Advertisement

18ವರ್ಷ ಮೇಲ್ಪಟ್ಟವರಿಗೆ ಕರಾವಳಿಯಲ್ಲಿ ಲಸಿಕಾ ಅಭಿಯಾನ: SMS ಬಂದವರಿಗೆ ಮಾತ್ರ ಲಸಿಕೆಗೆ ಅವಕಾಶ

02:48 AM May 10, 2021 | Team Udayavani |

ಉಡುಪಿ ಜಿಲ್ಲೆ: ಇಂದು
ಉಡುಪಿ: ಜಿಲ್ಲೆಯಲ್ಲಿ ಸೋಮವಾರ18 ಪ್ಲಸ್‌ ವರ್ಷದವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಆರಂಭಗೊಳ್ಳಲಿದೆ.

Advertisement

ಈಗಾಗಲೇ ನೋಂದಣಿ ಮಾಡಿಕೊಂಡು ಸ್ಲಾಟ್‌ ಖಾತರಿ ಆಗಿರುವವರಿಗೆ ಮಾತ್ರ ಲಸಿಕೆ ನೀಡಲಾಗುವುದು. ಉಡುಪಿ ಜಿಲ್ಲಾಸ್ಪತ್ರೆ, ಸೈಂಟ್‌ ಸಿಸಿಲಿಸ್‌ ಶಾಲೆ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಲಸಿಕೆಗೆ ಈಗಾಗಲೇ ನೋಂದಣಿ ಮಾಡಿಕೊಂಡವರಲ್ಲಿ ಲಸಿಕೆ ಪಡೆಯಲು ಸಂದೇಶ ಬಂದಲ್ಲಿ ಮಾತ್ರ ಅವರು ಸಂಬಂಧಪಟ್ಟ ಲಸಿಕಾ ಕೇಂದ್ರಕ್ಕೆ ಸೋಮವಾರ ಅಪರಾಹ್ನ 2 ಗಂಟೆಗೆ ಬರಬೇಕು. ಯಾವುದೇ ಕಾರಣಕ್ಕೂ ಸ್ಥಳದಲ್ಲಿ ನೋಂದಣಿ ಇರುವುದಿಲ್ಲ.
ಒಟ್ಟು 4,500 ಡೋಸ್‌ ಲಸಿಕೆ ಸೋಮವಾರ ಬರಲಿದ್ದು ಪ್ರತಿ ಕೇಂದ್ರದಲ್ಲಿ ಪ್ರತಿ ದಿನ 150 ಡೋಸ್‌ನಂತೆ 7ದಿನಗಳ ಕಾಲ ಒಟ್ಟು 4,200 ಡೋಸ್‌ ವಿತರಿಸಲಾಗುತ್ತದೆ.

**

ದ.ಕ. : ನಾಳೆಯಿಂದ
ಮಂಗಳೂರು: ಜಿಲ್ಲೆಯ 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಅಭಿಯಾನ ಮಂಗಳವಾರದಿಂದ ಆರಂಭಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ.

Advertisement

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ವೆನ್ಲಾಕ್ ಜಿಲ್ಲಾಸ್ಪತ್ರೆ ಮತ್ತು ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸೋಮವಾರ ಜಿಲ್ಲೆಗೆ ಕೊವಿಶೀಲ್ಡ್‌ ಲಸಿಕೆ ಬರಲಿದ್ದು, ವೆನ್ಲಾಕ್ ಜಿಲ್ಲಾಸ್ಪತ್ರೆ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಲಸಿಕಾ ಕೇಂದ್ರಗಳಲ್ಲಿ ದಿನಕ್ಕೆ 150 ರಿಂದ 170 ಮಂದಿಗೆ ಮಾತ್ರ ಲಸಿಕೆ ಪಡೆದುಕೊಳ್ಳಲು ಅವಕಾಶ ಇರುತ್ತದೆ. 2ನೇ ಹಂತದಲ್ಲಿ ಲಸಿಕೆ ಪಡೆದುಕೊಳ್ಳುವ 45 ರಿಂದ 60 ವರ್ಷ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡಲಾಗುತ್ತದೆ. ಅವರು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ಆದರೆ ಮೊದಲ ಡೋಸ್‌ ಪಡೆದುಕೊಳ್ಳಲು ಅವಕಾಶ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next