Advertisement

18+ ಮೇಲ್ಪಟ್ಟವರಿಗೆ ಇಂದಿನಿಂದ ಲಸಿಕೆ : ಪ್ರತೀ ಕೇಂದ್ರದಲ್ಲಿ ನಿತ್ಯ 100-150 ಮಂದಿಗೆ ಮಾತ್ರ

01:25 AM May 10, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ 18ರಿಂದ 44 ವಯಸ್ಸಿನ ವರಿಗೆ ಕೊರೊನಾ ಲಸಿಕೆ ನೀಡುವುದಾಗಿ ಸರಕಾರ ಘೋಷಿಸಿದೆ.

Advertisement

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ಈ ಮಾಹಿತಿ ನೀಡಿದ್ದಾರೆ. ಮೇ 10ರಿಂದ 18-44 ವರ್ಷದವರಿಗೆ ಲಸಿಕೆ ನೀಡಲಾಗುವುದು. ಜಿಲ್ಲೆಗಳಲ್ಲಿ ಆರಂಭಿಕವಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸರಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ನೀಡಲಾಗುವುದು. ಲಸಿಕೆ ಪೂರೈಕೆ ಹೆಚ್ಚಾಗು ತ್ತಿದ್ದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರ ಗಳಲ್ಲಿ ಆರಂಭಿಸ ಲಾಗುವುದು ಎಂದಿದ್ದಾರೆ.

ಈ ವಯೋಮಾನದವರಿಗೆ ಲಸಿಕೆ ವಿತರಿಸುವ ಎಲ್ಲ ಕೇಂದ್ರಗಳಲ್ಲಿ ಪ್ರತ್ಯೇಕ ಸ್ಥಳ ಗುರುತಿಸಲಾಗುವುದು. ಕೋವಿನ್‌ ಅಥವಾ ಆರೋಗ್ಯ ಸೇತು ಆ್ಯಪ್‌ ಮೂಲಕ ನೋಂದಣಿ ಮಾಡಿಸಿ, ಸಮಯ ನಿಗದಿ ಮಾಡಿಕೊಂಡಿರುವವರಿಗೆ ಮಾತ್ರ ನೀಡಲಾಗುವುದು. ನೋಂದಣಿ ಇಲ್ಲದೆ ನೇರವಾಗಿ ಬರುವವರಿಗೆ ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ 18-44 ವಯಸ್ಸಿನ 3.26 ಕೋಟಿ ಜನರಿದ್ದಾರೆ. 6.52 ಕೋಟಿ ಡೋಸ್‌ ಬೇಕಾಗಬಹುದು ಎಂದು ಅಂದಾ ಜಿಸಲಾಗಿದೆ. 2 ಕೋಟಿ ಕೊವಿಶೀಲ್ಡ್‌ ಮತ್ತು 1 ಕೋಟಿ ಕೊವ್ಯಾಕ್ಸಿನ್‌ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಸೀರಂನಿಂದ ಈವರೆಗೆ 6.5 ಲಕ್ಷ ಡೋಸ್‌ ಕೊವಿಶೀಲ್ಡ್‌ ಬಂದಿದೆ. ಇನ್ನಷ್ಟು ಲಸಿಕೆ ಮೇ 2 ಅಥವಾ 3ನೇ ವಾರ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಹೇಗೆ ವ್ಯವಸ್ಥೆ?
ರಾಜ್ಯದಲ್ಲಿ 18ರಿಂದ 44 ವರ್ಷದವರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಹಿರಿಯರಿಗೆ ಮೊದಲ ಮತ್ತು 2ನೇ ಡೋಸ್‌ ನಡೆಯುತ್ತಿರುವು ದರಿಂದ ಗೊಂದಲ ಆಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Advertisement

ಎಲ್ಲಿ , ಯಾವಾಗ ಲಭ್ಯ?
ಸೋಮವಾರ ಬೆಳಗ್ಗೆ 11ರಿಂದ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ಸರ ಕಾರಿ ವೈದ್ಯಕೀಯ ಕಾಲೇಜು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ.

ಲಸಿಕೆ ಎಷ್ಟಿದೆ?
ಸದ್ಯ 18- 44 ವರ್ಷದವರಿಗಾಗಿ 6.52 ಲಕ್ಷ ಡೋಸ್‌ ಲಸಿಕೆ ಲಭ್ಯವಿದೆ. ಹೀಗಾಗಿ ಪ್ರತೀ ಕೇಂದ್ರದಲ್ಲಿ ನಿತ್ಯ 100 ಅಥವಾ 150 ಮಂದಿಗೆ ಮಾತ್ರ ಲಸಿಕೆ ನೀಡ ಲಾಗುತ್ತದೆ. ದಾಸ್ತಾನು ಬಂದ ಬಳಿಕ ಪ್ರಾ. ಆ. ಕೇಂದ್ರ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿಯೂ ವಿತರಿಸಲಾಗುತ್ತದೆ. ಜತೆಗೆ ನಿತ್ಯ ನೀಡುವ ಪ್ರಮಾಣವನ್ನು ಹೆಚ್ಚಳ ಮಾಡ ಲಾಗು ತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಸಿಕೆ ಕೊರತೆ ಹಿನ್ನೆಲೆಯಲ್ಲಿ 18-44 ವರ್ಷದವರಿಗೆ ಮುಂದಿನ 7 ದಿನ ಮಾತ್ರ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಯಾವಾಗ ಸಮಯ ನಿಗದಿ?
ಈಗಾಗಲೇ ಕೋವಿನ್‌ ವೆಬ್‌ಸೈಟ್‌ನಲ್ಲಿ ನೋಂದಣಿಯಾದವರು, ಹೊಸದಾಗಿ ನೋಂದಣಿಯಾಗುವವರು ಮೇ 10ರ ಬೆಳಗ್ಗೆ 10 ಗಂಟೆಯ ಬಳಿಕ ಲಸಿಕೆ ಕೇಂದ್ರ ಮತ್ತು ಸಮಯ ನಿಗದಿಪಡಿಸಿಕೊಳ್ಳಬಹುದು. ಆಯಾ ದಿನ ಲಸಿಕೆ ಕೇಂದ್ರ ಆಯ್ಕೆ ಮಾಡಿ, ಅಂದೇ ಲಸಿಕೆ ಪಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next