Advertisement

ರಾಜ್ಯದ 5 ಜಿಲ್ಲೆಗಳಲ್ಲಿಂದು ಕೋವಿಡ್ ಲಸಿಕೆ ಡ್ರೈ ರನ್: ಹೇಗಿದೆ ಡ್ರೈ ರನ್ ಆರೋಗ್ಯ ಕೇಂದ್ರ?

10:03 AM Jan 02, 2021 | Team Udayavani |

ಬೆಂಗಳೂರು: ರಾಜ್ಯದ ಐದು ಜಿಲ್ಲೆಗಳ 16 ಆರೋಗ್ಯ ಕೇಂದ್ರಗಳಲ್ಲಿ ಶನಿವಾರ ಬೆಳಿಗ್ಗೆ ಕೊರೊನಾ ಲಸಿಕೆ ಡ್ರೈ ರನ್ ಗೆ (ಲಸಿಕೆ ವಿತರಣೆ ಅಣಕು) ಚಾಲನೆ ದೊರೆತಿದೆ.

Advertisement

ಶಿವಮೊಗ್ಗ, ಬೆಂಗಳೂರು, ಕಲಬುರಗಿ, ಬೆಳಗಾವಿ ಹಾಗೂ ಮೈಸೂರಿನ ವಿವಿಧ ತಲಾ ಒಂದು ಪ್ರಾಥಮಿಕ ಆರೋಗ್ಯ ಕೆಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಅಥವಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ನಡೆಯುತ್ತಿದೆ.

ಈ ಆರೋಗ್ಯ ಕೇಂದ್ರಗಳನ್ನು ಅರ್ಧ ದಿನದ ಮಟ್ಟಿಗೆ ಡ್ರೈ ರನ್ ಗೆ ಮೀಸಲಿಡಲಾಗಿದ್ದು, ಕೆಂದ್ರಗಳ ಮುಂಭಾಗ ಲಸಿಕೆ ಅಣಕು ಕುರಿತಾದ ಮಾಹಿತಿ ಫಲಕ, ಬ್ಯಾನರ್ ಹಾಕಲಾಗಿದೆ. ಬೆಳಿಗ್ಗೆ 9 ರಿಂದ 11 ಗಂಟೆಗೆವರೆಗೂ ನಡೆಯಲಿದೆ.

ಶುಕ್ರವಾರ ಕೇಂದ್ರ ಸರ್ಕಾರದಿಂದ ಆನ್ ಲೈನ್ ತರಬೇತಿ ಪಡೆದಿರುವ ಆರೋಗ್ಯ ಕೇಂದ್ರಗಳ ಸಿಬ್ಬಂದಿ ತಮಗೆ ನಿಯೋಜಿಸಿರುವ ಸ್ಥಳಗಳಲ್ಲಿ ಕುಳಿತು, ಕಾರ್ಯಾರಂಭಿಸಿದ್ದಾರೆ.

Advertisement

ಇದನ್ನೂ ಓದಿ:ಸ್ತ್ರೀರೋಗ ತಜ್ಞೆ ಪದ್ಮಿನಿ ಪ್ರಸಾದ್‌ ಹೆಸರಿನಲ್ಲಿ ವಂಚನೆ: ಮೋಸ ಹೋದ ಹಲವು ಮಹಿಳೆಯರು

ಹೇಗಿದೆ ಲಸಿಕೆ ಡ್ರೈ ರನ್ ಆರೋಗ್ಯ ಕೇಂದ್ರ?

