ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗ ವಾಗಿ ನಡೆಯುತ್ತಿದ್ದು, ಈವರೆಗೆ ಅರ್ಧಕೋಟಿ ಡೋಸ್ ನೀಡಲಾಗಿದೆ. ಆರೋಗ್ಯ ಕಾರ್ಯರ್ತರು 5.7 ಲಕ್ಷ, ಮುಂಚೂಣಿ ಕಾರ್ಯಕರ್ತರು 2.52 ಲಕ್ಷ, 60 ವರ್ಷ ಮೇಲ್ಪಟ್ಟವರು 24.5 ಲಕ್ಷ, 45ರಿಂದ 59 ವರ್ಷದವರು 12.5 ಲಕ್ಷ ಸೇರಿ ಒಟ್ಟಾರೆ ಈವರೆಗೂ 45 ಲಕ್ಷ ಮಂದಿಗೆ ಮೊದಲ ಡೋಸ್ ನೀಡಿದೆ. ಈ ಪೈಕಿ ಐದು ಲಕ್ಷ ಮಂದಿ ಈಗಾಗಲೇ 2ನೇ ಡೋಸ್ ಪಡೆದಿದ್ದಾರೆ. ಒಟ್ಟಾರೆ 50 ಲಕ್ಷ ಡೋಸ್ ಪೂರ್ಣಗೊಂಡಿವೆ. ಸದ್ಯ ಲಸಿಕೆ ಅಭಿಯಾನ ಆರಂಭವಾಗಿ 82 ದಿನಗಳಾಗಿವೆ ಎಂದು ಸಚಿವ ಡಾ| ಕೆ. ಸುಧಾಕರ್ ತಿಳಿಸಿದ್ದಾರೆ.
ಚಿತ್ರಮಂದಿರ: ಇಂದಿನಿಂದ ಶೇ. 50ರ ಆಸನ ಮಿತಿ
ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಆಸನ ಭರ್ತಿ ಅವಕಾಶದ ಗಡುವು ಬುಧ ವಾರ ಮುಗಿದಿದ್ದು, ಗುರುವಾರ ದಿಂದ ಶೇ.50ರ ಮಿತಿ ಜಾರಿಯಾಗಲಿದೆ ಎಂದು ಸಚಿವ ಡಾ| ಕೆ. ಸುಧಾಕರ್ ತಿಳಿಸಿದ್ದಾರೆ. ಎ. 7ರ ವರೆಗೆ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿತ್ತು. ಮುಂದೆ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.