾಗಿದೆ. ಸೋಮವಾರ, ಮಂಗಳವಾರ ತಲಾ 7,000 ಹಾಗೂ ಬುಧವಾರ 12,000 ಲಸಿಕೆ ವಿತರಣೆಯಾಗಿದೆ. ಗುರುವಾರ, ಶುಕ್ರವಾರ ರಜೆ ಇದ್ದರೂ ಕೆಲವು ಲಸಿಕೆ ಕೇಂದ್ರಗಳು ಕಾರ್ಯಾಚರಿಸಿವೆ.