ಆರೋಗ್ಯ ಕೇಂದ್ರದಲ್ಲಿ ನಾಲ್ಕು ಕೊಠಡಿಗಳಿರಲಿವೆ. ಒಂದನೇ ಕೊಠಡಿಯಲ್ಲಿ ಫಲಾನುಭವಿಗಳ ಮಾಹಿತಿ ಸಂಗ್ರಹ/ ದಾಖಲೆ ಪರಿಶೀಲನೆ ವಿಚಾರಣೆ ನಡೆಯುತ್ತಿದೆ.  ಎರಡನೇಯ ಕೊಠಡಿಯಲ್ಲಿ ಆರೋಗ್ಯ ತಪಾಸಣೆ ಆ ನಂತರ ಲಸಿಕೆ ಪಡೆಯಲು ಸರತಿ ಟೋಕನ್ ನೀಡಲಾಗುತ್ತಿದೆ. ಮೂರನೆಯ ಕೊಠಡಿಯು ಲಸಿಕೆ/ ಚುಚ್ಚು ಮದ್ದಿನ ಕೊಠಡಿಯಾಗಿದ್ದು, ಅಣಕು ಆಗಿರುವುದರಿಂದ ಲಸಿಕೆ ನೀಡುತ್ತಿಲ್ಲ. ನಾಲ್ಕನೆ ಕೊಠಡಿಯು ವಿಶ್ರಾಂತಿಗೆ / ಅವಲೋಕನ ಮಾಡಲಾಗುತ್ತದೆ.‌ ಇಲ್ಲಿ ಲಸಿಕೆ ಪಡೆದ ಬಳಿಕೆ ಯಾವುದೇ ಅಡ್ಡ ಪರಿಣಾಮ ಕಾಣಿಸಿಕೊಂಡರೆ (ತಲೆ ಸುತ್ತು, ಮೈ ತುರಿಕೆ) ಅವರಿಗೆ ತುರ್ತು ಚಿಕಿತ್ಸೆಗೆಂದು ಮೀಸಲಿಡಲಾಗಿದೆ.

ಕೇಂದ್ರ ಒಂದಕ್ಕೆ ಆರೋಗ್ಯ ಇಲಾಖೆ ನಿಗದಿ ಪಡಿಸಿರುವ 25 ಫಲಾನುಭವಿಗಳು ತಮಗೆ ಬಂದಿರುವ ಮೊಬೈಲ್ ಸಂದೇಶವನ್ನು ತೋರಿಸಿ ಕೇಂದ್ರ ಪ್ರವೇಶಿಸಿ ಪ್ರತಿ ಕೊಠಡಿಗೆ ಭೇಟಿ ಹಿಂದಿರುಗುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಕಾಮಾಕ್ಷಿ ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ.

ಪ್ರತಿ ಕೇಂದ್ರಕ್ಕೆ ಐದು ಸಿಬ್ಬಂದಿ ಇದ್ದಾರೆ. ಫಲಾನುವಿಗಳ ಮಾಹಿತಿ ಪಟ್ಟಿ, ದಾಖಲಾತಿ ಪರಿಶೀಲನೆಗೆ ಅಗತ್ಯ ತಾಂತ್ರಿಕ ಸಾಧನಗಳು, ಲಸಿಕೆ ಸಂಗ್ರಹ ಶೀತಲೀಕರಣ ಪಟ್ಟಿಗೆಗಳು (ಐಎಲ್ ಆರ್) ಕೇಂದ್ರದಲ್ಲಿವೆ.

ಈ ಡ್ರೈ ರನ್ ನಲ್ಲಿ ಚುಚ್ಚು ಮದ್ದು (ಲಸಿಕೆ) ನೀಡುವುದೊಂದನ್ನು ಬಿಟ್ಟು ಬಾಕಿ ಎಲ್ಲಾ ಚಟುವಟಿಕೆಗಳು ನಡೆಯಲಿವೆ ಎಂದು ಆರೋಗ್ಯ ಕೇಂದ್ರ ಸಿಬ್ಬಂದಿ ತಿಳಿಸಿದರು.

ಒಟ್ಟಾರೆ 16 ಆರೋಗ್ಯದ ಕೇಂದ್ರದಲ್ಲಿ 100 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ, 375 ಫಲನಾನುಭವಿಗಳು (ಆರೋಗ್ಯ ಇಲಾಖೆ ನಿಯೋಜಿಸಿರುವ ಕಾರ್ಯಕರ್ತರು) ಭಾಗವಹಿಸುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next