Advertisement

ಬೆಳಗಾವಿ ಜೀವನರೇಖಾ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಲಸಿಕೆ ಟ್ರಯಲ್

02:11 PM May 20, 2021 | Team Udayavani |

ಬೆಳಗಾವಿ: ಕೋವಿಡ್ ನಿಯಂತ್ರಣ ಸಂಬಂಧ ಕೋವ್ಯಾಕ್ಸಿನ್ ಲಸಿಕಾ ಪ್ರಯೋಗದಲ್ಲಿ ಭಾಗಿಯಾಗಿದ್ದ ಬೆಳಗಾವಿಯ ಜೀವನರೇಖಾ ಆಸ್ಪತ್ರೆ ಈಗ ಮತ್ತೊಂದು ಮಹತ್ವದ ಸಾಧನೆಯತ್ತ ಹೆಜ್ಜೆ ಇಟ್ಟಿದ್ದು ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗದಲ್ಲಿ ಭಾಗಿಯಾಗಿದೆ‌.

Advertisement

ಝೈಡಸ್ ಕ್ಯಾಡಿಲಾ ಕಂಪನಿಯು ಅಭಿವೃದ್ಧಿ ಪಡಿಸುತ್ತಿರುವ ಕೋವಿಡ್ ಲಸಿಕೆ ಝೈಕೋವ್-ಡಿ-3 ಹಂತದ ಕ್ಲಿನಿಕಲ್ ಟ್ರಯಲ್ಸದಲ್ಲಿ 12 ರಿಂದ 18 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಸಿದ್ದು ಅದರಲ್ಲಿ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆ ಸಹ ಭಾಗಿಯಾಗಿದೆ.

ಈ ಕ್ಲಿನಿಕಲ್ ಟ್ರಯಲ್ಸಗೆ ಬೆಳಗಾವಿಯ ತಲಾ 10 ಬಾಲಕ ಹಾಗೂ ಬಾಲಕಿಯರನ್ನು ಸ್ವಯಂ ಸೇವಕರನ್ನಾಗಿ ಆಯ್ಕೆ ಮಾಡಲಾಗಿದ್ದು ಅವರಿಗೆ ಈಗಾಗಲೇ ಮೊದಲ ಡೋಸ್ ನೀಡಲಾಗಿದೆ. ಯಾರಿಗೂ ಇದರಿಂದ ಅಡ್ಡಪರಿಣಾಮಗಳಾಗಿಲ್ಲ ಎಂದು ಜೀವನರೇಖಾ ಆಸ್ಪತ್ರೆಯ ನಿರ್ದೇಶಕ ಡಾ ಅಮಿತ್ ಭಾತೆ ‘ಉದಯವಾಣಿ’ ಗೆ ಹೇಳಿದರು.

ಇದನ್ನೂ ಓದಿ:ಹಣಕ್ಕಾಗಿ ಕೋವಿಡ್ ಟೆಸ್ಟ್ ನಕಲಿ ವರದಿ: ಬೆಂಗಳೂರಿನಲ್ಲಿ ವೈದ್ಯರು ಸೇರಿ ಆರು ಜನರು ವಶಕ್ಕೆ

ಈ ಮಕ್ಕಳಿಗೆ ಮೂರು ಡೋಸ್ ಗಳನ್ನು ನೀಡಲಾಗುತ್ತದೆ. ಮೊದಲ ಡೋಸ್ ಬಳಿಕ 28 ನೇ ದಿನಕ್ಕೆ ಎರಡನೇ ಹಾಗೂ 52ನೇ ದಿನಕ್ಕೆ ಮೂರನೇ ಡೋಸ್ ನೀಡಲಾಗುತ್ತದೆ. ಪ್ರತಿ ಡೋಸ್ ಪಡೆದ ನಂತರ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಪರೀಕ್ಷಿಸಲು ರಕ್ತದ ಮಾದರಿಯನ್ನು ಸಂಗ್ರಹಿಸಲಾಗುವದು ಎಂದು ಡಾ ಅಮಿತ್ ಹೇಳಿದರು.

Advertisement

ದೇಶದ 120 ಕಡೆಗಳಲ್ಲಿ ಈ ರೀತಿಯ ಕ್ಲಿನಿಕಲ್ ಟ್ರಯಲ್ಸ್ ಗಳು ನಡೆದಿವೆ. ಇದರಲ್ಲಿ ಕರ್ನಾಟಕದ 1500 ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದಾರೆ.     ಇದಲ್ಲದೆ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ನಡೆಸಲು ಉದ್ದೇಶಿಸಲಾಗಿದ್ದು ಅದರಲ್ಲೂ ಸಹ ಜೀವನ ರೇಖಾ ಆಸ್ಪತ್ರೆ ಭಾಗಿಯಾಗಲಿದೆ ಎಂದು ಡಾ ಅಮಿತ್ ಭಾತೆ ‘ಉದಯವಾಣಿ’ಗೆ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next